#Two useful #schemes # Modi government # women
ನವದೆಹಲಿ: ಕೇಂದ್ರ ಸರ್ಕಾರದದಲ್ಲಿ ಹಲವು ಯೋಜನೆಗಳಿವೆ. ಇವುಗಳ ಪ್ರಯೋಜನಗಳು ನೇರವಾಗಿ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತವೆ. ದೇಶದಲ್ಲಿ ಮಹಿಳಾ ಸಬಲೀಕರಣ ಕೇಂದ್ರದ ಮುಖ್ಯ ಉದ್ದೇಶವಾಗಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ವಿವಿಧ ರೀತಿಯ ಯೋಜನೆಯನ್ನು ಮಹಿಳೆಯರಿಗಾಗಿ ಪರಿಚಯಿಸುತ್ತಿದೆ. ಮಹಿಳೆಯರು ಕೇಂದ್ರ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹುದು. ಇನ್ನು ಮಹಿಳೆಯರು ತಮ್ಮ ಭವಿಷ್ಯದ ಆರ್ಥಿಕ ಭದ್ರತೆಗಾಗಿ ವಿವಿಧ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಯನ್ನು ಆರಂಭಿಸುತ್ತಿದ್ದಾರೆ. ಅದರಲ್ಲೂ ಮೋದಿ ಸರ್ಕಾರದ ಈ ಎರಡು ಯೋಜನೆಗಳು ಮಹಿಳೆಯರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದೆ ಎನ್ನಬಹುದು.
ನಿರ್ಮಲಾ ಸೀತಾರಾಮನ್ ಅವರು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (ಎಂಎಸ್‌ಎಸ್‌ಸಿ) ಹೆಸರಿನ ವಿಶೇಷ ಉಳಿತಾಯ ಯೋಜನೆಯನ್ನು ಪ್ರಾರಂಭಿಸಿದರು.ಈ ಎರಡೂ ಯೋಜನೆಗಳಲ್ಲಿ ಸರ್ಕಾರವು ಹೂಡಿಕೆಯ ಮೇಲೆ ಬಡ್ಡಿಯನ್ನು ನೀಡುತ್ತದೆ.ಹೂಡಿಕೆಗಳಿಗೆ 8 % ಬಡ್ಡಿ ನೀಡುತ್ತಿದೆ ಮೋದಿ ಸರ್ಕಾರ ಇನ್ನು ಕೇಂದ್ರದ ಮೋದಿ ಸರ್ಕಾರ ವಿಶೇಷವಾಗಿ ಮಹಿಳೆಯರಿಗೆಂದು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ, ಅನ್ನು ಆರಂಭಿಸಿದೆ. ಕೇಂದ್ರದ ಈ ಎರಡು ಯೋಜನೆಗಳಲ್ಲಿ ಲಕ್ಷಾಂತರ ಮಹಿಳೆಯರು ಹೂಡಿಕೆಯನ್ನು ಆರಂಭಿಸಿದ್ದಾರೆ. ಬಡ್ಡಿದರವನ್ನು ನೀಡುವುದರ ಜೊತೆಗೆ ಹೆಚ್ಚಿನ ಸೌಲಭ್ಯವನ್ನು ಮಾಡಿಕೊಟ್ಟಿದೆ. ಮೋದಿ ಸರ್ಕಾರ SSY ಹಾಗೂ MSSC ಯೋಜನೆಗಳ ಬಗ್ಗೆ ವಿವರ ತಿಳಿಯೋಣ.
ಸುಕನ್ಯಾ ಸಮೃದ್ಧಿ ಯೋಜನೆ(Sukanya Samriddhi Yojana Scheme);
ನರೇಂದ್ರ ಮೋದಿ ಸರಕಾರ ತನ್ನ ಮೊದಲ ಅವಧಿಯಲ್ಲಿ ಈ ಯೋಜನೆಯನ್ನು ಆರಂಭಿಸಿತ್ತು.ಆರ್ಥಿಕ ಭದ್ರತೆ ಒದಗಿಸಲು ಕೇಂದ್ರ ಹಲವು ರೀತಿಯ ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಮುಖ ಯೋಜನೆ ಸುಕನ್ಯಾ ಸಮೃದ್ಧಿ ಯೋಜನೆ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆ ಅಗತ್ಯಗಳನ್ನು ಈ ಯೋಜನೆಯಲ್ಲಿ ನಮೂದಿಸಬಹುದು.ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರವು 8 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಿದೆ.ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಮಗುವಿನ ವಯಸ್ಸು 10 ವರ್ಷವಾಗಿರಬೇಕು. ಮೋದಿ ಸರ್ಕಾರ ತನ್ನ ಮೊದಲ ಅವಧಿಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದೆ, ಇದರಲ್ಲಿ ಕನಿಷ್ಠ 250 ರೂ.ಗಳಿಂದ ಗರಿಷ್ಠ 1.50 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು.ಈ ಖಾತೆಯನ್ನು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ತೆರೆಯಬಹುದು.ಪ್ರತಿ ತಿಂಗಳು ಸತತವಾಗಿ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಹಣ ಕೂಡಿಡಬಹುದು. 21 ವರ್ಷಗಳ ದೀರ್ಘ ಲಾಕ್-ಇನ್ ಅವಧಿಯೊಂದಿಗೆ ಈ ಯೋಜನೆಗೆ ಸೇರಿಕೊಳ್ಳಿ ಮತ್ತು ನೀವು ದೊಡ್ಡ ಮೊತ್ತದ ಹಣವನ್ನು ಪಡೆಯುತ್ತೀರಿ
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ(Mahila Samman Savings Certificate)
ಕೇಂದ್ರವು ಪರಿಚಯಿಸುತ್ತಿರುವ ಹೊಸ ಯೋಜನೆಯ ಹೆಸರು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು ಮೋದಿ ಸರ್ಕಾರ ಈ ಯೋಜನೆಯನ್ನು ತಂದಿದೆ.ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲಾಗುತ್ತದೆ.ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರಕ್ಕೆ ಸೇರಲು ಬಯಸುವವರು ರೂ.2 ಲಕ್ಷದವರೆಗೆ ಉಳಿಸಬಹುದು. ಈ ಯೋಜನೆಯ ಅವಧಿಯು ಕೇವಲ 2 ವರ್ಷಗಳು. 7.5 ರಷ್ಟು ಬಡ್ಡಿಯನ್ನು ಈ ಯೋಜನೆಯಲ್ಲಿ ಪಡೆಯಬಹುದು,7.5 ರ ಬಡ್ಡಿ ದರದ ಪ್ರಕಾರ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ರೂ. 2 ಲಕ್ಷ ಹೂಡಿಕೆ ಮಾಡಿದರೆ ವರ್ಷಕ್ಕೆ ರೂ. 15,427 ಲಭ್ಯವಿರುತ್ತದೆ. ಎರಡು ವರ್ಷಕ್ಕೆ ರೂ. 32,044 ಬರಲಿದೆ. ಅಂದರೆ 2 ಲಕ್ಷ ಹೂಡಿಕೆಯ ಮೇಲೆ ರೂ. 32 ಸಾವಿರಕ್ಕಿಂತ ಹೆಚ್ಚು ಪಡೆಯಬಹುದು.