26.7 C
Bengaluru
Sunday, December 22, 2024

ತುಮಕೂರು KPTCL ಚೀಫ್ ಎಂಜಿನಿಯರ್ ಲೋಕಾಯುಕ್ತ ಬಲೆಗೆ

#tumkur #KPTCL #Chiefengineer #powerline #bribe

ತುಮಕೂರು : 1ಲಕ್ಷ ರು ಲಂಚ ಪಡೆಯುವ ವೇಳೆ KPTCL ಚೀಫ್ ಎಂಜಿನಿಯರ್ ವೊಬ್ಬರು ತುಮಕೂರಿನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಸಿಇ ನಾಗರಾಜನ್ ಪವರ್ ಲೈನ್ ಎಳೆಯಲು ಅನುಮತಿಗಾಗಿ ಕಂಟ್ರಾಕ್ಟರ್ ಗೆ 1 ಲಕ್ಷ ಲಂಚ ಬೇಡಿಕೆ ಇಟ್ಟಿದ್ದರು.ಆಗಸ್ಟ್ 4 ರಂದು 50 ಸಾವಿರ ರೂ. ಪಡೆದಿದ್ದರು . ಇಂದು ಮತ್ತೆ 50 ಸಾವಿರ ಲಂಚ ಪಡೆಯುವಾಗ ತುಮಕೂರಿನ ಬಿ. ಎಚ್. ರಸ್ತೆಯ KPTCL ಕಛೇರಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ತುಮಕೂರು ಲೋಕಾಯುಕ್ತ ಎಸ್ಪಿ ಬಾಷಾ ನೇತೃತ್ವದಲ್ಲಿ ದಾಳಿ ಮಾಡಿದ್ದು, ಆರೋಪಿ ಚೀಫ್ ಎಂಜಿನಿಯರ್ ನಾಗರಾಜನ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ತುಮಕೂರು ಲೋಕಾಯುಕ್ತ ಕಛೇರಿಯಲ್ಲಿ ಪ್ರಕರಣ ದಾಖಲಾಗಿದೆ.

Related News

spot_img

Revenue Alerts

spot_img

News

spot_img