21.1 C
Bengaluru
Monday, December 23, 2024

ಮನೆಯಲ್ಲಿಯೇ ಕೈದೋಟ ಮಾಡಿ: ತಾಜಾ ತರಕಾರಿ, ಸೊಪ್ಪು ರುಚಿ ನೋಡಿ!

‘ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿ’ ಎಂಬುದು ಗಾದೆ ಮಾತು. ಮನೆಯ ಯಜಮಾನಿ ಗಂಡ, ಮಕ್ಕಳು ಹೀಗೆ ಮನೆಯ ಎಲ್ಲಾ ಸದಸ್ಯರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ರುಚಿಕಟ್ಟಾಗಿ ಅಡುಗೆ ಮಾಡಿ ಬಡಿಸುತ್ತಾಳೆ. ಈಗೀಗ ನಗರ ಪ್ರದೇಶದ ಹೆಣ್ಣುಮಕ್ಕಳು ಮನೆಯ ಸಣ್ಣ ಜಾಗ, ತಾರಸಿ ಹೀಗೆ ಲಭ್ಯವಿರುವ ಸಣ್ಣ ಜಾಗದಲ್ಲಿ ಕೈತೋಟ ಮಾಡಿ ಸಣ್ಣಪುಟ್ಟ ದಿನಬಳಕೆಯ ತರಕಾರಿ, ಸೊಪ್ಪುಗಳನ್ನು ಸಾವಯವವಾಗಿ ಬೆಳೆಸುತ್ತಿದ್ದಾರೆ. ರಾಸಾಯನಿಕ ಮುಕ್ತವಾದ ಇದು ಆರೋಗ್ಯಕ್ಕೂ ಉತ್ತಮ ಹಾಗೆಯೇ ಸುತ್ತಲೂ ಹಸಿರು ವಾತಾವರಣದಿಂದ ಮನಸ್ಸನ್ನು ಮುದಗೊಳಿಸುತ್ತದೆ.

ನಗರ ಪ್ರದೇಶದಲ್ಲಿ ಹಲವು ಅಮ್ಮಂದಿರು ಕೊರೊನಾ ಲಾಕ್‌ಡೌನ್‌ ಕಾಲದಲ್ಲಿ ಕೈತೋಟ ಆರಂಭಿಸಿದವರು. ಮನೆಯಿಂದ ಹೊರಗೆ ಕಾಲಿಡಲಾಗದ ಕಾಲದಲ್ಲಿ ತಮ್ಮ ಮನೆ ಅಗತ್ಯಕ್ಕೆ ತಕ್ಕಷ್ಟು ಸೊಪ್ಪು, ತರಕಾರಿಗಳನ್ನು ಬೆಳೆಯಲು ಆರಂಭಿಸಿದರು. ಬಳಿಕ ಅದೇ ಅವರಿಗೆ ಹವ್ಯಾಸವಾಯಿತು.

ತಾರಸಿ ಅಥವಾ ಕಿಚನ್‌ ಗಾರ್ಡನ್‌ನಲ್ಲಿ ಕರಿಬೇವು, ನಿಂಬೆ, ಮೆಂತೆ, ಕೊತ್ತಂಬರಿಗಳಂತಹ ಸೊಪ್ಪುಗಳು, ಕ್ಯಾರೆಟ್‌, ಬೀಟ್‌ರೂಟ್‌, ಸೌತೆಕಾಯಿ, ಟೊಮೆಟೊಗಳಂತಹ ತರಕಾರಿಗಳನ್ನು ಬೆಳೆಸಬಹುದು. ಈ ಸೊಪ್ಪು, ತರಕಾರಿಗಳಿಂದ ಮಾಡಿದ ಬಗೆ ಬಗೆ ಭಕ್ಷ್ಯಗಳನ್ನು ತಯಾರಿಸಿ, ಕುಟುಂಬ ಸದಸ್ಯರಿಗೆ ಉಣಬಡಿಸಬಹುದು.

ಕೈತೋಟಕ್ಕೆ ಕೆಲ ಸಲಹೆಗಳು
1. ಸರಿಯಾದ ಸ್ಥಳದ ಆಯ್ಕೆ: ಬಾಲ್ಕನಿ ಅಥವಾ ಕಿಟಕಿ ಬದಿಯ ಸ್ವಲ್ಪ ವಿಸ್ತಾರವಾದ ಜಾಗ ಕೈತೋಟಕ್ಕೆ ಉತ್ತಮ. ಸರಿಯಾಗಿ ಬಿಸಿಲು ಬೀಳುವುದು ಮುಖ್ಯ. ಒಂದು ವೇಳೆ ಕಡಿಮೆ ಜಾಗವಿದ್ದರೆ ವರ್ಟಿಕಲ್‌ ಗಾರ್ಡನಿಂಗ್‌ ಮಾಡಬಹುದು. ಕಿಟಕಿಯ ಸರಳುಗಳಿಗೆ ಮಡಕೆ ಅಥವಾ ಪ್ಲಾಸ್ಟಿಕ್‌ ಡಬ್ಬಗಳನ್ನು ನೇತು ಹಾಕಿ ಅದರಲ್ಲಿ ಗಿಡ ನೆಡಬಹುದು. ಆದರೆ ನೀರು ಹಾಕಿದಾಗ ಮಡಕೆಗಳು ಭಾರವಾಗುವುದರಿಂದ ಕಿಟಕಿ ಸರಳುಗಳು ಭಾರ ತಡೆಯಬಲ್ಲವೇ ಎಂದು ಪರೀಕ್ಷಿಸಿಕೊಳ್ಳಬೇಕು. ತಾರಸಿ ಮೇಲೆ ಪಾಟ್‌ಗಳನ್ನು ಜೋಡಿಸಿ ಅದರಲ್ಲಿ ಗಿಡಗಳನ್ನು ನೆಡಬಹುದು.

2. ಗುಣಮಟ್ಟದ ಮಣ್ಣು: ಪೇಟೆ ಪ್ರದೇಶಗಳಲ್ಲಿ ನರ್ಸರಿಗಳಲ್ಲಿ ಗುಣಮಟ್ಟದ ಮಣ್ಣು ಮಾರಾಟ ಮಾಡುತ್ತಾರೆ. ಸಾವಯವ ಉತ್ಪನ್ನಕ್ಕಾಗಿ ಸಸ್ಯಗಳಿಗೆ ಕಾಂಪೋಸ್ಟ್‌ ಅಥವಾ ಎರೆಹುಳಗಳಿರುವ ಕಾಂಪೋಸ್ಟ್‌ ಗೊಬ್ಬರ ಬಳಕೆ ಮಾಡುವುದು ಉತ್ತಮ. ಮನೆಯಲ್ಲಿನ ಹಸಿ ತ್ಯಾಜ್ಯಗಳಿಂದ ಕಾಂಪೋಸ್ಟ್‌ ಮಾಡಿ ಬಳಸಬಹುದು

3. ಸರಿಯಾದ ಕ್ರಮದಲ್ಲಿ ನೀರು ಪೂರೈಕೆ: ತರಕಾರಿಗಳಿಗೆ ದಿನಾ ನೀರು ಹಾಕಬೇಕು. ಆದರೆ ಹೆಚ್ಚು ನೀರು ಮಣ್ಣನ್ನು ಹಾಳು ಮಾಡಬಹುದು ಹಾಗೂ ಅದರಲ್ಲಿನ ಪೋಷಕಾಂಶಗಳನ್ನು ತೆಗೆದುಹಾಕಬಹುದು. ಕಿಚನ್‌ ಗಾರ್ಡನ್‌ಗೆ ನೀರು ಚಿಮುಕಿಸುವ ಬಾಟಲಿಗಳ ಮೂಲಕ ನೀರು ಹಾಕುವುದು ಉತ್ತಮ. ಸಸ್ಯಗಳು ಬೇಕಾದಷ್ಟು ನೀರನ್ನು ಪಡೆಯುತ್ತಿದ್ದವೆ ಎಂದು ಖಚಿತಪಡಿಸಿಕೊಳ್ಳಲು, ಬೆರಳುಗಳಿಂದ ಮಣ್ಣಿನ ತೇವಾಂಶದ ಮಟ್ಟವನ್ನು ಪರೀಕ್ಷಿಸಿ, ಅವಶ್ಯಕತೆಗೆ ಅನುಗುಣವಾಗಿ ನೀರು ಹಾಕಬೇಕು.

4. ಮಿಶ್ರ ಹಾಗೂ ಸುಲಭ ಆರೈಕೆಯ ಗಿಡಗಳ ಆಯ್ಕೆ: ಕಿಚನ್‌ ಗಾರ್ಡನ್‌ನಲ್ಲಿ ಮಿಶ್ರ ಸೊಪ್ಪು, ತರಕಾರಿಗಳನ್ನು ಬೆಳೆಯಬಹುದು. ಕ್ಯಾಪ್ಸಿಕಂ, ಟೊಮೆಟೊ, ಪುದೀನಾ, ಮೆಂತೆ, ಕೊತ್ತಂಬರಿಯಂತಹ ಕಡಿಮೆ ಆರೈಕೆ ಬೇಡುವ ಗಿಡಗಳನ್ನು ಬೆಳೆಸಬಹುದು.

Related News

spot_img

Revenue Alerts

spot_img

News

spot_img