25 C
Bengaluru
Monday, December 23, 2024

ವರ್ಗಾವಣೆ ಮತ್ತು ಹುದ್ದೆಗಳ ಸ್ಥಳಾಂತರದ ಬಗ್ಗೆ ಸುತ್ತೋಲೆ

ಬೆಂಗಳೂರು, ಫೆ. 16 : ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ವರ್ಗಾವಣೆ ಹಾಗೂ ಹುದ್ದೆ ಸ್ಥಳಾಂತರ ಮಾರ್ಗಸೂಚಿಗಳು ಮತ್ತು ಸರ್ಕಾರದ ನಿರ್ದೇಶನದಳನ್ನು ಉಲ್ಲಂಘಿಸಿರುತ್ತದೆ. ಈ ಸಂಬಂಧ ಹೈ-ಕೋರ್ಟ್ ಪ್ರಕರಣವನ್ನುಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ವರ್ಗಾವಣೆ / ಸ್ಥಳನಿಯುಕ್ತಿ ಪ್ರಸ್ತಾವನೆ ಕಡತಗಳನ್ನು ಮಂಡಿಸಿದ್ದು, ಕೆಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಹಾಗಾದರೆ ನಿಯಮಗಳು ಹಾಗೂ ಮಾರ್ಗದರ್ವುಗಳು ಏನೇನು ಎಂದು ತಿಳಿಯೋಣ ಬನ್ನಿ..

ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ವರ್ಗಾವಣೆ ಮಾರ್ಗಸೂಚಿಗಳ ಅನುಸಾರ ಪರಿಶೀಲಿಸಿ ಮಂಡಿಸುವುದು. ಒಂದು ಕಛೇರಿಯಿಂದ ಮತ್ತೊಂದು ಕಛೇರಿಗೆ ಸ್ಮಳಾಂತರಿಸುವ ಸಂದರ್ಭದಲ್ಲಿ ಸರ್ಕಾರದಿಂದ ಹೊರಡಿಸಲಾಗಿರುವ ಅಧಿಕೃತ ಜ್ಞಾಪನ ಸಿಆಸುಇ 02 ಸೇನೌವ 93 :08-04-1993 ಮತ್ತು ಸುತ್ತೋಲೆ ಸಂ:ಸಿಆಸುಇ 42 ಸೇನೌವ 94 ದಿ:07-09- 1994ಗಳನ್ನು ಒಳಗೊಂಡಂತೆ ಚಾಲ್ತಿಯಲ್ಲಿರುವ ಆದೇಶ ಮತ್ತು ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸರ್ಕಾರವು ಹುದ್ದೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ, ಹೊರಡಿಸಿರುವ ಸೂಚನೆಗಳನ್ನು, ಪಾಲಿಸದೇ ಹುದ್ದೆಗಳನ್ನು ಸ್ಥಳಾಂತರಿಸುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ ಮತ್ತು ನ್ಯಾಯಾಲಯಗಳಲ್ಲಿ ದಾವಗಳು ದಾಖಲಾಗಿ ವ್ಯಾಜ್ಯಗಳು ಹೆಚ್ಚಾಗುತ್ತಿರುವುದು ಕಂಡು ಬಂದಿರುತ್ತದೆ.

ಆದ್ದರಿಂದ, ಹುದ್ದೆಗಳನ್ನು ಒಂದು ಕಛೇರಿಯಿಂದ ಇನ್ನೊಂದು ಕಛೇರಿಗೆ ಸ್ಥಳಾಂತರಿಸುವಾಗ ಸದರಿ ಹುದ್ದೆಗಳನ್ನು ಸ್ಥಳಾಂತರಿಸುವ ಅಗತ್ಯತೆ, ಕಾರ್ಯದೊತ್ತಡ ಮತ್ತು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತ್ತರಸ್ಕಿಯನ್ನು ಒಳಗೊಂಡಿರುವುದನ್ನು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಬೇಕು. ಮಾನ್ಯ ನ್ಯಾಯಾಲಯಗಳ ಅದೇಶ ಮತ್ತು ತಡೆಯಾಜ್ಞೆಗಳಂತಹ ಕಾನೂನಾತ್ಮಕ ಅಂಶಗಳನ್ನು ಪರಿಗಣಿಸುವುದು. ಹಿರಿಯ ಉಪ ನೋಂದನಾಧಿಕಾರಿಗಳ ಹಾಗೂ ಉಪ ನೋಂದಣಾಧಿಕಾರಿಗಳನ್ನು ಅಯಾ ಹುದ್ದೆಗಳಿಗೆ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳುವುದು.

ಕಡತದಲ್ಲಿನ ವಿಷಯಗಳಿಗೆ ಸಂಬಂಧಿಸಿದ ಆದೇಶ ನಿಯಮಗಳನ್ನು ಪರಿಶೀಲಿಸಿ ಅಭಿಪ್ರಾಯದೊಂದಿಗೆ ಕೈಗೊಳ್ಳಬೇಕಾದ ಕ್ರಮದ ವಿವರಗಳೊಂದಿಗೆ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ಪೀಠಾಧಿಕಾರಿ ಮಂಡಿಸಬೇಕು. ಇನ್ನು ಅಧೀನ ಕಾರ್ಯದರ್ಶಿಗಳು ಮಂಡಿಸಲಾಗಿರುವ ಕಡತಗಳಲ್ಲಿನ ವಿಷಯದ ಕುರಿತಾಗಿ ವಿಷಯಕ ಸಂಬಂಧಿಸಿದ ನಿಯಮ/ಆದೇಶಗಳನ್ನು ಪರಿಶೀಲಿಸುವುದು. ಅಭಿಪ್ರಾಯವನ್ನು ವ್ಯಕ್ತಪಡಿಸಿ ಕೈಗೊಳ್ಳಬೇಕಾದ ಕ್ರಮದ ವಿವರಗಳೊಂದಿಗೆ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ಮಂಡಿಸಬೇಕು.

ಕೊನೆಯದಾಗಿ, ಉಪ ಕಾರ್ಯದರ್ಶಿಗಳು ಪಕರಣಗಳನ್ನು ಪರಿಶೀಲಿಸಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಮೇಲಾಧಿಕಾರಿಗಳಿಗೆ ಮಂಡಿಸಬೇಕು. ಇನ್ನು ಮುಂದೆ, ಪೀಠಾಧಿಕಾರಿ, ಅಧೀನ ಕಾರ್ಯದರ್ಶಿ, ಉಪ ಕಾರ್ಯದರ್ಶಿಗಳು ಕಡತವನ್ನು ಸರಿಯಾಗಿ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು. ಈಗಾಗಲೇ ಚಾಲ್ತಿಯಲ್ಲಿರುವ ಸುತ್ತೋಲೆ, ನ್ಯಾಯಾಲಯದ ಆದೇಶ ಹಾಗೂ ನಿಯಮಾವಳಿಗಳನ್ನು ಉಲ್ಲಂಘಿಸಲಾಗುತ್ತಿದೆಯೇ ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.

Related News

spot_img

Revenue Alerts

spot_img

News

spot_img