26.7 C
Bengaluru
Sunday, December 22, 2024

Bank Holidays: ಅಕ್ಟೋಬರ್‌ನಲ್ಲಿ ಒಟ್ಟು 16 ದಿನಗಳವರೆಗೆ ಬ್ಯಾಂಕ್‌ಗಳಿಗೆ ರಜೆ

ನವದೆಹಲಿ : ಸೆಪ್ಟೆಂಬರ್‌ ತಿಂಗಳು ಕಳೆದು ಅಕ್ಟೋಬರ್‌ ತಿಂಗಳು ಸಮೀಪಿಸುತ್ತಿದೆ. ಜೊತೆಗೆ ಸಾಲು ಸಾಲು ಹಬ್ಬಗಳ ಸುಸಮಯ ಕೂಡ ಆರಂಭವಾಗುತ್ತಿದೆ. ಇದೀಗ ಅಕ್ಟೋಬರ್‌ ತಿಂಗಳಲ್ಲಿ ಬರೋಬ್ಬರಿ 16 ದಿನಗಳ ಕಾಲ ಬ್ಯಾಂಕ್‌ ರಜೆ ( Bank Holiday) ಇರಲಿದೆ. ಹೀಗಾಗಿ ಬ್ಯಾಂಕ್‌ಗಳಿಗೆ ತೆರಳುವ ಮುನ್ನ ಬ್ಯಾಂಕ್‌ ರಜೆಯ ಬಗ್ಗೆ ಗಮನ ಹರಿಸಿ.ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Reservebank of india)ದ (RBI) ರಜಾದಿನಗಳ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್‌ನಲ್ಲಿ 18 ದಿನಗಳವರೆಗೆ ಬ್ಯಾಂಕ್‌ಗಳು(Bank) ಮುಚ್ಚಲ್ಪಡುತ್ತವೆ. ಈ ರಜಾದಿನಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳಂತಹ ನಿಯಮಿತ ರಜಾದಿನಗಳು ಸೇರಿವೆ. ಕೆಲವು ಬ್ಯಾಂಕ್ ರಜಾದಿನಗಳು ಪ್ರಾದೇಶಿಕವಾಗಿರುತ್ತವೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಮತ್ತು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಭಿನ್ನವಾಗಿರಬಹುದು.ಬ್ಯಾಂಕ್‌ ಗಳಿಗೆ ರಜೆ ಇದ್ದರೂ ಕೂಡ ಗ್ರಾಹಕರಿಗೆ ಯಾವುದೇ ರೀತಿಯಲ್ಲಿಯೂ ಸಮಸ್ಯೆ ಆಗೋದಿಲ್ಲ. ಗ್ರಾಹಕರು ಎಲ್ಲಾ ರೀತಿಯ ಬ್ಯಾಂಕಿಂಗ್‌ ಸೇವೆಗಳನ್ನು ಆನ್‌ಲೈನ್‌ ಮೂಲಕವೇ ಪಡೆಯಬಹುದಾಗಿದೆ. ಯುಪಿಐ, ಪೋನ್‌ ಬ್ಯಾಂಕಿಂಗ್‌, ನೆಟ್‌ ಬ್ಯಾಂಕಿಂಗ್‌ ಸೇರಿದಂತೆ ಹಲವು ರೀತಿಯ ಸೇವೆಗಳು ಲಭ್ಯವಿದೆ.

ಅಕ್ಟೋಬರ್ 2023 ಬ್ಯಾಂಕ್ ರಜಾದಿನಗಳ ಪಟ್ಟಿ:

ಅಕ್ಟೋಬರ್ 1 – ಭಾನುವಾರ

ಅಕ್ಟೋಬರ್ 2 – ಸೋಮವಾರ, ಮಹಾತ್ಮ ಗಾಂಧಿ ಜಯಂತಿ

ಅಕ್ಟೋಬರ್ 8 – ಭಾನುವಾರ

ಅಕ್ಟೋಬರ್ 14 – ಶನಿವಾರ, ಮಹಾಲಯ

ಅಕ್ಟೋಬರ್ – 15 – ಭಾನುವಾರ

ಅಕ್ಟೋಬರ್ – 18 – ಬುಧವಾರ, ಕಟಿ ಬಿಹು

ಅಕ್ಟೋಬರ್ – 21 – ಶನಿವಾರ, ದುರ್ಗಾ ಪೂಜೆ (ಮಹಾ ಸಪ್ತಮಿ)

ಅಕ್ಟೋಬರ್ – 22 – ಭಾನುವಾರ

ಅಕ್ಟೋಬರ್ – 23 – ಸೋಮವಾರ, ದಸರಾ (ಮಹಾನವಮಿ) / ಆಯುಧ ಪೂಜೆ / ದುರ್ಗಾ ಪೂಜೆ / ವಿಜಯ ದಶಮಿ ಅಗರ್ತಲ, ಬೆಂಗಳೂರು, ಭುವನೇಶ್ವರ, ಗುವಾಹಟಿ, ಹೈದರಾಬಾದ್, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಪಾಟ್ನಾ, ರಾಂಚಿ, ಶಿಲ್ಲಾಂಗ್, ತಿರುವನಂತಪುರಂ

ಅಕ್ಟೋಬರ್ – 24 – ಮಂಗಳವಾರ, ದಸರಾ / ದಸರಾ (ವಿಜಯದಶಮಿ) / ದುರ್ಗಾ ಪೂಜೆ (ಹೈದರಾಬಾದ್ ಇಂಫಾಲ್ ಹೊರತುಪಡಿಸಿ)

ಅಕ್ಟೋಬರ್ – 25 – ಬುಧವಾರ, ದುರ್ಗಾ ಪೂಜೆ (ದಸರಾ)

ಅಕ್ಟೋಬರ್ – 26 – ಗುರುವಾರ, ದುರ್ಗಾ ಪೂಜೆ (ದಸರಾ) / ಪ್ರವೇಶ ದಿನ

ಅಕ್ಟೋಬರ್ – 27 – ಶುಕ್ರವಾರ, ದುರ್ಗಾ ಪೂಜೆ (ದಸರಾ)

ಅಕ್ಟೋಬರ್ – 28 – ಶನಿವಾರ, ಲಕ್ಷ್ಮಿ ಪೂಜೆ

ಅಕ್ಟೋಬರ್ – 29 – ಭಾನುವಾರ

ಅಕ್ಟೋಬರ್ – 31 – ಮಂಗಳವಾರ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ.

 

Related News

spot_img

Revenue Alerts

spot_img

News

spot_img