ಬೆಂಗಳೂರು, ಮಾ. 27 : ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಮಾರ್ಚ್ 28ರಂದು ಸಾರ್ವಜನಿಕ ಕುಂದು ಕೊರತೆಗಳ ಅಹವಾಲು ಸ್ವೀಕಾರ ಸಭೆಯನ್ನು ಏರ್ಪಡಿಸಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಕೆಯ ಜಂಟಿ ಆಯುಕ್ತರ ಕಚೇರಿಯ ಆವರಣದಲ್ಲಿ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ನಗರ ವಿಭಾಗದ ಉಪಾಧೀಕ್ಷಕರು ಮತ್ತು ಇನ್ಸ್‌ಪೆಕ್ಟರ್‌ರವರುಗಳುಳ್ಳ ತಂಡವು ಸಾರ್ವಜನಿಕ ಕುಂದು ಕೊರತೆಗಳ ಅಹವಾಲು ಸ್ವೀಕಾರ ಸಭೆಯನ್ನು ಏರ್ಪಡಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಲು ವಿಳಂಬ ಮಾಡುವ, ನಿರ್ಲಕ್ಷ್ಯ ತೋರುವ, ಕೆಲಸ ಮಾಡಲು ಲಂಚಕ್ಕೆ ಬೇಡಿಕೆ ಇಡುವ, ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಾ ದುರಾಡಳಿತ ಮಾಡುತ್ತಿರುವ ಸಿಬ್ಬಂದಿ ವಿರುದ್ಧ ಅಹವಾಲುಗಳನ್ನು ಈ ಸಭೆಯಲ್ಲಿ ಸ್ವೀಕಾರ ಮಾಡಲಾಗುತ್ತದೆ.
ಹಾಗೇನಾದರೂ ಸಿಬ್ಬಂದಿ ವಿರುದ್ಧ ದೂರ ನೀಡಬೇಕು ಎಂದಿದ್ದರೆ, ನಾಳೆ ದೂರನ್ನು ದ್ವಿಪ್ರತಿಯಲ್ಲಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾದವಿರುತ್ತದೆ. ಈ ಮೂಲಕ ಸಿಬ್ಬಂದಿ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ನಾಳೆ ಬೆಳಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 01.00 ಗಂಟೆಯವರೆಗೂ ಈ ಸಭೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.