17.5 C
Bengaluru
Friday, November 22, 2024

2 ಸಾವಿರ ನೋಟು ಬದಲಾವಣೆಗೆ ನಾಳೆ ಲಾಸ್ಟ್ ಡೇಟ್

ಹೊಸದಿಲ್ಲಿ;2,000 ಮುಖಬೆಲೆಯ ನೋಟುಗಳನ್ನು ಬದಲಿಸಿಕೊಳ್ಳಲು ನಾಳೆಯೇ (ಅ.7ರಂದು) ಕೊನೆಯ ದಿನವಾಗಿದೆ. RBI(reservebank of india) ಕಳೆದ ಮೇ 19ರಂದು 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲಾಗುವುದು ಎಂದು ಪ್ರಕಟಿತ್ತು. ಇದಕ್ಕೆ ಸೆ.30ರ ಒಳಗಾಗಿ ನೋಟುಗಳ ಠೇವಣಿ/ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿತ್ತು. ತದನಂತರ ಕೇವಲ 0.14 ಲಕ್ಷ ಕೋಟಿ ಮೌಲ್ಯದ ನೋಟುಗಳು ಮಾತ್ರ ಮಾರುಕಟ್ಟೆಯಲ್ಲಿ ಇರುವುದರಿಂದ ಮತ್ತೆ ಒಂದು ವಾರದ ವರೆಗೆ ಕಾಲಾವಕಾಶ ನೀಡಿತ್ತು. ಈ ಅವಕಾಶ ನಾಳೆಗೆ ಮುಗಿಯಲಿದೆ,ಅ.8ರಿಂದ ಬ್ಯಾಂಕುಗಳು ₹2,000 ಮುಖಬೆಲೆಯ ನೋಟುಗಳನ್ನು ವಿನಿಮಯಕ್ಕೆ ಸ್ವೀಕರಿಸುವುದಿಲ್ಲ. ಆದರೆ ಸಾರ್ವಜನಿಕರು ಇದರಿಂದ ಭಯಪಡುವ ಅಗತ್ಯವಿಲ್ಲ. RBIನ 19 ಕಚೇರಿಗಳಲ್ಲಿ ₹2,000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಜನರಿಗೆ ಅವಕಾಶ ಕಲ್ಪಿಸಲಾಗುವುದು.ಒಂದು ಸಲಕ್ಕೆ ಒಟ್ಟು 20 ಸಾವಿರ ರೂ ಮೊತ್ತದ ಬ್ಯಾಂಕ್ ನೋಟುಗಳನ್ನು ಜಮೆ ಮಾಡಲು ಮಿತಿ ಹಾಕಲಾಗಿದೆ. ಇದಕ್ಕೆ ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ. ಈ ನೋಟುಗಳನ್ನು ಇಂಡಿಯಾ ಪೋಸ್ಟ್ ಮೂಲಕ RBIನ ವಿತರಣಾ ಕಚೇರಿಗಳಿಗೆ ಅಂಚೆ ಮೂಲಕ ಕಳುಹಿಸಬಹುದು ಅಂತಾ RBI ತಿಳಿಸಿದೆ.

Related News

spot_img

Revenue Alerts

spot_img

News

spot_img