23.9 C
Bengaluru
Sunday, February 23, 2025

EPFO Higher Pension: ಇಪಿಎಫ್‌ಒ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಇಂದು ಕೊನೆ ದಿನ

ಬೆಂಗಳೂರು ಜುಲೈ 11:ಇಪಿಎಫ್‌ಒ ವ್ಯಾಪ್ತಿಗೆ ಒಳಪಡುವ ಉದ್ಯೋಗಿಗಳು ಅಧಿಕ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ಗಡುವು ಇಂದು (ಜುಲೈ 11) ಕೊನೆಗೊಳ್ಳಲಿದೆ. ಸೆಪ್ಟೆಂಬರ್ 1, 2014ರ ಮೊದಲು ಇಪಿಎಫ್ ಖಾತೆ ಮಾಡಿಕೊಂಡವರು ಹೆಚ್ಚಿನ ಪಿಂಚಣಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳವಾಗಿದ್ದು, ಕೆಲ ಅಗತ್ಯ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಂಡರೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಗಡುವನ್ನು ಮತ್ತೊಮ್ಮೆ ವಿಸ್ತರಿಸುವ ಸಾಧ್ಯತೆ ಇಲ್ಲ. ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಯಾವುದೇ ಸಂದೇಹಗಳಿದ್ದಲ್ಲಿ ಇಪಿಎಫ್‌ಒ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ಇಪಿಎಫ್​ಒ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ.ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.

ಇಪಿಎಸ್ ಅಡಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

1.ಯುಎಎನ್(UAN) ನಂಬರ್

2.ಆಧಾರ್ ಕಾರ್ಡ್

3.ಆಧಾರ್ ಗೆ ಲಿಂಕ್ ಆದ ಮೊಬೈಲ್ ನಂಬರ್

4.ನೀವು ಕೆಲಸ ಮಾಡಿದ ಎಲ್ಲಾ ಸಂಸ್ಥೆಗಳಲ್ಲಿನ ಇಪಿಎಸ್ ನಂಬರ್​ಗಳು, ಆ ಸಂಸ್ಥೆಗಳ ಇಪಿಎಸ್ ಶುರುವಾದ ಹಾಗೂ ಮುಕ್ತಾಯವಾದ ದಿನಾಂಕಗಳ ಮಾಹಿತಿ

5.PF ಪಾಸ್‌ಬುಕ್‌ನ ಒಂದು ಪ್ರತಿ

6. ಅರ್ಜಿಯೊಂದಿಗೆ ಉದ್ಯೋಗದಾತರು ಒದಗಿಸಿದ ವೇತನ ಮಾಹಿತಿ

7.ಉದ್ಯೋಗದಾತರಿಂದ ದೃಢೀಕರಿಸಲ್ಪಟ್ಟ ಯಾವುದೇ ಸ್ಯಾಲರಿ ಸ್ಲಿಪ್ ಅಥವಾ ಜಂಟಿ ವಿನಂತಿಗಾಗಿ ಉದ್ಯೋಗ ನೀಡಿದ ಸಂಸ್ಥೆಯ ಪತ್ರ

 

Related News

spot_img

Revenue Alerts

spot_img

News

spot_img