19.9 C
Bengaluru
Friday, November 22, 2024

ಚಿಂತೆ ಇಲ್ಲದೇ ಪ್ರಯಾಣಿಸಲು ಟ್ರಾವೆಲ್ ಇನ್ಶುರೆನ್ಸ್ ಎಷ್ಟು ಮುಖ್ಯ ಗೊತ್ತೇ..?

ಬೆಂಗಳೂರು, ಜೂ. 06 : ಜೀವ ವಿಮಾ ಪಾಲಿಸಿ, ಆರೋಗ್ಯ ಪಾಲಿಸಿ, ಮಕ್ಕಳ ಪಾಲಿಸಿ, ಶಿಕ್ಷಣ ಪಾಲಿಸಿಗಳನ್ನು ಮಾಡಿಸುತ್ತಾರೆ. ಇದೀಗ ಟ್ರಾವೆಲ್ ಪಾಲಿಸಿ ಕೂಡ ಬಂದಿದೆ. ಇದರಿಂದ ಟ್ರಾವೆಲ್ ಮಾಡುವಾಗ ನಡೆಯುವ ಅನಾಹುತಗಳು, ಅನಿರೀಕ್ಷಿತ ವೆಚ್ಚಗಳಿಗೆ ಅನುಕೂಲವಾಗಲಿದೆ. ಈ ಟ್ರಾವೆಲ್ ಇನ್ಶುರೆನ್ಸ್ ನಲ್ಲಿ ಎರಡು ಬಗೆ ಇದೆ. ಇವು ದೇಶ ಅಥವಾ ಹೊರದೇಶಗಳಿಗೆ ಪ್ರಯಾಣ ಬೆಳೆಸಿದಾಗಲೂ ಇವು ಬೆಳಕೆಗೆ ಬರುತ್ತವೆ. ಟ್ರಾವೆಲ್ ಇನ್ಶುರೆನ್ಸ್ ಗಳ ಬಗ್ಗೆ ಮಾಹಿತಿ ಪಡೆಯಿರಿ..

ಮೊದಲನೇಯ ಟ್ರಾವೆಲ್ ಇನ್ಶುರೆನ್ಸ್ ನಲ್ಲಿ ಪ್ರವಾಸ ಕೈಗೊಂಡಾಗ ವೈದ್ಯಕೀಯ ಸಂಬಂಧಿತ ಅಕಸ್ಮಿಕ ಘಟನೆಗಳು ಸಂಭವಿಸಬಹುದು. ಆಗ ಈ ಟ್ರಾವೆಲ್ ಇನ್ಶುರೆನ್ಸ್ ಕವರ್ ಆಗುತ್ತದೆ. ಪ್ರಾಕೃತಿಕ ಅವಘಡಗಳು ಸೇರಿದಂತೆ ಕೆಲ ದುರ್ಘಟನೆಗಳು ಎದುರಾದರೆ, ಆಗಲೂ ಈ ಸ್ಕೀಮ್ ಗಳಿಂದ ರಿಲೀಫ್ ಸಿಗುತ್ತದೆ. ಹೀಗಾಗಿ ತಪ್ಪದೇ ಟ್ರಾವೆಲ್ ಸ್ಕೀಮ್ ಅನ್ನು ಪಡೆಯಿರಿ. ನೀವು ಊಹಿಸದ ಸಂದರ್ಭಗಳಲ್ಲಿ ಎದುರಾದಾಗ ಈ ಯೋಜನೆ ನಿಮ್ಮ ಕೈ ಹಿಡಿಯುತ್ತದೆ.

ಎರಡನೇಯ ಪ್ರಯಾಣ ವಿಮೆಯಲ್ಲಿ ಹೆಚ್ಚಿನ ಕವರೇಜ್ ಗಳು ಸಿಗುತ್ತವೆ. ನೀವು ಟ್ರಾವೆಲ್ ಮಾಡುವಾಗ ಅಕಸ್ಮಾತ್ ಆಗಿ ಬ್ಯಾಗ್ ಅನ್ನು ಕಳೆದುಕೊಂಡರೆ, ಅದಲ್ಲಿ, ಪಾಸ್ಪೋರ್ಟ್ ಅಥವಾ ಟಿಕೆಟ್ ಗಳು ಇದ್ದರೆ, ಆಗ ನಿಮಗೆ ಇನ್ಶುರೆನ್ಸ್ ಉಪಯೋಗಕ್ಕೆ ಬರುತ್ತದೆ. ಇನ್ನು ನಿಮ್ಮ ಪ್ರಯಾಣದ ಟಿಕೆಟ್ ದಿಢೀರ್ ಎಂದು ರದ್ದಾದರೆ ಅನಗತ್ಯ ವೆಚ್ಚವನ್ನು ಇನ್ಶುರೆನ್ಸ್ ಮೂಲಕ ಕ್ಲೈಮ್ ಮಾಡಿಕೊಳ್ಳಬಹುದು. ಅನಾರೋಗ್ಯದ ವೆಚ್ಚವನ್ನೂ ಭರಿಸುತ್ತದೆ.

ಇತ್ತೀಚೆಗಂತೂ ವ್ಯಾಸಂಗಕ್ಕಾಗಿ ಹೆಚ್ಚಿನ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಜಗಳ ಸೇರಿದಂತೆ ಇತರೆ ವಿವಾದಗಳಲ್ಲಿ ಸಿಕಿದಾಗ ಇನ್ಶುರೆನ್ಸ್ ಕಂಪನಿಗಳು ಸಹಾಯಕ್ಕೆ ಬರುತ್ತವೆ. ವಿದೇಶದಲ್ಲಿದ್ದಾಗ ಎದುರಾಗುವ ಕೆಲ ಕಾನೂನು ವ್ಯಾಜ್ಯಗಳ ವೆಚ್ಚವನ್ನು ಭರಿಸುತ್ತವೆ. ಈ ಸಂದರ್ಭದಲ್ಲಿ ಅನಾರೋಗ್ಯ, ಹಾಗೂ ಅನಗತ್ಯ ಖರ್ಚಿನ ಬಿಲ್ ಗಳನ್ನು ಇಟ್ಟುಕೋಮಡಿದ್ದರೆ, ಇನ್ಶುರೆನ್ಸ್ ಅನ್ನು ಕ್ಲೈಮ್ ಮಾಡುವುದಕ್ಕೆ ಸಹಕಾರಿಯಾಗುತ್ತದೆ.

Related News

spot_img

Revenue Alerts

spot_img

News

spot_img