27.3 C
Bengaluru
Monday, July 1, 2024

ತೆರಿಗೆ ಉಳಿತಾಯ ಮಾಡಲು ಕೆಲ ಯೋಜನೆಗಳನ್ನು ನಿಮ್ಮದಾಗಿಸಿಕೊಳ್ಳಿ..

ಬೆಂಗಳೂರು, ಸೆ. 01 : ನೀವು ಇನ್ನೂ ಹೂಡಿಕೆಯನ್ನು ಪ್ರಾರಂಭಿಸದಿದ್ದರೆ, ಇದು ನಿಮಗೆ ತುಂಬಾ ಮುಖ್ಯವಾಗಿದೆ. ನಿಮ್ಮ ಸುರಕ್ಷಿತ ಭವಿಷ್ಯಕ್ಕಾಗಿ ಉತ್ತಮ ಹೂಡಿಕೆಗಳನ್ನು ಮಾಡಲು ಹೊಸ ವರ್ಷದ ಸಂಕಲ್ಪವನ್ನು ಮಾಡಿ. ಇಂದು ನಾವು ನಿಮ್ಮ ಸಂಬಳದಿಂದ ತೆರಿಗೆಯನ್ನು ತಪ್ಪಿಸಲು ಮತ್ತು ಸರಿಯಾದ ಮತ್ತು ಉತ್ತಮ ಹೂಡಿಕೆ ಮಾಡಲು ಕೆಲವು ಉತ್ತಮ ಆಯ್ಕೆಗಳನ್ನು ಸೂಚಿಸಲಿದ್ದೇವೆ.

ಚಿಲ್ಲರೆ ಹೂಡಿಕೆದಾರರು (Retail Investors) ತೆರಿಗೆ ಉಳಿತಾಯ (Tax saving) ಮತ್ತು ನಿವೃತ್ತಿ ಯೋಜನೆಗಳ (Retirement Plans) ಯೋಚಿಸಬೇಕಾದ ಸಮಯ ಇದಾಗಿದೆ. ಇದಲ್ಲದೆ ಇತ್ತೀಚೆಗೆ ಹಣದುಬ್ಬರ (Inflation) ಹೆಚ್ಚುತ್ತಿದೆ. ಜತೆಗೆ ಬಡ್ಡಿ ದರಗಳಲ್ಲೂ ವಿಪರೀತ ಹೆಚ್ಚಳವಾಗಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಉಳಿತಾಯ ಯೋಜನೆಗಳನ್ನು ಈಗಲೇ ರೂಪಿಸುವುದು ಉತ್ತಮ ಎನ್ನುತ್ತಾರೆ ಹಣಕಾಸು ತಜ್ಞರು

ಸರ್ಕಾರದ ಈ ಯೋಜನೆಗಳು ನಿಮಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ. ಏಕೆಂದರೆ ಈ ಯೋಜನೆಗೆ ತೆರಿಗೆ ವಿನಾಯಿತಿ ಇದೆ. ಆದ್ದರಿಂದ ನೀವು ಇದರಲ್ಲಿ ಹೂಡಿಕೆ ಮಾಡಿದರೆ, ನೀವು ಹೆಚ್ಚು ಲಾಭ ಪಡೆಯಬಹುದು.ಕೆಲವು ಮಾನದಂಡಗಳನ್ನು ಆಧರಿಸಿ ಪ್ರಮುಖ 10 ತೆರಿಗೆ-ಉಳಿತಾಯ ಸಾಧನಗಳ ವಿವರ ಇಲ್ಲಿದೆ. ರಿಟರ್ನ್ಸ್, ಸುರಕ್ಷತೆ, ನಮ್ಯತೆ, ಲಿಕ್ವಿಡಿಟಿ, ವೆಚ್ಚ, ಪಾರದರ್ಶಕತೆ, ಹೂಡಿಕೆಯ ಸರಳತೆ ಮತ್ತು ಆದಾಯ ತೆರಿಗೆ ಈ ಮಾನದಂಡಗಳನ್ನು ಆಧರಿಸಿ ವಿವಿಧ ತೆರಿಗೆ-ಉಳಿತಾಯ ಸಾಧನಗಳಿಗೆ ಶ್ರೇಯಾಂಕ ನೀಡಲಾಗಿದೆ.

1. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್): ಇದರ ರಿಟರ್ನ್ಸ್ ತೆರಿಗೆಮುಕ್ತ ಆಗಿದೆ. ಆದರೆ ನಿಧಾನವಾಗಿ ಬಡ್ಡಿ ದರ ಕಡಿಮೆ ಆಗುತ್ತಿದೆ. ಬದಲಾಗುವ ಬಡ್ಡಿ ದರ ಇನ್ನಷ್ಟು ಕಡಿಮೆ ಆಗಬಹುದು.ಇದರಲ್ಲಿ ನೀವು ಕನಿಷ್ಟ 1000 ರಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು. 7.1 ರಷ್ಟು ಬಡ್ಡಿದರವನ್ನು ಸರ್ಕಾರವು ಸಹ ನೀಡುತ್ತದೆ. ಆದಾಯ ತೆರಿಗೆ ಪಾವತಿಸುವಾಗ ಸೆಕ್ಷನ್ 80 ಸಿ ಅಡಿಯಲ್ಲಿ ವಿನಾಯಿತಿ ನೀಡಲಾಗುತ್ತದೆ. ಆದ್ದರಿಂದ ನೀವು ಇದರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನೀವು ದೊಡ್ಡ ಲಾಭವನ್ನು ಪಡೆಯಬಹುದು.
2.NPS- ನೀವು ನಿಮ್ಮ ಕೆಲಸವನ್ನು ಪ್ರಾರಂಭಿಸಿದ ಸಮಯದಿಂದ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. CCD (1) ಅಡಿಯಲ್ಲಿ 1.5 ಲಕ್ಷ ಮತ್ತು CCD (1B) ಅಡಿಯಲ್ಲಿ 50,000 ರೂಪಾಯಿ ಸಿಗುತ್ತೆ
3. ಯೂನಿಟ್ ಲಿಂಕ್ಡ್ ಇನ್ವೆಸ್ಟ್ಮೆಂಟ್ ಪ್ಲಾನ್ ಸ್ಕೀಮ್ (ULIPS): ಈ ಯೋಜನೆಯಲ್ಲಿ ಬಹಳಷ್ಟು ಸುಧಾರಣೆ ಆಗಿದೆ. ಕಡಿಮೆ ವೆಚ್ಚದಲ್ಲಿ ಕೂಡ ದೊರೆಯುತ್ತದೆ. ತೆರಿಗೆ ಮುಕ್ತ ರಿಟರ್ನ್ಸ್ ಮತ್ತು ಬದಲಿಸಿಕೊಳ್ಳುವುದು ಕೂಡ ಸರಳ.
4.ಸುಕನ್ಯಾ ಸಮೃದ್ಧಿ ಯೋಜನೆ- ನಿಮ್ಮ ಮನೆಯಲ್ಲಿ ಮಗಳಿದ್ದರೆ ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅದಕ್ಕಾಗಿ ನೀವು ಸುಕನ್ಯಾ ಸಮೃದ್ಧಿ ಯೋಜನೆಯ ವೆಬ್‌ಸೈಟ್‌ನಲ್ಲಿ ಅಥವಾ ಬ್ಯಾಂಕ್‌ನಲ್ಲಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
5.ವಿಮಾ ಯೋಜನೆ- ಜೀವ ಮತ್ತು ಆರೋಗ್ಯ ವಿಮೆಯಲ್ಲಿ ಹೂಡಿಕೆಯನ್ನು ಸುರಕ್ಷಿತ ಯೋಜನೆ ಎಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಆಸ್ತಿಯನ್ನು ಅನಿರೀಕ್ಷಿತ ಹಾನಿಯಿಂದ ರಕ್ಷಿಸುತ್ತದೆ. ಈ ಪಾಲಿಸಿಗೆ ಪಾವತಿಸಿದ ಪ್ರೀಮಿಯಂ ಮೇಲೆ ನೀವು ತೆರಿಗೆ ವಿನಾಯಿತಿ ಪಡೆಯಬಹುದು. ಇದು ಆದಾಯ ತೆರಿಗೆಯನ್ನು ಉಳಿಸಲು ಸಹ ನಿಮಗೆ ಸಹಾಯ ಮಾಡುತ್ತದೆ.
6. ರಾಷ್ಟ್ರೀಯ ಉಳಿತಾಯ ಪತ್ರ (NSC): ನಿರಂತರವಾಗಿ ಸರ್ಕಾರದ ಬಾಂಡ್ಗಳ ಯೀಲ್ಡ್ನಲ್ಲಿ ಇಳಿಕೆ ಆಗಿದ್ದರಿಂದ ಬಡ್ಡಿ ದರ ಮತ್ತು ಇದಕ್ಕಿರುವ ಆದ್ಯತೆಯಲ್ಲಿ ಕಡಿಮೆ ಆಗಿದೆ. ಆದರೆ ಅತ್ಯಂತ ಸುರಕ್ಷಿತ ಹೂಡಿಕೆ ಆಯ್ಕೆ ಇದು.
7. ತೆರಿಗೆ ಉಳಿತಾಯ ನಿಶ್ಚಿತ ಠೇವಣಿ (ಟ್ಯಾಕ್ಸ್ ಸೇವಿಂಗ್ ಎಫ್.ಡಿ.): ಇದು ಬಹಳ ಕಡಿಮೆ ರಿಟರ್ನ್ಸ್ ನೀಡುತ್ತದೆ. ಆದಾಯಕ್ಕೆ ಪೂರ್ಣವಾಗಿ ತೆರಿಗೆ ಬೀಳುತ್ತದೆ. ನಿಮಗೆ ಸಮಯ ಇಲ್ಲ ಎಂದಾದಲ್ಲಿ ತೆರಿಗೆ ಉಳಿತಾಯಕ್ಕೆ ಅತಿ ಸುಲಭ ಮಾರ್ಗ.

Related News

spot_img

Revenue Alerts

spot_img

News

spot_img