ಬೆಂಗಳೂರು, ಜು. 07 : ಸ್ವಂತ ಮನೆ ಎಂಬುದು ಪ್ರತಿಯೊಬ್ಬರ ಕನಸು. ಕೆಲವರಿಗೆ ನನಸಾದರೆ, ಮತ್ತೆ ಕೆಲವರಿಗೆ ಸ್ವಪ್ನವಾಗಿಯೇ ಉಳಿಯುತ್ತದೆ. ಸ್ವಂತ ಭೂಮಿ ಪಡೆಯಲೂ ಯೋಗ ಮಾಡಿರಬೇಕು ಎಂಬ ಮಾತಿದೆ. ಆದರೆ, ಈಗ ಪ್ರಪಂಚ ಕೆಟ್ಟಿದೆ. ನಮ್ಮದೇ ವಸ್ತುವನ್ನು ಬೇರೆಯವರು ಆಕ್ರಮಿಸಿಕೊಂಡು ತಮ್ಮದಾಗಿಸಿಕೊಂಡು ಬಿಡುತ್ತಾರೆ. ಈಗಂತೂ ಫ್ಲಾಟ್, ಮನೆ, ನಿವೇಶನ ಮಾರಾಟಗಳಲ್ಲಿ ಸಾಕಷ್ಟು ವಂಚನೆಗಳು ನಡೆಯುತ್ತಿವೆ. ಒಂದೇ ಜಾಗವನ್ನು ಮೂರು ನಾಲ್ಕು ಜನರ ಹೆಸರಿನಲ್ಲಿ ರಿಜಿಸ್ಟರ್ ಮಾಡಿ ಮೋಸ ಮಾಡುವುದೇ ಹೆಚ್ಚು.
ಹಾಗಾಗಿ ನೀವು ಯಾವುದಾದರೂ ಮನೆ, ಫ್ಲಾಟ್ ಅಥವಾ ನಿವೇಶನವನ್ನು ಖರೀದಿ ಮಾಡುವ ಆಲೋಚನೆ ಇದ್ದರೆ, ಮೊದಲು ಪರೀಕ್ಷಿಸಿಕೊಳ್ಳಿ. ಆ ಜಾಗವು ಯಾರ ಹೆಸರಿನಲ್ಲಿದೆ. ಯಾರಿಂದ ಖರೀದಿ ಮಾಡದರು. ದಾಖಲೆಗಳು ಸರಿಯಾಗಿ ಇವೆಯೇ ಎಂಬ ಎಲ್ಲಾ ಬಗ್ಗೆ ಮಾಹಿತಿಯನ್ನು ಪಡೆಯಿರಿ. ಕೆಲವೊಮ್ಮೆ ಆಸ್ತಿಗಳ ಪೇಪರ್ ದಾಖಲೆಗಳು ಸುಳ್ಳಿದ್ದರೂ ನಮಗೆ ತಿಳಿಯುವುದೇ ಇಲ್ಲ. ಅದಕ್ಕಾಗಿಯೇ ಕಂದಾಯ ಇಲಾಖೆಯು ಆನ್‌ಲೈನ್‌ನಲ್ಲಿ ಮಾಹಿತಿ ನೀಡಿದೆ.
ಭೂಮಿಯ ಮಾಲೀಕರನ್ನು ತಿಳಿಯಲು ಜನರು ಬೇರೆ ಯಾರ ಬಳಿಯೂ ಕೇಳುವ ಅಗತ್ಯವಿಲ್ಲ. ಆನ್‌ಲೈನ್ ಮೂಲಕ ಭೂ ನಕ್ಷೆ, ಭೂಮಿಯ ಅಳತೆ, ಮಾಲೀಕರ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಲು ಹೊಸ ದಾರಿ ಇದೆ. ಅದೂ ಕೂಡ 2 ನಿಮಿಷದಲ್ಲಿ. ಭೂಮಿಯ ಪ್ರತಿಯೊಂದು ದಾಖಲೆಯನ್ನೂ ತಿಳಿದುಕೊಳ್ಳಬಹುದು. ಇದಕ್ಕೆ ನೀವು ಕಂದಾಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದ ಮಾಹಿತಿಯನ್ನು ಪಡೆಯಬಹುದು. ಇದಕ್ಕಾಗಿ ಕಂದಾಯ ಇಲಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ.
ರಾಜ್ಯ ಕಂದಾಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ, ಅಲ್ಲಿ ಜಿಲ್ಲೆಯ ಹೆಸರನ್ನು ಆಯ್ಕೆ ಮಾಡಿ. ಬಳಿಕ ತಹಸಿಲ್ದಾರ್ ಹೆಸರನ್ನು ಆರಿಸಿ. ಭೂಮಿಯ ಬಗ್ಗೆ ಮಾಹಿತಿ ತಿಳಿಯಲು ಗ್ರಾಮದ ಹೆಸರು ಆಯ್ಕೆ ಮಾಡಿ. ಖಾತೆದಾರರ ಹೆಸರಿನ ಮೂಲಕ ಮಾಹಿತಿ ಹುಡುಕಿ. ಈಗ ಭೂಮಿಯ ಮಾಲೀಕರ ಹೆಸರಿನ ಮೊದಲ ಅಕ್ಷರವನ್ನು ಆರಿಸಿ. ಅಲ್ಲಿ ಸರ್ಚ್ ಬಟನ್ ಪ್ರೆಸ್ ಮಾಡಿ. ಪಟ್ಟಿಯಲ್ಲಿರುವ ಭೂಮಿಯ ಮಾಲೀಕರ ಹೆಸರನ್ನು ಆಯ್ಕೆ ಮಾಡಿ. ಬಳಿಕ ಈಗ ಕ್ಯಾಪ್ಚಾ ಕೋಡ್ ಅನ್ನು ಹಾಕಿ. ತಕ್ಷಣವೇ ನಿಮಗೆ ಖಾತೆಯ ವಿವರಗಳು ತೆರೆದುಕೊಳ್ಳುತ್ತವೆ. ಇದರಲ್ಲಿ ಖಾಸ್ರಾ ಸಂಖ್ಯೆಯ ಜೊತೆಗೆ ಆ ಖಾತೆದಾರನ ಹೆಸರಿನಲ್ಲಿ ಎಷ್ಟು ಜಮೀನಿದೆ ಎಂಬುದು ತಿಳಿಯುತ್ತದೆ.