ಬೆಂಗಳೂರು, ಜು. 08 : ಎಲ್ಲರಿಗೂ ಸ್ವಂತ ವ್ಯಾಪಾರ ಶುರು ಮಾಡುವ ಆಸಕ್ತಿ ಇರುತ್ತದೆ. ಕಷ್ಟವೋ ಸುಖವೋ ತಮ್ಮದೇ ಉದ್ಯಮವಿದ್ದರೆ, ಲಾಭ ಹೆಚ್ಚಿರುತ್ತದೆ ಎಂಬುದು ಎಲ್ಲರ ಅಭಿಪ್ರಾಯ. ಹಾಗಾಗಿ ಎಲ್ಲರೂ ತಮ್ಮ ಸ್ವಂತ ವ್ಯಾಪಾರವನ್ನು ಶುರು ಮಾಡುತ್ತಾರೆ. ಆದರೆ ವ್ಯಾಪಾರ ಆರಂಭಿಸುವುದೇನೋ ಸುಲಭ ಆದರೆ, ಅದರ ಪ್ರಚಾರ ಮಾಡುವುದು ಕಷ್ಟ. ಪ್ರಚಾರ ಮಾಡಲು ಕೆಲ ಟ್ರಿಕ್ ಗಳು ಇರುತ್ತವೆ. ಅದು ಎಲ್ಲರಿಗೂ ತಿಳಿದಿರುವುದಿಲ್ಲ.
ಹಾಗೋ ಹೀಗೋ ಧೈರ್ಯ ಮಾಡಿ ವ್ಯಾಪಾರ ಆರಂಭಿಸಿರುವವರು ನಿಮ್ಮ ಬಿಸಿನೆಸ್ ಸಕ್ಸಸ್ ಕಾಣಲು ಸಾಕಷ್ಟು ಪರಿಶ್ರಮ ಪಡಬೇಕು. ಎದುರಾಗುವ ಅಡೆತಡೆಗಳಿಗೆ ಜಗ್ಗಬಾರದು. ನಿಮ್ಮ ಉದ್ಯಮದ ಪ್ರಚಾರಕ್ಕಾಗಿ ತಂತ್ರಜ್ಞಾನವನ್ನೂ ಕೂಡ ಬಳಸಿಕೊಳ್ಳಬಹುದು. ಆಗ ನಿಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತಾರಗೊಳಿಸಲು ಸುಲಭವಾಗುತ್ತದೆ. ಯಶಸ್ವಿಯಾಗಿ ಗ್ರಾಹಕರನ್ನು ಸೆಳೆದುಕೊಂಡರೆ ನೀವು ಸಕ್ಸಸ್ ಫುಲ್ ಉದ್ಯಮಿ ಆಗುವುದರಲ್ಲಿ ಡೌಟೇ ಇಲ್ಲ.
ಹಾಗಾದರೆ, ಬನ್ನಿ ಸಕ್ಸಸ್ ಫುಲ್ ಉದ್ಯಮಿ ಆಗಲು ಹೇಗೆ ನಿಮ್ಮ ಬಿಸಿನೆಸ್ ಅನ್ನು ಪ್ರಮೋಟ್ ಮಾಡುವುದು ಎಂಬುದಕ್ಕೆ ಇಲ್ಲೊಂದಿಷ್ಟು ಮಾರ್ಗಗಳಿವೆ. ಅವನ್ನು ನೀವು ಟ್ರೈ ಮಾಡಿ ನೋಡಿ.. ಎಸ್ಇಓ ಎಂದರೆ ಸರ್ಚ್ ಇಂಜಿನ್ ಆಪ್ಟಿಮೈಸೇಷನ್ ಎಂದರ್ಥ. ನಿಮ್ಮ ವ್ಯಾಪಾರವನ್ನು ಮಾಡುವಾಗ ನೀವು ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಅದುವೇ ವೆಬ್ ಸೈಟ್ ಅಥವಾ ಬ್ಲಾಗ್ ಅನ್ನು ತೆರೆಯುವುದು. ಮೊದಲು ನಿಮ್ಮ ಉದ್ಯೋಗಕ್ಕಾಗಿ ಒಂದು ವೆಬ್ ಸೈಟ್ ಇಲ್ಲವೇ ಬ್ಲಾಗ್ ಅನ್ನು ರಚಿಸಿ.
ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿ ಕೀವರ್ಡ್ ಗಳ ಮೂಲಕ ವೆಬ್ ಸೈಟ್ ಹುಡುಕಾಟ ಹೆಚ್ಚಾಗುವಂತೆ ಪ್ಲಾನ್ ಮಾಡಿ. ಈ ತಂತ್ರಜ್ಞಾನದ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೆ, ವೃತ್ತಿಪರ ಏಜೆನ್ಸಿಗಳನ್ನು ಸಂಪರ್ಕಿಸಿ. ಇದು ಸುದೀರ್ಘಕಾಲದವರೆಗೆ ನಿಮ್ಮ ವ್ಯಾಪಾರದ ಗುರಿ ಮುಟ್ಟಲು ಸಹಾಯ ಮಾಡುತ್ತದೆ. ಈಗ ಸೋಶಿಯಲ್ ಮೀಡಿಯಾಗಳ ಬಗ್ಗೆ ಹೇಳಬೇಕಾಗಿಯೇ ಇಲ್ಲ. ಸಾರ್ವಜನಿಕರನ್ನು ನಿಮ್ಮ ಬ್ರ್ಯಾಂಡ್ ಕಡೆಗೆ ಒಲವು ತೋರುವಂತೆ ಮಾಡಲು ಸೋಶಿಯಲ್ ಮೀಡಿಯಾವನ್ನು ಬಳಸಿಕೊಳ್ಳಿ.
ಇದು ಇಂಟರ್ನೆಟ್ ಒಂದಿದ್ದರೆ ಸಾಕು, ಹೆಚ್ಚಿನ ಖರ್ಚಿಲ್ಲದೆಯೂ ಸೋಶಿಯಲ್ ಮೀಡಿಯಾದಲ್ಲಿ ಉಚಿತವಾಗಿ ಪ್ರಚಾರ ಮಾಡಬಹುದು. ನಿಮ್ಮ ಪ್ರಾಡಕ್ಟ್ ಬಗ್ಗೆ ಮಾರ್ಕೆಟಿಂಗ್ ಮಾಡಿ. ಏನು ಸ್ಪೆಷಲ್, ಯಾವೆಲ್ಲಾ ಉಪಯೋಗಗಳು ನಿಮ್ಮ ಪ್ರಾಡಕ್ಟ್ ನಿಂದ ಪಡೆಯ ಬಹುದು ಎಂಬುದನ್ನು ಪ್ರಚಾರ ಮಾಡಿ. ಇನ್ ಸ್ಟಾಗ್ರಾಂ, ಫೇಸ್ ಬುಕ್, ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳು ಸಾಕಷ್ಟಿವೆ. ಇನ್ನು ಗ್ರಾಹಕರ ಪ್ರಶ್ನೆಗಳಿಗೆ ಉತ್ತರ ನೀಡಿ. ಅವರಿಗೆ ಸಮಾಧಾನಕರವಾಗಿರುವಂತಹ ಉತ್ತರಗಳನ್ನು ಕೊಡಿ. ಇದು ಗ್ರಾಹಕರನ್ನು ನಿಮ್ಮತ್ತ ಸೆಳೆಯುವಲ್ಲಿ ಸಹಾಯ ಮಾಡುತ್ತದೆ.
ಇ-ಮೇಲ್ ಮೂಲಕವೂ ನಿಮ್ಮ ವ್ಯಾಪಾರವನ್ನು ಉತ್ತೇಜಿಸಬಹುದಾಗಿದೆ. ನಿಮ್ಮ ಉತ್ಪನ್ನಗಳನ್ನು ನಿಮ್ಮ ಗ್ರಾಹಕರಿಗೆ ಇ-ಮೇಲ್ ಮಾಡಿ. ಹೊಸ ಉತ್ಮನ್ನಗಳನ್ನು ಪ್ರಚಾರ ಮಾಡಲು ಬಳಸಿ. ಇ-ಮೇಲ್ ಮಾರ್ಕೆಟಿಂಗ್ ಮೂಲಕವೂ ನಿಮ್ಮ ಗ್ರಾಹಕರನ್ನು ಮತ್ತೆ ನಿಮ್ಮ ಪ್ರಾಡಕ್ಟ್ ಗಳನ್ನು ಖರೀದಿಸುವಂತೆ ಮಾಡಬಹುದು.
ಇಂದಿಗೂ ವರ್ಚುವಲ್ ಜಾಹೀರಾತಿಗೆ ಮಹತ್ವವಿದೆ. ಆನ್ ಲೈನ್ ಜಾಹೀರಾತಿಗೆ ನಿಮ್ಮ ಹಣ ಖರ್ಚಾಗಬಹುದು. ಆದರೆ, ಆಡ್ಸ್ ಗಳಿಂದಲೂ ಗ್ರಾಹಕರನ್ನು ಸೆಳೆಯುವುದು ಸುಲಭವಾಗಿದೆ. ಜಾಹೀರಾತಿನಿಂದ ನಿಮ್ಮ ಪ್ರಾಡಕ್ಟ್ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಇದಕ್ಕೆ ನೀವು ವ್ಯಯಿಸಿದರೂ, ಹಣ ಗಳಿಕೆ ಮಾಡುವುದು ಕೂಡ ಹೆಚ್ಚಾಗುತ್ತದೆ.