ಬೆಂಗಳೂರು, ಜು. 04 : ಮೊದಲೆಲ್ಲಾ ಉದ್ಯಮವನ್ನು ಸ್ವಂತವಾಗಿ ಪ್ರಾರಂಭಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಹಾಗಾಗಿ ಹೆಚ್ಚು ಮಂದಿ ಸ್ವಂತ ಬಿಸಿನೆಸ್ ಮಾಡುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಎಲ್ಲರೂ ಸ್ವಂತ ಬಿಸಿನೆಸ್ ಮಾಡಲು ಬಯಸುತ್ತಾರೆ. ಕೆಲವರಂತೂ ಐಟಿ ನಲ್ಲಿ ಕೆಲಸ ಮಾಡಿಕೊಂಡೇ ಬಿಸಿನೆಸ್ ಅನ್ನು ಕೂಡ ಮಾಡುತ್ತಾರೆ. ಇನ್ನು ನಿಮಗೂ ಬಿಸಿನೆಸ್ ಮಾಡುವ ಆಸೆ ಇದ್ದರೆ, ಲಾಭವಿರುವಂತಹ ಬಿಸಿನೆಸ್ ಅನ್ನು ಮಾಡಿ. ಅದಕ್ಕೆ ಉಪಾಯವನ್ನು ಕೂಡ ನಾವು ಕೊಡುತ್ತೇವೆ.
ಈಗ ಪ್ರತಿಯೊಬ್ಬರೂ ಆನ್ ಲೈನ್ ಶಾಪಿಂಗ್ ಮೊರೆ ಹೋಗುತ್ತಾರೆ. ಆನ್ ಲೈನ್ ನಲ್ಲಿ ಶಾಪಿಂಗ್ ಮಾಡಿದ ಪ್ರತಿಯೊಂದು ವಸ್ತುಗಳಿಗೆ ಕಾರ್ಡ್ ಬೋರ್ಡ್ ಬಾಕ್ಸ್ ನಿಂದ ಪ್ಯಾಕ್ ಮಾಡಲಾಗುತ್ತದೆ. ಹೀಗಾಗಿ ಕಾರ್ಡ್ ಬೋರ್ಡ್ ಬಾಕ್ಸ್ ಗಳು ಬಹಳ ಅಗತ್ಯವಿದ್ದು, ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ಬಿಸಿನೆಸ್ ಅನ್ನು ಮಾಡುವುದರಿಂದ ಉತ್ತಮವಾದ ಲಾಭವನ್ನು ಪಡೆಯಬಹುದು. ಇದರ ಮಾರ್ಕೆಟಿಂಗ್ ಚೆನ್ನಾಗಿ ಮಾಡಿದರೆ, ಸೋಲಿಲ್ಲದೇ ಲಾಭವನ್ನು ಮಾಡಬಹುದಾಗಿದೆ.
ಅಷ್ಟೇ ಅಲ್ಲದೇ ಈ ಬಿಸಿನೆಸ್ ಗೆ ಸರ್ಕಾರದಿಂದ ಲೂ ನೆರವು ಸಿಗುತ್ತದೆ. ಈ ಉದ್ಯಮವನ್ನು ಪ್ರಾರಂಭಿಸಲು 5000 ಚದರ ಅಡಿ ಜಾಗ ಒಂದು ಗೋದಾಮು ಬೇಕು. ಜೊತೆಗೆ ಕಾರ್ಡ್ ಬೋರ್ಡ್ ತಯಾರಿಸಲು ಎರಡು ದೊಡ್ಡ ದೊಡ್ಡ ಯಂತ್ರಗಳು ಬೇಕಾಗುತ್ತದೆ. ಕಾರ್ಡ್ ಬೋರ್ಡ್ ತಯಾರಿಸಲು ಕಾಗದಗಳು ಮಾರ್ಕೆಟ್ ನಲ್ಲಿ ಲಭ್ಯವಿದೆ. ಒಂದು ಕೆಜಿ ಕಾಗದಕ್ಕೆ 40 ರೂಪಾಯಿ ಬೆಲೆ ಇದೆ. ನೀವು ದೊಡ್ಡ ಮಟ್ಟದಲ್ಲಿ ಈ ಬಿಸಿನೆಸ್ ಅನ್ನು ಪ್ರಾರಂಭಿಸಬೇಕು ಎಂದರೆ 20 ಲಕ್ಷ ರೂಪಾಯಿ ಹಣವನ್ನು ಇನ್ವೆಸ್ಟ್ ಮಾಡಬೇಕಾಗುತ್ತದೆ.