ಬೆಂಗಳೂರು, ಮೇ. 02 : ಜಮೀನಿನಲ್ಲಿ ರೈತರು ಎಷ್ಟೇ ಕೆಲಸ ಮಾಡಿದರೂ ವರ್ಷ ಪೂರ್ತಿ ನೀರು ಸಿಗದಿದ್ದರೆ, ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ನೀರಿಲ್ಲದೆ ಬೆಳೆ ಬೆಳೆದರೆ, ರೈತರು ಖರ್ಚು ಮಾಡಿದ ಹಣವೂ ಬರುವುದಿಲ್ಲ. ಆದಾಯವಿಲ್ಲದೇ ಮುಂದಿನ ಬದುಕು ಕೂಡ ಕಷ್ಟವಾಗುತ್ತದೆ. ಹೀಗಿರುವಾಗ ಜಮೀನುಗಳಲ್ಲಿ ಬೋರ್ ವೆಲ್ ಗಳು ಇರಲೇಬೇಕು. ಈಗಂತೂ ಭೂಮಿಯಲ್ಲಿ ನೀರಿಲ್ಲದೇ, ಸಾವಿರಾರು ಅಡಿಗಳಷ್ಟು ಕೊರೆಸಿದರೂ ನೀರು ಸಿಗುವುದೇ ಇಲ್ಲ.
ಆದರೆ, ಬೋರ್ ವೆಲ್ ಅನ್ನು ಕೊರೆಸಬೇಕು ಎಂಬುದಾದರೆ, ಈಗ ನಿಮ್ಮ ಮೊಬೈಲ್ ಮೂಲಕ ನೀರಿನ ಪಾಯಿಂಟ್ ಅನ್ನು ತಿಳಿದುಕೊಳ್ಳಬಹುದು. ಈಗಂತೂ ಜಮೀನುಗಳಲ್ಲಿ ನೀರಿನ ಪಾಯಿಂಟ್ ಕಂಡು ಹಿಡಿಯಲು ಹಲವಾರು ಮಾರ್ಗಗಳು ಇವೆ. ಭೂ ವಿಜ್ಞಾನಿಗಳನ್ನು ಕರೆಸಿ, ನಿಮ್ಮ ಜಮೀನಿನಲ್ಲಿ ನೀರಿನ ಪಾಯಿಂಟ್ ಎಲ್ಲಿದೆ ಎಂಬುದನ್ನು ಕೇಳಿ ತಿಳಿಯಬಹುದು. ಈವರು ಗುರುತು ಮಾಡಿಕೊಡುವ ಕೆಲ ಪಾಯಿಂಟ್ ಗಲ್ಲಿ ಯಅವುದಾದರೂ ಒಂದನ್ನು ಆರಿಸಿ ನೀವು ಬೋರ್ ವೆಲ್ ಅನ್ನು ಕೊರೆಸಬಹುದು.
ಇಲ್ಲವೇ ನೀವು ಡಿಟೆಕ್ಟರ್ ಆಪ್ ಅನ್ನು ಕೂಡ ಬಳಸಬಹುದು. ಡಿಟೆಕ್ಟರ್ ಆಪ್ ಅಂದರೆ ಏನು ಎಂದು ಯೋಚಿಸುತ್ತಿದ್ದೀರಾ. ಈಗ ನೀರಿನ ಪಾಯಿಂಟ್ ಅನ್ನು ತಿಳಿಯಲು ಡಿಟೆಕ್ಟರ್ ಆಪ್ ಅನ್ನು ಕೂಡ ಬಳಸಬಹುದು. ದೇಶದಲ್ಲಿನ ಸರ್ಕಾರಗಳು ರೈತರಿಗೆ ವ್ಯವಸಾಯ ಮಾಡಲು ಸಹಾಯವಾಗಲಿ ಎಂದು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ವ್ಯವಸಾಯ ಮಾಡುವ ಸಮಯದಲ್ಲಿ ರೈತರಿಗೆ ಸಹಾಯ ಆಗಲಿ ಎಂದೇ ಬೋರ್ ವೆಲ್ ಯೋಜನೆಯನ್ನು ಜಾರಿ ಮಾಡಿದೆ.
ಈ ಯೋಜನೆಯ ಮೂಲಕ ರೈತರು ಬೋರ್ವೆಲ್ ಅಥವಾ ಬಾವಿಯನ್ನು ಮಾಡಬಹುದು. ಹೌದು ಈ ಆಪ್ ಅನ್ನು ಬಳಸಿದರೆ, ಸುಲಭವಾಗಿ ಯಾವ ಪಾಯಿಂಟ್ ನಲ್ಲಿ ಬೋರ್ ವೆಲ್ ಅನ್ನು ಕೊರೆಸಬೇಕು ಎಂಬುದನ್ನು ತಿಳಿಯಬಹುದು. ವಾಟರ್ ಡಿಟೆಕ್ಟರ್ ಎಂಬ ಅಪ್ಲಿಕೇಶನ್ ಅನ್ನು ಬಳಸಿ ನೀರಿನ ಪಾಯಿಂಟ್ ಅನ್ನು ತಿಳಿದುಕೊಳ್ಳಬಹುದು. ನೀವೇನಾದರೂ ನಿಮ್ಮ ಜಮೀನಿಗೆ ಅಥವಾ ನಿವೇಶನಕ್ಕೆ ಬೋರ್ ವೆಲ್ ಅನ್ನು ಕೊರೆಸಲು ಸಹಾಯ ಮಾಡುತ್ತದೆ.