ಬೆಂಗಳೂರು, ಮಾ. 17 : ಮನೆ ಕಟ್ಟುವಾಗ, ನಿವೇಶನ ಖರೀದಿಸುವಾಗ, ಗೃಹ ಪ್ರವೇಶಕ್ಕೆ ಎಲ್ಲದಕ್ಕೂ ಒಳ್ಳೆಯ ದಿನದ ಮುಹೂರ್ತದಲ್ಲಿ ಮಾಡುವುದು ಒಳ್ಳೆಯದು. ಖರಿದಿ ಬಗ್ಗೆ ಮಾತನಾಡಲು, ಅಡ್ವಾನ್ಸ್ ಕೊಡಲು, ರಿಜಿಸ್ಟ್ರೇಷನ್ ಮಾಡುವಾಗ ಎಲ್ಲಾ ಸಂದರ್ಭದಲ್ಲೂ ಒಳ್ಳೆಯ ದಿನ ಹಾಗೂ ಸಮಯದಲ್ಲಿ ಮಾಡುವುದು ಬಹಳ ಮುಖ್ಯ. ಇನ್ನು ವಾಸ್ತು ಮನೆಯನ್ನು ಕಟ್ಟುವುದಕ್ಕೆ ಶುರು ಮಾಡುವುದಕ್ಕೆ ಮೊದಲು ಬಾವಿಯನ್ನು ತೋಡಬೇಕಿತ್ತ. ಬಾವಿಯ ನೀರನ್ನು ಬಳಸಿಕೊಂಡು ಮನೆಯನ್ನು ನಿರ್ಮಾಣ ಮಾಡಲಾಗುತ್ತಿತ್ತು.
ಈಗ ಹೆಚ್ಚು ಬೋರ್ ಗಳನ್ನು ಕೊರೆಸುತ್ತಾರೆ. ಇದನ್ನು ಕೂಪಾರಂಭ ಎನ್ನುತ್ತಾರೆ. ಈ ಸಂದರ್ಭದಲ್ಲೂ ಶುಭ ಘಳಿಗೆಯನ್ನು ನೋಡಭೇಕು.ಜ್ಯೋತಿಷಿಗಳಿಂದ ಒಳ್ಳೆಯ ಮುಹೂರ್ತವನ್ನು ಪಡೆದು ನಾವು ಮನೆ ನಿರ್ಮಾಣವನ್ನು ಮಾಡಬೇಕು. ಮೊದಲ ಇಟ್ಟಿಗೆಯನ್ನು ಶುಭ ಘಳಿಗೆಯಲ್ಲಿ ಇಟ್ಟು ಪೂಜೆ ಮಾಡಬೇಕು. ಇನ್ನು ಮನೆ ನಿರ್ಮಾಣ ಮಾಡುವುದಕ್ಕೆ ಶುರು ಮಾಡಿದಾಗ, ಬಾಗಿಲು ಇಡುವಾಗ, ಮನೆಯ ರೂಫ್ ಹಾಕುವಾಗ ಶುಭ ದಿನವನ್ನು ನೋಡಿ ಮಾಡುವುದು ಒಳ್ಳೆಯದು. ಇನ್ನು ಗರಹಾರಂಭದ ಮುಹೂರ್ತದ ಘಳಿಗೆಯೂ ನೋಡಿ ಮನೆಯೊಳಗೆ ಪ್ರವೇಶಿಸಬೇಕು.
https://www.youtube.com/watch?v=AisqXG6CKmI
ಕೂಪಾರಂಭ, ಗೃಹಾರಂಭ, ಮುಖ್ಯದ್ವಾರ. ರೂಪ್ ನಿರ್ಮಾಣ, ಗೃಹ ಪ್ರವೇಶ. ಈ ಐದು ಸಂದರ್ಭದಲ್ಲೂ ಒಳ್ಳೆಯ ಮುಹೂರ್ತವನ್ನು ನೋಡಬೇಕು. ಇನ್ನು ಬಾಡಿಗೆ ಮನೆಗೆ ಹೋಗುವಾಗಲೂ ಒಳ್ಳೆಯ ಸಮಯವನ್ನು ನೋಡಿ ಹೋಗುವುದು ಬಹಳ ಮುಖ್ಯ. ಫ್ಲ್ಯಾಟ್ ಖರೀದಿಸಿದರೆ, ವಿಲ್ಲಾ ಖರೀದಿಸಿದೆ, ಯಾವುದೇ ಮನೆಗೆ ವಾಸಕ್ಕಾಗಿ ಹೋಗುವ ಮುನ್ನ ಅಲ್ಲಿ ಶುಭ ದಿನ ಮತ್ತು ಘಳಿಗೆಯನ್ನು ನೋಡಿ ಪ್ರವೇಶ ಮಾಡುವುದು ಬಹಳ ಮುಖ್ಯ.