14.2 C
Bengaluru
Wednesday, January 22, 2025

ಮನೆ ಕಟ್ಟುವಾಗ ಕಂಬ ಹಾಗೂ ಬಾಗಿಲುಗಳ ಬಗ್ಗೆ ತಿಳಿದಿರಬೇಕಾದ ವಾಸ್ತು ಶಾಸ್ತ್ರ

ಬೆಂಗಳೂರು, ಆ. 22 : ಮನೆಯನ್ನು ನಿರ್ಮಾಣ ಮಾಡುವಾಗ ಪಿಲ್ಲರ್ ಗಳು ಎಷ್ಟು ಮುಖ್ಯವೋ ಮನೆಯ ದ್ವಾರದ ಬಗ್ಗೆಯೂ ಎಚ್ಚರವಹಿಸಬೇಕು. ಮನೆಯ ಸ್ಥಿರತೆ ಅನ್ನುವುದು ಪಿಲ್ಲರ್ ಮೇಲೆ ಅವಲಂಬಿತವಾಗಿರುತ್ತದೆ. ಈಗ ಎಲ್ಲರೂ ಬಹುಮಹಡಿಯ ಕಟ್ಟಡಗಳನ್ನು ಕಟ್ಟಲಿಕೊಳ್ಳುತ್ತಾರೆ. ಅದರಲ್ಲೂ ಈಗ ಎಲ್ಲರೂ ಡ್ಯುಪ್ಲೇಕ್ಸ್ ಮನೆಗಳನ್ನು ನಿರ್ಮಾಣ ಮಾಡುತ್ತಾರೆ. ಇದಕ್ಕೆ ಖಂಡಿತವಾಗಿಯೂ ಪಿಲ್ಲರ್ ಗಳು ಇರಬೇಕು.

ಇಲ್ಲದಿದ್ದರೆ ಮನೆಯು ಸ್ಟ್ರಾಂಗ್ ಆಗಿ ಇರುವುದಿಲ್ಲ. ಪಿಲ್ಲರ್ ಗಳನ್ನು ಅಳವಡಿಸಿದರೆ, ಮನೆ ಕ್ರ್ಯಾಕ್ ಬೀಳುವುದಿಲ್ಲ. ಹಾಗಾಗಿ ಪ್ರತಿಯೊಂದು ಮನೆಗಳಿಗೂ ಪಿಲ್ಲರ್ ಗಳು ಅವಶ್ಯವಾಗಿರುತ್ತವೆ. ಆದರೆ, ಒಂದು ಮನೆಗೆ ಎಷ್ಟು ಪಿಲ್ಲರ್ ಗಳ ಅಗತ್ಯವಿದೆ. ವಾಸ್ತುವಿನಲ್ಲಿ ಪಿಲ್ಲರ್ ಗಳ ಬಗ್ಗೆ ಏನು ಹೇಳಲಾಗಿದೆ. ಎಂಬುದನ್ನು ನೋಡಬೇಕು. ಪಿಲ್ಲರ್ ಗಳನ್ನು ಈವನ್ ನಂಬರ್ ಗಳಲ್ಲಿ ಹಾಕಲಾಗುತ್ತದೆ. ಎರಡು, ನಾಲ್ಕು, ಆರು, ಎಂಟು ಪಿಲ್ಲರ್ ಗಳನ್ನು ಹಾಕಬಹುದು.

ಇನ್ನು ಈವನ್ ನಂಬರ್ ಗಳಲ್ಲೂ ಹತ್ತನ್ನ ಇಡಬಾರದು. ಅದರಲ್ಲೂ ಕೆಲವರು 10, 20 ಪಿಲ್ಲರ್ ಗಳು ಅಶುಭ ಎಂದು ಹೇಳುತ್ತಾರೆ. ಆದರೆ, ಸಾಮಾನ್ಯವಾಗಿ ಇದರಲ್ಲಿ ಸೊನ್ನೆ ಬರುತ್ತದೆ ಎಂಬ ಕಾರಣಕ್ಕಾಗಿ ಹೇಳಲಾಗಿದೆ. ಆದರೆ, ವಾಸ್ತು ಶಾಸ್ತ್ರದಲ್ಲಿ ಈ ಬಗ್ಗೆ ಏನನ್ನೂ ಹೇಳಿಲ್ಲ. ಈ ಪಿಲ್ಲರ್ ಗಳನ್ನು ಕಟ್ಟುವಾಗ ಬಹು ಮುಖ್ಯವಾಗಿ ಬ್ರಹ್ಮಸ್ಥಾನ, ಮರ್ಮಸ್ಥಾನ, ಅತಿಬ್ರಹ್ಮಸ್ಥಾನದ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ. ಮನೆಯ ಮಧ್ಯಭಾಗ ಎಂದು ಬ್ರಹ್ಮಸ್ಥಾನ ಎಂದು ಹೇಳಿದ್ದೇವೆ.

ಇನ್ನು ನಿವೇಶನ ಮಧ್ಯೆ ಭಾಗ ಅಂದರೆ ಈ ಮರ್ಮಸ್ಥಾನಗಳಲ್ಲೂ ಯಾವುದೇ ಕಾರಣಕ್ಕೂ ಮನೆ ಹಾಗೂ ಗೋಡೆಗಳು ಬರಬಾರದು. ಒಟ್ಟು ಐದು ಅತಿ ಮರ್ಮಸ್ಥಾನಗಳು ಒಂದು ನಿವೇಶನಕ್ಕೆ ಇರುತ್ತದೆ. ಈ ಐದು ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಪಿಲ್ಲರ್ ಗಳು ಬರಬಾರದು. ಇದೇ ರೀತಿಯಲ್ಲಿ ಸೂತ್ರಗಳು ಎಂದು ಹೇಳುತ್ತೇವೆ. ಒಟ್ಟು ನಾಲ್ಕು ಡೈಯಗ್ನಲ್ಸ್ ಗಳು ಒಟ್ಟುಗೂಡುವ ಸ್ಥಳಗಳಲ್ಲಿ ಮರ್ಮಸ್ಥಾನಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ ವಾಸ್ತುವಿನಲ್ಲಿ ಮರ್ಮ, ಅತಿ ಮರ್ಮ ಹಾಗೂ ಸೂತ್ರಗಳಲ್ಲಿ ಪಿಲ್ಲರ್ ಗಳನ್ನು ಅಳವಡಿಸಬಾರದು.

ಹಾಗಾಗಿ ಇಂಥಹ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಪಿಲ್ಲರ್ ಸ್ ಗಳು ಬರದಂತೆ ಎಚ್ಚರವಹಿಸಬೇಕು. ಯಾಕೆಂದರೆ ಈ ಹಿಂದೆ ಹೇಳಿದಂತೆ ಬ್ರಹ್ಮಸ್ಥಾನಗಳಿಗೆ ತೊಂದರೆ ಯಾದರೆ, ಅದು ಮನೆಯ ಕುಟುಂಬದ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ. ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಮನೆಗೆ ಮೂರು ಬಾಗಿಲುಗಳು ಒಂದೇ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇವೆ ಎಂದರೆ ಅದು ಪೂರ್ವದಲ್ಲಿ ಅಥವಾ ಉತ್ತರದಲ್ಲಿ ಮೂರು ಬಾಗಿಲುಗಳು ಸಾಲಾಗಿರುತ್ತವೆ.

ಇಲ್ಲ, ದಕ್ಷಿಣ ಹಾಗೂ ಪಶ್ಚಿಮದಲ್ಲೂ ಸಾಲಾಗಿ ಮೂರು ಬಾಗಿಲುಗಳು ಇರುತ್ತವೆ. ಆದರೆ, ಹೀಗೆ ಒಂದೇ ದಿಕ್ಕಿನಲ್ಲಿ ಸಾಲಾಗಿ ಮೂರು ಬಾಗಿಲುಗಳು ಇರಬಾರದು. ಹೀಗೆ ಮೂರು ಬಾಗಿಲುಗಳು ಸಾಲಾಗಿ ಇದ್ದರೆ ಶೂಲ ದ್ವಾರ ಎಂದು ಕರೆಯುತ್ತೇವೆ. ದ್ವಾರ ಶೂಲದ ರೂಪದಲ್ಲಿ ಸೃಷ್ಟಿಯಾಗಿ ಬ್ರಹ್ಮಸ್ಥಾನ ತಲುಪಿದಾಗ ನೆಗೆಟಿವ್ ಎನರ್ಜಿ ಅನ್ನು ಕೊಡುತ್ತದೆ ಎಂದು ಹೇಳಲಾಗಿದೆ. ಇದು ಕೆಲವೊಮ್ಮೆ ಮನೆಯ ಸದಸ್ಯರಿಗೆ ಮೃತ್ಯೂವನ್ನೂ ಕೂಡ ತಂದು ಕೊಡುತ್ತದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕೆಲವೊಮ್ಮೆ ಮನೆಗೆ ಎಂಟ್ರಿಯಾಗುವಾಗ ಮನೆಗೆ ಒಂದು ದ್ವಾರದಲ್ಲಿ ಹೋಗಿ ಇನ್ನೊಂದು ದ್ವಾರದ ಮೂಖಾಂತರ ಮತ್ತೊಂದು ದ್ವಾರಕ್ಕೆ ಹೋಗಿ ಬಳಿಕ ಯುಟಿಲಿಟಿ ಅನ್ನು ತಲುಪುತ್ತೇವೆ. ಮಧ್ಯದಲ್ಲಿರುವ ಬಾಗಿಲು ಅನಗತ್ಯ ಸಮಸ್ಯೆ ಅನ್ನು ತಂದುಕೊಡುತ್ತದೆ. ಲೀಕೇಜ್ ಸಮಸ್ಯೆ ಅನ್ನು ತಂದೊಡ್ಡುತ್ತದೆ. ಹಾಗಾಗಿ ಹೀಗೆ ಸಾಲಾಗಿ ಮೂರು ದ್ವಾರಗಳು ಇರುವುದು ಅಶುಭವನ್ನು ತಂದು ಕೊಡುತ್ತದೆ. ಮುಖ್ಯದ್ವಾರ ಆಗಿರಬಹುದು ಅಥವಾ ಮನೆಯ ಒಳಗೆ ಆಗಿರಬಹುದು ಸಾಲಾಗಿ ಮೂರು ಬಾಗಿಲುಗಳು ಒಂದೇ ದಿಕ್ಕಿನಲ್ಲಿ ಇರಬಾರದು.

Related News

spot_img

Revenue Alerts

spot_img

News

spot_img