ಬೆಂಗಳೂರು, ಡಿ. 28 : ಮನೆಯಲ್ಲಿ ಕಾಲಹರಣ ಮಾಡುವ ಬದಲು, ಸಿಗುವ ಸ್ವಲ್ಪ ಸಮಯವನ್ನು ಉಪಯೋಗಿಸಿಕೊಂಡ ಲಾಭ ಬರುವಂತಹ ಕೆಲಸಗಳನ್ನು ಮಾಡುವುದು ಈಗ ಸುಲಭವಾಗಿದೆ. ಈ ಹಿಂದೆ ಏನೇ ಮಾರಾಟ ಮಾಡಬೇಕೆಂದಿದ್ದರೂ ಓಡಾಡಬೇಕಿತ್ತು. ಸ್ಥಳ, ಸಮಯ ಎಲ್ಲವೂ ಬೇಕಿತ್ತು. ಆದರೆ, ಈಗ ಅದರ ತಲೆ ನೋವೇ ಇಲ್ಲ. ಆನ್ ಲೈನ್, ಸ್ಮಾರ್ಟ್ ಫೋಣ ಘಳು ಬಂದು ಎಲ್ಲವೂ ಸುಲಭವಾಗಿವೆ. ಕಷ್ಟಪಡದೆ ಸಾಕಷ್ಟು ಕೆಲಸಗಳನ್ನು ಮಾಡಬಹುದಾಗಿದೆ. ಮೊದಲೆಲ್ಲಾ ನಮಗೆ ಬಳೆ, ಬಟ್ಟೆ ಅಥವಾ ಮನೆಗೆ ಯಾವುದಾದರೂ ವಸ್ತುಗಳು ಬೇಕಿದ್ದರೆ ಅವನ್ನು ಅಂಗಡಿಗಳಿಗೆ ಹೋಗಿಯೇ ಖರೀದಿಸಬೇಕಿತ್ತು.
ಆದರೆ, ಈಗ ಸ್ಮಾರ್ಟ್ ಫೋನ್ ನಲ್ಲಿ ಸಾಕಷ್ಟು ಆಪ್ ಗಳಿವೆ. ಇನ್ ಸ್ಟಾಗ್ರಾಂನಂತಹ ಸೋಶಿಯಲ್ ಮೀಡಿಯಾಗಳೇ ಸಾಕು. ಕಣ್ಣಿಗೆ ಕಾಣುವಂತದ್ದನ್ನೆಲ್ಲಾ ಸುಲಭವಾಗಿ ಖರೀದಿಸಬಹುದು. ಆನ್ ಲೈನ್ ನಲ್ಲೇ ಏನು ಬೇಕೋ ಅದನ್ನು ಆರಿಸಿಕೊಖಂಡು, ಹಣ ಕಟ್ಟಿದರೆ, ಮನೆ ಬಾಗಿಲಿಗೆ ನಿಮ್ಮಿಷ್ಟದ ವಸ್ತು ಬಂದು ಸೇರುತ್ತದೆ. ಈಗ ಯಾಕೆ ಈ ವಿಚಾರವನ್ನು ಹೇಳುತ್ತಿದ್ದೇನೆ ಎಂದರೆ, ಹೊಸ ವರ್ಷ ಬರುತ್ತಿದೆ. ಸುಮ್ಮನೆ ಕೂರುವ ಬದಲು ಆನ್ ಲೈನ್ ವ್ಯಾಪಾರ ಶುರು ಮಾಡಿ. ಇದು ನಿಮಗೆ ಲಾಭವನ್ನು ತಂದು ಕೊಡುವುದು ಗ್ಯಾರೆಂಟಿ. ಆನ್ ಲೈನ್ ನಲ್ಲಿ ವ್ಯಾಪಾರ ಆರಭಿಸಲು ಕೆಲ ಟಿಪ್ಸ್ ಗಳನ್ನು ಇಲ್ಲಿ ನೀಡಲಾಗಿದೆ.
ಗೃಹಾಲಂಕಾರ : ಮನೆಯಲ್ಲೇ ಕುಳಿತು ಹೋಲ್ ಸೇಲರ್ ಗಳಿಂದ ಗೃಹಲಂಕಾರವನ್ನು ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚಿನ ಮೊತ್ತಕ್ಕೆ ಆನ್ ಲೈನ್ ಮೂಲಕ ವ್ಯಾಪಾರವನ್ನು ಆರಂಭಿಸಬಹುದು. ಹೀಗೆ ಚಿಲ್ಲರೆ ವ್ಯಾಪಾರ ಮಾಡುವುದಕ್ಕೆ ಹೆಚ್ಚಿನ ಸಮಯವೂ ಹಿಡಿಯುವುದಿಲ್ಲ. ಹೆಚ್ಚಿನ ಖರ್ಚು ಇರುವುದಿಲ್ಲ.
ಪೀಠೋಪಕರಣ : ಎಲ್ಲರಿಗೂ ತಮ್ಮ ಮನೆಗೆ ಹೊಸ ಪಿಠೋಪಕರಣಗಳನ್ನು ತರುವ ಆಸೆ ಇರುತ್ತದೆ. ನೀವು ಈ ಬಗ್ಗೆ ಆನ್ ಲೈನ್ ನಲ್ಲಿ ವ್ಯಾಪಾರ ಆರಂಭಿಸಿದರೆ, ಅಧಿಕ ಲಾಭವನ್ನು ಪಡೆಯಬಹುದು.
ಇ-ಕಾಮರ್ಸ್ ತಾಣ : ಬಟ್ಟೆಗಳ ವ್ಯಾಪಾರ ಮಾಡುವುದು ಸುಲಭ. ಇದಕ್ಕೆ ನೀವು ಇ-ಕಾಮರ್ಸ್ ವೆಬ್ ಸೈಟ್ ಆರಂಭಿಸಿ ಉದ್ಯಮ ಕ್ಷೇತ್ರಕ್ಕೆ ಎಂಟ್ರಿ ಪಡೆಯಬಹುದು. ಎಲ್ಲಾ ವಯೋಮಾನದವರಿಗೂ ವಿವಿಧ ಬಗೆಯ ಬಟ್ಟೆಗಳನ್ನು ಮಾರಾಟ ಮಾಡಬಹುದು. ಇದಕ್ಕೆ ನೀವು ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಂಡು ನಿಮ್ಮ ವ್ಯಾಪಾರದ ಬಗ್ಗೆ ಪ್ರಚಾರವನ್ನು ಕೂಡ ಮಾಡಬಹುದು.
ಕಸ್ಟಮೈಸ್ಡ್ ಪ್ರಿಂಟೆಡ್ ಬಟ್ಟೆಗಳು : ಇನ್ನು ಈಗಂತೂ ಎಲ್ಲರೂ ತಾವು ಧರಿಸುವ ಬಟ್ಟೆಯ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುತ್ತಾರೆ. ಹಾಗಾಗಿ ಕಸ್ಟಮೈಸ್ಡ್ ಪ್ರಿಂಟೆಡ್ ಧಿರಿಸುಗಳನ್ನು ಹೆಚ್ಚಾಗಿ ಆರಂಬಿಸುವುದರಿಂದ ಈ ಉದ್ಯಮವೂ ನಿಮಗೆ ಲಾಭವನ್ನು ತಂದುಕೊಡಲಿದೆ.
ಸೌಂದರ್ಯ ವರ್ಧಕಗಳು : ಎಲ್ಲರೂ ಬ್ಯೂಟಿ ಕಾನ್ಶಿಯಸ್ ಆಗಿರುವುದರಿಂದ ನೀವು ಮೇಕಪ್ ವಸ್ತುಗಳನ್ನು ಕೂಡ ಆನ್ ಲೈನ್ ನಲ್ಲಿ ವ್ಯಾಪಾರವನ್ನು ಆರಂಭಿಸಬಹುದು. ಸಾಕಷ್ಟು ಕಂಪನಿಗಳು ಸೌಂದರ್ಯವರ್ಧಕಗಳನ್ನು ತಯಾರಿಸುತ್ತವೆ. ಇದರಲ್ಲೂ ದೇಸಿ ಕ್ರೀಮ್ ಗಳು ಲಭ್ಯವಿದ್ದು, ಗ್ರಾಹಕರನ್ನು ಸುಲಭವಾಗಿ ಸೆಳೆಯಬಹುದು.
ಆಟಿಕೆಗಳು : ಮಕ್ಕಳಿಗೆ ಮನೆಯಲ್ಲಿ ಆಡಲು ಯಾರು ಇರುವುದಿಲ್ಲ. ಹಾಗಾಗಿ ಮಕ್ಕಳು ಆಟಿಕೆಗಳನ್ನು, ಟಿವಿ, ಮೊಬೈಲ್ ಗಳ ಮೇಲೆಯೇ ಹೆಚ್ಚು ಡಿಪೆಂಡ್ ಆಗುತ್ತಾರೆ. ಇನ್ನು ಕೆಲವರು ಮನೆಯ ಅಲಂಕಾರಕ್ಕೂ ಆಟಿಕೆಗಳನ್ನು ಖರೀದಿಸುತ್ತಾರೆ. ಹೋಲ್ ಸೇಲ್ ಅಂಗಡಿಗಳಿಂದ ಆಟಿಕೆಗಳನ್ನು ತಂದು ನೀವು ಚಿಲ್ಲರೆ ವ್ಯಪಾರ ಆರಂಭಿಸಿ, ಸಂಪಾಧಿಸಬಹುದು. ಇವಿಷ್ಟೇ ಅಲ್ಲದೇ, ಸಾಕಷ್ಟು ರೀತಿಯಲ್ಲಿ ಆನ್ ಲೈನ್ ಬಿಸಿನೆಸ್ ಮಾಡಲು ಈಗ ಅವಕಾಶಗಳು ಇವೆ. ಹೊಸ ವರ್ಷದ ಆರಂಭವನ್ನು ಹೊಸ ಉದ್ಯಮದೊಂದಿಗೆ ಆರಂಭಿಸುವುದು ಸೂಕ್ತವಾದ ಆಯ್ಕೆಯಾಗಿದೆ.