ಬೆಂಗಳೂರು, ಡಿ. 12: ಈಗ ಹೆಂಗಳೆಯರಿಗಿಂತಲೂ ಹೆಚ್ಚಾಗಿ ಪುರುಷರು ಕೂಡ ಶಾಪಿಂಗ್ ಮಾಡುತ್ತಾರೆ. ತರಹೇವಾರಿ ರೀತಿಯ ಸ್ಟೈಲ್ ನಲ್ಲಿ ಬಟ್ಟೆ, ಶೂ, ವಾಚ್, ಬೆಲ್ಟ್, ಟೈ, ಹ್ಯಾಟ್ ಗಳನ್ನು ಖರೀದಿಸಲು ಮುಗಿ ಬೀಳುತ್ತಾರೆ. ತಮ್ಮ ವಾಡ್ರೂಬ್ ಗಳಲ್ಲಿ ಎಷ್ಟೇ ವೆರೈಟಿ ಬಟ್ಟೆಗಳಿದ್ದರೂ ಸಾಲದು. ಮಾರುಕಟ್ಟೆಗಳಲ್ಲೂ ಒಂದಾದ ಮೇಲೆ ಒಂದರಂತೆ ಹೊಸ ಹೊಸ ಡಿಸೈನ್ ನ ವಸ್ತ್ರಗಳು ಬರುತ್ತಲೇ ಇರುತ್ತವೆ. ಟಿ-ಶರ್ಟ್, ಫಾರ್ಮಲ್ ಡ್ರೆಸ್, ಜೀನ್ಸ್ ಸೇರಿದಂತೆ ಒಂದಾ ಎರಡಾ.. ಎಲ್ಲ ರೀತಿಯ ಬಟ್ಟೆಗಳು ಹೊಸ ಹೊಸ ರೂಪಗಳಲ್ಲಿ ಲಭ್ಯವಿದೆ.
ಮಹಿಳೆಯರಂತೆಯೇ ಪುರುಷರು ಶಾಪಿಂಗ್ ಗೀಳಿಗೆ ಬಿದ್ದಿದ್ದಾರೆ. ಪುರುಷರ ಫ್ಯಾಷನ್ ವಿಕಸನಗೊಳ್ಳುತ್ತಿದೆ. ಅಂಕಿಅಂಶಗಳ ಪ್ರಕಾರ, ಪುರುಷರ ಉಡುಪುಗಳಿಂದ ಈಗ ಆದಾಯವೂ ಹೆಚ್ಚಾಗಿದೆ. ಮಹಿಳೆಯರ ಉಡುಗೆಗಳನ್ನು ಮೀರಿಸುವಂತೆ ಪುರಷರ ಬಟ್ಟೆಗಳು ವಿನ್ಯಾಸಗೊಳ್ಳುತ್ತಿವೆ. ಮಹಿಳೆಯರಂತೆ ಪುರುಷರು ಕೂಡ ತಮ್ಮ ವ್ಯಕ್ತಿತ್ವಕ್ಕೆ ಹೊಂದುವ ಬಟ್ಟೆಗಳನ್ನು ಧರಿಸುತ್ತಾರೆ. ನಾವು ಇಂದು ಪುರುಷರು ಶೂಗಳನ್ನು ಆನ್ ಲೈನ್ ನಲ್ಲಿ ಖರೀದಿಸುವುದು ಹೇಗೆ ಎಂದು ತಿಳಿಯಿರಿ..
ಪುರುಷರಿಗೆ ವರವಾಯ್ತು ಇಂಟರ್ನೆಟ್
ಎಲ್ಲಾ ಪುರುಷರು ಮಾಲ್‌ಗಳಿಗೆ ಹೋಗಲು ಮತ್ತು ಬಟ್ಟೆಗಳನ್ನು ಟ್ರಯಲ್ ಮಾಡಿ ಗಂಟೆಗಟ್ಟಲೆ ಸಮಯ ಕಳೆಯಲು ಇಷ್ಟಪಡುವುದಿಲ್ಲ. ಆದರೆ, ಅವರಿಗೂ ಡಿಸೈನ್ ಡಿಸೈನ್ ಬಟ್ಟೆಗಳನ್ನು ಮಹಿಳೆಯರಿಗಿಂತ ಭಿನ್ನವಾಗಿ ಧರಿಸಲು ಬಯಸುತ್ತಾರೆ. ಆದರೆ ಮಾಲ್ ಗಳಿಗೆ, ಶೋರೂಂ ಗಳಿಗೆ ಹೋಗಲು ಇಷ್ಟಪಡದವರಿಗೆ ಇಂಟರ್ನೆಟ್ ವರವಾಗಿದೆ. ಅಂತಹ ಪುರುಷರು ಈಗ ಆನ್‌ಲೈನ್ ಶಾಪಿಂಗ್ ಮಾಡಲು ಶುರು ಮಾಡಿದ್ದಾರೆ. ಬಟ್ಟೆಯಿಂದ ಹಿಡಿದು ಪ್ರತಿಯೊಂದನ್ನೂ ಆನ್ ಲೈನ್ ನಲ್ಲಿ ಖರಿದಿಸುತ್ತಾರೆ. ಆನ್ ಲೈನ್ ನಲ್ಲಿ ಶೂ ಖರೀದಿಸುವ ಪುರುಷರು ಒಮ್ಮೆ ಈ ಲೇಖನವನ್ನು ಓದಿ..
ಶೂ ಖರಿದಿಸುವ ಮುನ್ನ ಗಮನಿಸಬೇಕಾದ ಅಂಶಗಳು
ನೀವು ಶೂ ಅನ್ನು ಖರೀದಿಸಬೇಕು ಎಂದರೆ, ನಿಮಗೆ ಯಾವ ರೀತಿಯ ಶೂ ಬೇಕು ಎಂಬುದನ್ನು ತಿಳಿಯಿರಿ. ಯಾವ ಸಂದರ್ಭಕ್ಕಾಗಿ, ಯಾವ ರೀತಿಯ ಬಳಕೆಗಾಗಿ ಶೂ ನೋಡುತ್ತಿದ್ದೀರಾ ಎಂಬುದನ್ನು ಅರ್ಥ ಮಾಡಿಕೊಲ್ಳಿ. ಯಾವ ಯಾವ ಬ್ರ್ಯಾಂಡ್ ಗಳಲ್ಲಿ ಲಭ್ಯವಿದೆ. ಯಾವ ಬ್ರ್ಯಾಂಡ್ ನಿಮಗೆ ಸೂಕ್ತ ಎಂಬುದನ್ನು ಅರ್ಥೈಸಿಕೊಳ್ಳಿ. ಹಬ್ಬ, ಮದುವೆಯಂತಹ ಕಾರ್ಯಕ್ರಮಗಳಿಗೆ ಬೇಕಾ, ಇಲ್ಲ ಆಫಿಸ್ ಗೆ ಬಳಸಲು ಬೇಕಾ ಅಥವಾ ಕ್ರೀಡೆಗಾಗಿ ಶೂ ಬೇಕಾ ಎಂಬುದು ನಿಮಗೆ ತಿಳಿದಿರಲಿ. ನಂತರ ನಿಮಗೆ ಯಾವ ಶೈಲಿಯ ಶೂ ಬೇಕು ಎಂಬುದನ್ನು ತಿಳಿಯಿರಿ. ಶೂ ಯಾವ ವಿನ್ಯಾಸದ್ದಾಗಿರಬೇಖು, ಅದರ ಬಣ್ಣ ಯಾವುದಿರಬೇಕು ಎಂಬುದರ ಬಗ್ಗೆ ಸ್ಪಷ್ಟವಿರಲಿ.
ಶೂ ಅಳತೆ ಬಗ್ಗೆ ಇರಲಿ ಎಚ್ಚರ!!
ಪುರುಷರೇ ಶೂಗಳನ್ನು ಆನ್ ಲೈನ್ ನಲ್ಲಿ ಖರೀದಿಸುವ ಮುನ್ನ ಎಚ್ಚರ ವಹಿಸಿ. ನೀವು ಖರಿದಿಸುವ ಶೂಗಳ ಬಗ್ಗಶೂಗಳಿಗಾಗಿ ಇಂಟರ್ನೆಟ್ ಮಾಹಿತಿ ತಿಳಿಯಿರಿ. ಶಾಪಿಂಗ್ ವೆಬ್ ಸೈಟ್ ಗಳಲ್ಲಿ ಹುಡುಕಿ. ಶೂನ ಕಂಪನಿ ಬಗ್ಗೆ ಮಾಹಿತಿ ಅರಿಯಿರಿ. ನಿಮ್ಮ ಅಂಗಾಲಿನ ಅಳತೆ ನಿಖರವಾಗಿರಲಿ. ವೆಬ್ ಸೈಟ್ ನಲ್ಲಿ ನೀಡಿರುವ ಚಾರ್ಟ್ ಪ್ರಕಾರವೇ ಅಳತೆಯನ್ನು ಆಯ್ಕೆ ಮಾಡಿ. ಸ್ಕೇಲ್ ಇಲ್ಲವೇ ಟೇಪ್ ಅನ್ನು ಬಳಸಿ ಸೈಜ್ ತಿಳಿದುಕೊಳ್ಳಿ. ಇಂಚು ಅಥವಾ ಸೆಂಟಿಮೀಟರ್ ಲೆಕ್ಕದಲ್ಲಿ ಇಂಟರ್ನೆಟ್ ನಲ್ಲಿ ಸರಿಯಾದ ಅಳತೆಯನ್ನು ತಿಳಿಯಿರಿ. ಎಲ್ಲವನ್ನೂ ಗಮನಿಸಿ ಬಳಿಕವೇ ಖರೀದಿ ಮಾಡಿ. ಶೂ ಬಂದ ಕೂಡಲಿ ಅದನ್ನು ಧರಿಸಿ ಚೆಕ್ ಮಾಡಿಕೊಳ್ಳಿ. ಸರಿಯಾಗಿದ್ದರೆ ಬಳಸಿ ಇಲ್ಲವೇ ವಿನಿಮಯ ಮಾಡಿಕೊಳ್ಳಲು ಸುಲಭವಾಗಿತ್ತದೆ. ಅದೇನೇ ಇರಲಿ ಆನ್ ಲೈನ್ ಶಾಪಿಂಗ್ ನಲ್ಲಿ ಕೊಂಚ ಜೋಪಾನವಅಗಿರುವುದು ಉತ್ತಮ.