22.4 C
Bengaluru
Saturday, July 6, 2024

ಊಟ ಮಾಡುವ ಕೋಣೆಯನ್ನು ಸುಂದರವಾಗಿ ಸಿಂಗರಿಸಲು ಟಿಪ್ಸ್..

ಯಾವುದೇ ಮನೆಯ ಊಟದ ಕೋಣೆಗಳು ಊಟಕ್ಕಷ್ಟೇ ಸೀಮಿತವಾಗಿರದೇ ಚರ್ಚೆಗೂ ಬೆಚ್ಚನೆಯ ಸ್ಥಳವಾಗಿರುತ್ತದೆ. ಊಟವನ್ನು ಅನುಭವಿಸುತ್ತಾ ಆಸ್ವಾಧಿಸಲು ಕುಟುಂಬ ಮತ್ತು ಅತಿಥಿಗಳನ್ನು ಒಂದೇ ಸೂರಿನಡಿ ತರುವುದೇ ಊಟದ ಪಡಸಾಲೆ. ನಿಮ್ಮ ಮನೆಯ ಡೈನಿಂಗ್‌ ಹಾಲ್‌ ಅನ್ನು ಹೈಲೈಟ್ ಮಾಡಲು ಟೇಬಲ್, ನೆಲದ ಮೇಲೆ ಕಾರ್ಪೆಟ್, ಟೇಬಲ್‌ ಮೇಲೆ ಹೂವಿನ ಗುಚ್ಛ, ಔಾಲ್‌ ಪೇಪರ್‌, ಲೈಟ್‌, ಗೋಡೆಯ ಬಣ್ಣ ಬಳಸಿ, ವಿನ್ಯಾಸಗೊಳಿಸುವುದು ಬಹಳ ಮುಖ್ಯ. ಡೈನಿಂಗ್‌ ಹಾಲ್‌ ಅನ್ನು ಅಲಂಕರಿಸುವ ಮೂಲಕ ಊಟಕ್ಕೆ ಬರುವವರ ಮೇಲೆಯೂ ಕೊಂಚ ಹೆಚ್ಚು ಪ್ರೀತಿಯನ್ನು ತೋರಿಸಬಹುದು.

ಹೂವಿನ ಅಲಂಕಾರ

ಊಟದ ಕೋಣೆಯಲ್ಲಿ ನೈಸರ್ಗಿಕ ಅಂಶಗಳಿದ್ದರೆ, ವಾತಾವರಣ ತಾಜಾವಾಗಿರುತ್ತದೆ. ಡೈನಿಂಗ್ ಟೇಬಲ್ ಅನ್ನು ಸುಂದರವಾಗಿ ಕಾನುವಂತೆ ಮಾಡಲು ಮಧ್ಯಭಾಗದಲ್ಲಿ ಹೂವನ್ನು ಇಡಿ. ಡೈನಿಂಗ್‌ ಹಾಲ್‌ ನಲ್ಲಿ ಮೂಲೆಯ ಜಾಗವನ್ನು ಖಾಲಿ ಬಿಡದೇ, ಮರದ ಅಥವಾ ಎಲೆಯಂತಿರುವ ಹೂವಿನ ಗುಚ್ಛವನ್ನು ಇರಿಸಿ. ಹಸಿರು, ಕೆಂಪು, ಮರದ ಬಣ್ಣದಿಂದ ಕೂಡಿದ ವಾಸ್‌ ಮತ್ತು ಅದಕ್ಕೆ ಹೊಂದುವ ಬಣ್ಣದ ಹೂವು ಇದ್ದರೆ ನೋಡಲು ಆಕರ್ಷಣೀಯವಾಗಿರುತ್ತದೆ.

ಪಾದಗಳಿಗೆ ಮೃದುವಾದ ಕಾರ್ಪೆಟ್

ಊಟದ ಸ್ಥಳದಲ್ಲಿ ನೆಲಕ್ಕೆ ರಗ್‌ ಅನ್ನು ಅಳವಡಿಸಿದರೆ ಚೆಂದ. ನೆಲದ ಮೇಲೆ ಕಾರ್ಪೆಟ್‌ನಿಂದ ವಿಭಿನ್ನ ಗಾತ್ರಗಳು ಮತ್ತು ಆಕಾರಗಳನ್ನು ನಿಮ್ಮ ಜಾಗಕ್ಕೆ ಪೂರಕವಾಗಿ ನಿಮ್ಮ ಶೈಲಿಯನ್ನು ಆರಿಸಿ. ನಿಮ್ಮ ಊಟದ ಜಾಗದಲ್ಲಿ ಕೆಳಗೆ ಚೆಲ್ಲುವ ಪದಾರ್ಥಗಳು ಅದರಿಂದಾಗುವ ಕಲೆಗಳು ಅನಿವಾರ್ಯವಾಗಿರುತ್ತವೆ. ರಗ್‌ ಗಳನ್ನು ಆರಿಸುವಾಗ ನಿಮ್ಮ ಬುದ್ಧಿವಂತಿಕೆ ಇರಲಿ. ಮನೆಯ ಗೋಡೆ ಹಾಗೂ ನೆಲದ ಬಣ್ಣಕ್ಕೆ ಸರಿ ಹೊಂದುವಂತಿರಲಿ. ಊಟದ ಕೋಣೆಗೆ ಗಾಢ ಬಣ್ಣದ ದಪ್ಪ ಹೀರಿಕೊಳ್ಳುವ ರಗ್ ಬಟ್ಟೆಗಳು ಯೋಗ್ಯವಾಗಿರುತ್ತವೆ.

ವಾಲ್‌ ಪೇಪರ್

ಡೈನಿಂಗ್‌ ಹಾಲ್‌ ನಲ್ಲಿ ಸುಂದರವಾಗಿ ಕಾಣುವಂತಹ ವಾಲ್‌ ಪೇಪರ್ ಅನ್ನು ಅಳವಡಿಸಿ. ವಾಲ್‌ಪೇಪರ್ ಸ್ಟೈಲ್ ಕೋಣೆಯ ವಾತಾವರಣವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೂವು, ಊಟದ, ಹಣ್ಣು-ತರಕಾರಿಯಂತಹ ವಾಲ್‌ ಪೇಪರ್‌ ಗಳು, ವಾಲ್‌ ಪೇಪರ್‌ ಕೂಡ ಮಾತನಾಡುವಂತೆ ತಾಜಾವಅಗಿ ಕಾಣುವಂತಿರಲಿ.

ಕ್ರಿಯೇಟಿವ್ ಲೈಟಿಂಗ್

ನಿಮ್ಮ ಊಟದ ಮನೆಯ ಲೈಟಿಂಗ್‌ ಕೂಡ ಆಕರ್ಷಣೀಯವಾಗಿರುವಂತೆ ಆರಿಸಿ. ಸೀಲಿಂಗ್ ಅಂಚುಗಳ ಸುತ್ತಲೂ ದೀಪಗಳು ಇರಲಿ. ಊತ್ತಮವಾದ ರೂಮ್‌ ಅನ್ನು ಸುತ್ತುವರಿದ ಬೆಳಕನ್ನು ಆರಿಸಿಕೊಳ್ಳಿ. ಬಳಕೆಯ ಆಧಾರದ ಮೇಲೆ ಕೋಣೆಯ ಮನಸ್ಥಿತಿಯನ್ನು ಬದಲಾಯಿಸಲು ಡಿಮ್ಮರ್ ಸ್ವಿಚ್‌ಗಳನ್ನು ಸಹ ನೀವು ಪರಿಗಣಿಸಬಹುದು.

ವಾಲ್ ಆರ್ಟ್

ಚಿಂತನಶೀಲ ಗೋಡೆಯ ಚೌಕಟ್ಟುಗಳು ಮತ್ತು ಆಕರ್ಷಕ ಕಲಾ ತುಣುಕುಗಳು ನಿಮ್ಮ ಊಟದ ಜಾಗಕ್ಕೆ ವೈಯಕ್ತಿಕ ಶೈಲಿಯನ್ನು ತರುತ್ತವೆ. ಕಲಾ ತುಣುಕು ಅಥವಾ ಪ್ರಿಂಟ್‌ಗಳ ಗ್ಯಾಲರಿ ಗೋಡೆಯನ್ನು ಸೇರಿಸಿ ಅದು ಗೋಡೆಗೆ ಕಲಾತ್ಮಕ ನೋಟವನ್ನು ತರುತ್ತದೆ. ಅಲಂಕಾರಿಕ ಹೂದಾನಿಗಳು ಮತ್ತು ದೊಡ್ಡದಾದ ಶಿಲ್ಪಗಳು ತುಂಬಾ ಒಳ್ಳೆಯದು.

ಟೇಬಲ್‌ ಕವರ್

ನಿಮ್ಮ ಟೇಬಲ್-ಸ್ಕೇಪ್ ಅನ್ನು ಬದಲಾಯಿಸಿ. ವಿವಿಧ ರೀತಿಯ ಟೇಬಲ್ ರನ್ನರ್‌ಗಳು, ಸೀಟ್ ಕವರ್‌ಗಳು ಮತ್ತು ನ್ಯಾಪ್‌ಕಿನ್‌ಗಳಿಂದ ಆಯ್ಕೆ ಮಾಡಿ. ಮೃದುವಾದ ಊಟದ ಕುಶನ್ಗಳು ಜಾಗಕ್ಕೆ ಹೆಚ್ಚಿನ ಸೌಕರ್ಯವನ್ನು ತರುತ್ತವೆ. ನಿಮ್ಮ ಊಟದ ಕೋಣೆಯಲ್ಲಿ ಆಸಕ್ತಿದಾಯಕ ವಿನ್ಯಾಸದ ವ್ಯತಿರಿಕ್ತತೆಯನ್ನು ರಚಿಸಲು ಅಲಂಕಾರಿಕ ಡಿನ್ನರ್‌ವೇರ್‌ನೊಂದಿಗೆ ನಿಮ್ಮ ಟೇಬಲ್ ಅನ್ನು ಅಲಂಕರಿಸಿ. ಹೀಗೆ ನಿಮ್ಮ ಡೈನಿಂಗ್‌ ರೂಮ್‌ ಅನ್ನು ಅಲಂಕರಿಸಿದರೆ, ನಿಮಗೂ ಹಾಗೂ ಮನೆಗೆ ಬಂದ ಅತಿಥಿಗಳಿಗೂ ಊಟ ಮಾಡುವ ವೇಳೆ, ಖುಷಿ ಕೊಡುತ್ತದೆ.

Related News

spot_img

Revenue Alerts

spot_img

News

spot_img