26.7 C
Bengaluru
Sunday, December 22, 2024

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಬಹಿರಂಗ ಪ್ರಚಾರಕ್ಕೆ ಇನ್ನು ಮೂರೇ ದಿನ ಬಾಕಿ

ಬೆಂಗಳೂರು, ಮೇ. 05 : ವಿಧಾನಸಭೆ ಚುನಾವಣೆಯ ರಂಗು ರಾಜ್ಯದಲ್ಲಿ ಜೋರಾಗಿದೆ. ಮತಬೇಟೆಗೆ ರಾಜಕಾರಣಿಗಳು ಇನ್ನಿಲ್ಲದ ಸರ್ಕಸ್ ಗಳನ್ನು ಮಾಡುತ್ತಿದ್ದಾರೆ. ಎಲ್ಲರೂ ಪ್ರಚಾರ ಕಾರ್ಯದಲ್ಲಿದ್ದಾರೆ. ಮೇ 10 ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರಸ್ ಹಾಗೂ ಆಪ್ ಪಕ್ಷಗಳು ರಾಜ್ಯದಲ್ಲಿ ಗೆಲ್ಲಲು ಸಾಕಷ್ಟು ಕಸರತ್ತುಗಳನ್ನು ಮಾಡುತ್ತಿದ್ದಾರೆ. ಪ್ರಚಾರ ಕಾರ್ಯ ಜೋರಾಗಿದ್ದು, ಇನ್ನು ಮೂರು ದಿನದಲ್ಲಿ ಅಂತ್ಯವಾಗಲಿದೆ.

ಮೇ 8 ರಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, 8 ಮತ್ತು 9ರಂದು ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಮಾಡಲಿದ್ದಾರೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಮುಖ್ಯಾಧಿಕಾರಿ ಮನೋಜ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮನಾಹಿತಿ ನೀಡಿದ್ದಾರೆ. ಇನ್ನು ನಾಳೆ ಬೆಂಗಳುರಿಎ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದು, ರಾಜ್ಯದಲ್ಲಿ ಎರಡು ದಿನಗಳ ಕಾಲ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಮತ್ತು ಣಾಡಿದ್ದು ಎರಡೂ ದಿನ ರೋಡ್ ಶೋ ನಡೆಸಲಿದ್ದಾರೆ.

ಬಿಜೆಪಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರ ಪ್ರಚಾರ, ರೋಡ್ ಶೋಗಳು ಸೋಮವಾರ ಕೊನೆಯಾಗಲಿದೆ. 10/5/2023ರಂದು ಕ್ಷೇತ್ರಗಳಲ್ಲಿ ಮತದಾನವು ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ಮತದಾನ ನಡೆಯುವ ಮತಗಟ್ಟೆಯನ್ನು ಸರ್ಕಾರಿ ಕಛೇರಿಗಳಲ್ಲಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಸ್ಥಾಪಿಸಿದಲ್ಲಿ ಅಂತಹ ಕಛೇರಿ ಹಾಗೂ ಶಾಲೆಗಳಿಗೆ ದಿನಾಂಕ 09/05/2023ರ ಮಂಗಳವಾರದಂದು ಹಾಗೂ ಮತ ಎಣಿಕೆ ನಡೆಯುವ ದಿನಾಂಕ 13/05/2023ರಂದು ಮತ ಎಣಿಕೆ ನಡೆಯುವ ಕೇಂದ್ರಗಳಲ್ಲಿ ಮಾತ್ರ ರಜೆ ಘೋಷಿಸುವ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ಚುನಾವಣಾಧಿಕಾರಿಗಳು ಕ್ರಮ ತೆಗೆದುಕೊಳ್ಳತಕ್ಕದ್ದು ಎಂದು ಅಧಿಸೂಚನೆ ತಿಳಿಸಿದೆ.

Related News

spot_img

Revenue Alerts

spot_img

News

spot_img