27.8 C
Bengaluru
Monday, July 1, 2024

ನಿಮ್ಮ ಮನೆಯ ಅಡುಗೆ ಮನೆಯಲ್ಲಿ ಹೂ ಕುಂಡಗಳಿದ್ದರೆ ಸುಂದರವೋ ಸುಂದರ..

ಬೆಂಗಳೂರು, ಜು. 29 : ಹಬ್ಬ-ಹರಿ ದಿನಗಳಲ್ಲಿ ಮನೆಗೆ ಬಂದವರು ಮನೆಯ ಅಲಂಕಾರವನ್ನು ಕಂಡು ಬೆರಗಾಗಬೇಕು ಎಂದು ಆಸೆ ಪಡುತ್ತಾರೆ. ಈಗಂತೂ ಸಾಕಷ್ಟು ವೆಬ್ ಸೈಟ್ ಗಳು ಮನೆ ಅಲಂಕಾರಕ್ಕೆ ಟಿಪ್ಸ್ ಗಳನ್ನು ಕೊಡುತ್ತವೆ. ಅಲ್ಲದೇ, ಯೂಟ್ಯೂಬ್ ನಲ್ಲಿ ವೀಡಿಯೋಗಳಿಗೇನು ಕಡಿಮೆ ಇಲ್ಲ. ಬಿಡುವಿನ ಸಮಯದಲ್ಲಿ ಮನೆ ಅಲಂಕಾರ ಮಾಡುವುದಕ್ಕೆ ಗೃಹಿಣಿಯರು ಬಯಸುತ್ತಾರೆ. ಎಷ್ಟೇ ಹಣ ಖರ್ಚು ಮಾಡಿದರೂ ನಿಮ್ಮ ಮನೆಯಲ್ಲಿ ಪಾಸಿಟಿವ್ ವೈಬ್ಸ್ ಇಲ್ಲವಾದರೆ, ಮನೆಯನ್ನು ನೋಡಲು ಚೆಂದವಾಗಿ ಕಾಣುತ್ತಿಲ್ಲ ಎಂದರೆ, ಬೇಸರವಾಗುವುದು ಸಹಜ.

ಮನೆಯನ್ನು ಕಟ್ಟುವಾಗಲೇ ಇಂಟಿರಿಯರ್ ಡಿಸೈನ್ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿರುತ್ತೀವಿ. ಹಾಗಿರುವಾಗ ಮನೆಯನ್ನು ಅಂದ ಮಾಸತಂದಿರಲಿ ಎಂದು ಬಯಸುವ ಗೃಹಿಣಿಯರಿಗೆ ಬಹು ಮುಖ್ಯವಾಗಿ ಇಷ್ಟವಾಗುವ ಅಥವಾ ಹೆಚ್ಚು ಸಮಯ ಕಳೆಯುವ ಸ್ಥಳವೆಂದರೆ ಅದು ಅಡುಗೆ ಮನೆ. ಅಡುಗೆ ಮನೆಯನ್ನು ಎಷ್ಟೇ ಸ್ವಚ್ಛವಾಗಿಡಲು ಪ್ರಯತ್ನಿಸಿದರೂ ಅದು ಕೊಳಕಾಗುತ್ತಲೇ ಇರುತ್ತದೆ. ಆದರೆ ಅಡುಗೆ ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿಗೆ ಉಲ್ಲಾಸ ಕೊಡುತ್ತವೆ ಹೂವಿನ ಗಿಡಗಳು.

ನಿಮ್ಮ ಮನೆಯ ಅಡುಗೆ ಮನೆಯನ್ನು ಒಮ್ಮೆ ಹೂವಿನ ಗಿಡಗಳಿಂದ ಅಲಂಕರಿಸಿ ನೋಡಿ. ಆಗ ನೀವೇ ನಂಬಲಾರದಷ್ಟು ಬದಲಾವಣೆಯಾಗಿರುತ್ತದೆ. ಸಾಮಾನ್ಯವಅಗಿ ಎಲ್ಲರ ಮನೆಯ ಅಡುಗೆ ಮನೆ ಚಿಕ್ಕದಾಗಿರುತ್ತದೆ. ಆದರೆ, ಈಗ ಮನೆ ಕಟ್ಟುವಾಗಲೇ ಅಡುಗೆ ಮನೆಗೆ ಕೊಂಚ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಕೆಲವರು ಓಪನ್ ಕಿಚನ್ ಕಟ್ಟಿಸಿಕೊಂಡರೆ, ಮತ್ತೆ ಕೆಲವರು ಅಡುಗೆ ಮನೆಯನ್ನು ಸಾಕು ಸಾಕು ಎನ್ನುವಷ್ಟು ದೊಡ್ಡದಾಗಿ ಕಟ್ಟಿಸಿರುತ್ತಾರೆ.

ನಿಮ್ಮ ಅಡುಗೆ ಮನೆಯಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದರೆ, ಕಿಚನ್ ಸ್ಲ್ಯಾಬ್ ಮೇಲೆ ಪಾಟ್ ಇಟು ಅದರಲ್ಲಿ ಯಾವುದಾದರೂ ನಿಮ್ಮಿಷ್ಟದ ಹೂವಿನ ಗಿಡವನ್ನು ನೆಡಿ. ಗಿಡವನ್ನು ನೇತಾಕಲು ಜಾಗವಿದ್ದರೆ, ಹಾಗೂ ಮಾಡಬಹುದು. ಅಡುಗೆ ಮನೆಯಲ್ಲಿ ಸದಾ ಘಮ ಗುಡುವಂತಹ ಲೆಮೆನ ಗ್ರಾಸ್ ಅನ್ನು ಬೆಳೆಸಿ. ಇದು ಸದಾ ಹಸಿರಾಗಿರುವುದರ ಜೊತೆಗೆ ಇದರ ಘಮ ಮನಸ್ಸನ್ನು ಉಲ್ಲಾಸದಿಂದ ಇರಲು ಪ್ರೇರೇಪಿಸುತ್ತದೆ.

ನಿಮ್ಮ ಅಡುಗೆ ಮನೆಗೆ ಬೆಳಕು ಇಲ್ಲ ಎಂದಾದರೆ, ಅಲ್ಲಿ ಗಿಡಗಳನ್ನು ಬೆಳೆಸುವುದು ಬೇಡ. ಗಿಡಗಳು ಅಡುಗೆ ಮನೆಯಲ್ಲಿ ಇನ್ನಷ್ಟು ಕತ್ತಲು ಮಯ ಮಾಡುತ್ತದೆ. ಇದರಿಂದ ಅಂದ ಹಾಳಾಗುತ್ತದೆ. ಅಡುಗೆ ಮನೆಯ ಕಿಟಕಿ ಗಳ ಬಳಿ ಜಾಗವಿದ್ದರೆ, ಅಲ್ಲಿ ಗಿಡಗಳನ್ನು ಇಡಬಹುದು. ಆದರೆ, ತರಕಾರಿ ಹೆಚ್ಚುವ ಹಾಗೂ ಸ್ಟೌವ್ ಇರುವ ಕಡೆ ಪಾಟ್ ಇಡುವುದು ಸೂಕ್ತವಲ್ಲ. ಇನ್ನು ನಿಮ್ಮ ಅಡುಗೆ ಮನೆಯ ಸಿಂಕ್ ಬಳಿ ಹೆಚ್ಚು ಜಾಗವಿದ್ದರೆ, ಅಲ್ಲೂ ಗಿಡಗಳನ್ನು ಇಡಬಹುದು.

ಇನ್ನು ಹೂವಿನ ಗಿಡಗಳನ್ನು ಸಿಂಕ್ ಬಳಿ ಇಡಬೇಡಿ, ಹೂವುಗಳು ನಾಶವಾಗುವ ಸಾಧ್ಯತೆ ಇರುತ್ತದೆ. ಇನ್ನು ಅಡುಗೆ ಮನೆಯಲ್ಲಿ ತುಳಸಿ, ದೊಡ್ಡಪತ್ರೆ, ಕೊತ್ತಂಬರಿ ಸೊಪ್ಪು, ಪುದೀನ, ಪಾರ್ಸ್ಲಿ ಅಂತಹ ಸುವಾಸನಾಯುಕ್ತ ಗಿಡಗಳನ್ನು ನೆಡಿ. ಇನ್ನು ಈ ಗಿಡಗಳನ್ನು ಆಗಾಗ ಬಿಸಿನಲ್ಲಿಡುವುದರಿಂದ ಗಿಡಗಳು ಹಾಳಾಗುವುದಿಲ್ಲ. ನಿಮ್ಮ ಮನಸ್ಸಿಗೂ ಇವು ಖುಷಿ ಕೊಡುತ್ತವೆ.

Related News

spot_img

Revenue Alerts

spot_img

News

spot_img