20.5 C
Bengaluru
Tuesday, July 9, 2024

ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನಡುವಿನ ಪ್ರಮುಖ ವ್ಯತ್ಯಾಸಗಳಿವು

ನವದೆಹಲಿ: ಇಂದಿನ ಯುಗದಲ್ಲಿ ಬ್ಯಾಂಕುಗಳು  ಕಾರ್ಡ್‌ನೊಂದಿಗೆ ವಹಿವಾಟು(transaction) ನಡೆಸುವ ಸೌಲಭ್ಯವನ್ನು ನೀಡುತ್ತವೆ. ಜನರು ಎಟಿಎಂ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು(Debitcard) ಮತ್ತು ಕ್ರೆಡಿಟ್ ಕಾರ್ಡ್‌ಗಳ(Creditcard) ಮೂಲಕ ಹಣವನ್ನು ವ್ಯವಹಾರ ಮಾಡುತ್ತಾರೆ. ಆದರೆ ಈ ವಿಭಿನ್ನ ಕಾರ್ಡ್‌ಗಳಲ್ಲಿ ವಿಶೇಷ ವ್ಯತ್ಯಾಸವಿದೆ, ಎರಡು ಕಾರ್ಡ್‌ಗಳು ಕೂಡಾ 16 ಡಿಜಿಟಲ್‌(digital) ಅಂಕಿಯನ್ನು, ಎಕ್ಸ್‌ಪೈರ್ ದಿನಾಂಕ, ಮ್ಯಾಗ್‌ನೆಟಿಕ್ ಸ್ಟ್ರಿಪ್‌, ಇಎಂವಿ(EMV) ಚಿಪ್‌ಗಳನ್ನು ಹೊಂದಿರುತ್ತದೆ. ಇವೆಲ್ಲವೂ ಕೂಡಾ ಒಂದೇ ರೀತಿ ಆಗಿದ್ದರೂ ಕೂಡಾ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್‌ನ ಕಾರ್ಯವೈಖರಿ ಬೇರೆಯೇ ಆಗಿದೆ.ಕಾರ್ಡ್‌ಗಳು ಜನರ ಶಾಪಿಂಗ್(shopping) ಅನ್ನು ಸುಲಭಗೊಳಿಸುತ್ತದೆ. ಹೆಚ್ಚುವರಿಯಾಗಿ, ಬಿಲ್ಲಿಂಗ್(billing) ಅವಶ್ಯಕತೆಗಳನ್ನು ಪೂರೈಸುವಲ್ಲಿ ಚಿಲ್ಲರೆ ಮಾರಾಟಗಾರರಿಗೆ ಇದು ಸಹಕಾರಿಯಾಗಿದೆ.ಡೆಬಿಟ್ ಕಾರ್ಡ್‌ನಲ್ಲಿ ನಿಮ್ಮಲ್ಲಿರುವ ಮೊತ್ತದಿಂದ ನೀವು ಖರೀದಿ ಮಾಡಿದರೆ, ಕ್ರೆಡಿಟ್ ಕಾರ್ಡ್‌ನಲ್ಲಿ ನೀವು ಮೊತ್ತವನ್ನು ಸಾಲ ಮಾಡಿ ಖರೀದಿ ಮಾಡುವುದು ಆಗಿದೆ. ಇವೆರಡಕ್ಕೂ ಕೂಡಾ ಗರಿಷ್ಠ ಮತ್ತು ಕನಿಷ್ಠ ವಹಿವಾಟು ಮಿತಿಗಳು(Limit) ಇದೆ.

ಡೆಬಿಟ್ ಕಾರ್ಡ್ (Debit card):

ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಹೊಂದಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ,ವಿಶ್ವಾದ್ಯಂತ ಹೆಚ್ಚು ಬಳಸಿದ ಪಾವತಿ ಕಾರ್ಡ್‌ಗಳಲ್ಲಿ, ಡೆಬಿಟ್ ಕಾರ್ಡ್‌ಗಳು(Debitcard) ಒಂದು ರೀತಿಯ ಪ್ರಿಪೇಯ್ಡ್ ಕಾರ್ಡ್‌ಗಳಾಗಿವೆ.ವೀಸಾ ಅಥವಾ ಮಾಸ್ಟರ್‌ಕಾರ್ಡ್‌ಗಳಲ್ಲಿ(Mastercard) ಕ್ರೆಡಿಟ್ ಕಾರ್ಡ್‌ನಂತೆಯೇ ಗ್ರಾಹಕರ ಸುರಕ್ಷತೆಯು ಇರಲಿದೆ. ಇನ್ನು ಸ್ಟಾಡರ್ಡ್ ಡೆಬಿಟ್ ಕಾರ್ಡ್‌ನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗಿಲ್ಲ.ಇದು ಕ್ರೆಡಿಟ್ ಕಾರ್ಡ್‌ಗಿಂತ ಭಿನ್ನವಾಗಿದೆ. ಏಕೆಂದರೆ ಗ್ರಾಹಕರು ಈ ಕಾರ್ಡ್ ಮೂಲಕ ಬಳಸುವ ಹಣಕ್ಕೆ ಬಡ್ಡಿ ಪಾವತಿಸಬೇಕಾಗಿಲ್ಲ.ಎಟಿಎಂ ಕಾರ್ಡ್‌ನಂತೆ, ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು ನಿಮಗೆ ನಾಲ್ಕು-ಅಂಕಿಯ ವೈಯಕ್ತಿಕ ಗುರುತಿನ ಸಂಖ್ಯೆ ಅಗತ್ಯವಿದೆ.

ಕ್ರೆಡಿಟ್ ಕಾರ್ಡ್‌(Creditcard)

ಕ್ರೆಡಿಟ್ ಕಾರ್ಡ್‌ಗಳನ್ನು ಹಣಕ್ಕೆ ಪರ್ಯಾಯವಾಗಿ ಬಳಸಬಹುದು. ಈಗ ಅನೇಕ ಸ್ಥಳಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ಸ್ವೀಕರಿಸಲಾಗುತ್ತದೆ.ಕ್ರೆಡಿಟ್ ಕಾರ್ಡ್‌ಗಳು ಎಟಿಎಂಗಳಿಂದ ಹಣವನ್ನು ವಿತ್ ಡ್ರಾ ಮಾಡುವ ಸೌಲಭ್ಯವನ್ನು ಸಹ ಒದಗಿಸುತ್ತವೆ.ಪ್ರಮುಖವಾಗಿ ಮೂರು ಬಗ್ಗೆಯ ಕ್ರೆಡಿಟ್ ಕಾರ್ಡ್‌ಗಳು ಇದೆ. ಸ್ಟಾಡರ್ಡ್ ಕ್ರೆಡಿಟ್ ಕಾರ್ಡ್ ಹೆಚ್ಚಾಗಿ ಯಾವುದೇ ವಾರ್ಷಿಕ ಶುಲ್ಕವನ್ನು ಹೊಂದಿರುವುದಿಲ್ಲ. ಕ್ರೆಡಿಟ್ ಅನ್ನು ಬಳಸಿಕೊಂಡು ಆನ್‌ಲೈನ್ ಆಫ್‌ಲೈನ್ ವಸ್ತುಗಳ್ನನು ಖರೀದಿಸುವ ಅವಕಾಶವಿದೆ. ಇನ್ನು ಪ್ರೀಮಿಯಂ ಕ್ರೆಡಿಟ್ ಕಾರ್ಡ್ ಕೂಡಾ ಇದೆ.ಇದನ್ನು ಹೆಚ್ಚಾಗಿ ಸಾಲದ ಆಯ್ಕೆಯಾಗಿ ಬಳಸಲಾಗುತ್ತದೆ ಮತ್ತು ಗ್ರಾಹಕರ ಸಾಲವನ್ನು ಪರಿಶೀಲಿಸಿದ ನಂತರವೇ ಬ್ಯಾಂಕ್ ಈ ಸೇವೆಯನ್ನು ನೀಡುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ನಿಮ್ಮ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಮೇಲೆ ಪರಿಣಾಮ ಬೀರುತ್ತದೆ.ಕ್ರೆಡಿಟ್ ಕಾರ್ಡ್ ವಹಿವಾಟಿನಲ್ಲಿ, ಅನೇಕ ಬ್ರಾಂಡ್‌ಗಳು ಸೇವೆಯಲ್ಲಿ ಆಕರ್ಷಕ ರಿಯಾಯಿತಿಯನ್ನು ಸಹ ನೀಡುತ್ತವೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯನ್ನು ನಿಗದಿತ ಸಮಯ ಮಿತಿಯೊಳಗೆ ಮಾಡಬೇಕು. ಹಾಗೆ ಮಾಡಲು ವಿಫಲವಾದರೆ ದಂಡ ಮತ್ತು ಬಡ್ಡಿಯನ್ನು ಪಾವತಿಸುವ ಅಗತ್ಯವಿದೆ.

Related News

spot_img

Revenue Alerts

spot_img

News

spot_img