7 ನೇ ವೇತನ ಅಯೋಗದ ಮಧ್ಯಂತರ ವರದಿ ಅನುಷ್ಠಾನ ಕುರಿತು ಸರ್ಕಾರ ಆದೇಶ ಹೊರಡಿಸಿದರೆ ಮಾತ್ರ ಈಗಾಗಲೇ ಕರೆ ನೀಡಿರುವ ಮುಷ್ಕರವನ್ನು ವಾಪಸ್ಸು ಪಡೆಯಲಾಗುವುದು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ರವರು ಸ್ಪಷ್ಟ ಪಡಿಸಿದ್ದಾರೆ. ಅವರು ಇಂದು ಸರ್ಕಾರಿ ನೌಕರರ ಸಂಘದಿಂದ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ ಈ ಹಿಂದಿನಿಂದಲೂ 7 ನೇ ವೇತನ ಆಯೋಗದ ಮಧ್ಯಂತರ ವರದಿಯನ್ನು ಪಡೆದು ಜಾರಿಗೊಳಿಸುವಂತೆ ಒತ್ತಯಿಸುತ್ತಲೇ ಬರಲಾಗಿದೆ. ಮುಖ್ಯ ಮಂತ್ರಿ ಗಳು ಘೋಷಿಸಿದ್ದ ಬಜೆಟ್ ನಲ್ಲಿ ಈ ಬಗ್ಗೆ ವಿಶ್ವಾಸವಿತ್ತಾದರೂ ಅದು ಹುಸಿಯಾಗಿದೆ. ಅದ್ದರಿಂದ ಮಾರ್ಚ್ 01 ರಿಂದ ಅನಿವಾರ್ಯವಾಗಿ ಅನಿರ್ಧಿಷ್ಟವಧಿ ಕರ್ತವ್ಯಕ್ಕೆ ಗೈರಾಜರಾಗುವ ಮೂಲಕ ಮುಷ್ಕರವನ್ನು ಮಾಡಲಿದ್ದೇವೆ ಎಂದರು.
ಈಗಾಗಲೇ ಫೆ 21 ರಂದು ಬೆಂಗಳೂರಿನಲ್ಲಿ 200 ವೃಂದ ಸಂಘಗಳು ಸೇರಿದಂತೆ ಎಲ್ಲಾ ಸರ್ಕಾರಿ ನೌಕರ ಸಂಘಟನೆಗಳ 5000 ಪ್ರತಿನಿಧಿಗಳು ಸೇರಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸರ್ವ ಸಮ್ಮತವಾಗಿ ಕರ್ತವ್ಯದಲ್ಲಿ ಗೈರಾಜರಾಗುವ ಬಗ್ಗೆ ತಿರ್ಮಾನ ಕೈಗೊಳ್ಳಲಾಗಿದೆ. ಅದ್ದರಿಂದ ಗ್ರಾಮ ಪಂಚಾಯಿತಿ ಇಂದ ಇಡಿದು ವಿಧಾನಸೌಧದ ವರೆಗೂ ಎಲ್ಲಾ ನೌಕರರು ಗೈರಾಜರಾಗಲಿದ್ದಾರೆ. ಶಿಕ್ಷಣ ಕ್ಷೇತ್ರದ ಸೇವೆಗಳು ಸಹ ಲಭ್ಯವಿರುವುದಿಲ್ಲ ಎಂದು ತಿಳಿಸಿದರು