20.5 C
Bengaluru
Tuesday, July 9, 2024

ಮೂರೇ ತಿಂಗಳಲ್ಲಿ 30 ಲಕ್ಷ ದಂಡ ವಿಧಿಸಿದ ರಾಜ್ಯ ಮಾಹಿತಿ ಆಯುಕ್ತರು

ಬೆಂಗಳೂರು, ಜ. 05 : ರಾಜ್ಯ ಮಾಹಿತಿ ಆಯುಕ್ತ ಎಚ್.ಸಿ.ಸತ್ಯನ್‌ ಅವರು ಹೊರಡಿಸಿದ ಆದೇಶಗಳ ವಿಶ್ಲೇಷಣೆಯನ್ನು ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಮಾಡಿದೆ. ಒಂದೇ ದಿನದಲ್ಲಿ ಬರೋಬ್ಬರಿ 2.20 ಲಕ್ಷ ದಂಡವನ್ನು ವಿಧಿಸಿದ್ದು, ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 30 ಲಕ್ಷ ದಂಡವನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ. ಸದ್ಯ ಮಾಹಿತಿ ಹಕ್ಕು ಅಧ್ಯಯನ ಕೇಂದ್ರ 25.11.2022 ರಂದು ಆಯುಕ್ತರು ಆಲಿಸಿದ ಮೇಲ್ಮನವಿಗಳೂ ಮತ್ತು ವಿಧಿಸಿದ ದಂಡದ ಬಗ್ಗೆ ಗಮನಿಸಿ ವಿಶ್ಲೇಷಣೆ ಮಾಡಿದೆ.

ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ಅಧಿಕಾರಿಗಳ ವಿರುದ್ಧ ರಾಜ್ಯ ಮಾಹಿತಿ ಆಯುಕ್ತ ಎಚ್.ಸಿ. ಸತ್ಯನ್ ಅವರು ದಂಡ ವಿಧಿಸಿ ಆದೇಶಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಮೂವತ್ತು ಲಕ್ಷ ದಂಡವನ್ನು ವಿಧಿಸಿದ್ದಾರೆ. ಶೋಕಾಸ್ ನೋಟಿಸ್ ಗೆ ತಮ್ಮ ವಿವರಣೆ ನೀಡುವಲ್ಲಿ ವಿಫಲವಾದ ಹಾಗೂ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಲು ವಿಫಲವಾದ ವಿವಿಧ ಪ್ರಕರಣಗಳ ಅಧಿಕಾರಿಗಳಿಗೆ ದಂಡ ವಿಧಿಸಿರುವುದು ಬೆಳಕಿಗೆ ಬಂದಿದೆ. ದಂಡದ ಮೊತ್ತವನ್ನು ಸರ್ಕಾರದ ಲೆಕ್ಕ ಶೀರ್ಷಿಕೆ ಖಾತೆಗೆ ಜಮಾ ಮಾಡಿಸಲಾಗಿದೆ.

ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ದಂಡವನ್ನು ವಿಧಿಸುವಾಗ ನೈಸರ್ಗಿಕ ನ್ಯಾಯದ ತತ್ವವನ್ನು ಅನುಸರಿಸಲಾಗಿದೆ ಎಂದು ಆದೇಶಗಳ ವಿಶ್ಲೇಷಣೆ ಸೂಚಿಸುತ್ತದೆ. ಎಲ್ಲಾ ಪ್ರಕರಣಗಳಲ್ಲಿ ದಂಡ ವಿಧಿಸುವ ಮುನ್ನ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಮಾಹಿತಿ ಆಯೋಗದ ಆದೇಶಗಳನ್ನು ಪಾಲಿಸಲು ವಿಫಲರಾದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಎಲ್ಲಾ ಪ್ರಕರಣಗಳಲ್ಲಿ ದಂಡವನ್ನು ವಿಧಿಸಲಾಗಿದೆ. ರಾಜ್ಯ ಮಾಹಿತಿ ಆಯುಕ್ತರಾದ ಎಚ್.ಸಿ. ಸತ್ಯನ್, ದಂಡ ವಿಧಿಸಿರುವ ಅತಿ ಹೆಚ್ಚು ಪ್ರಕರಣಗಳಲ್ಲಿ ಒಂದೇ ದಿನದಲ್ಲಿ 2.20 ಲಕ್ಷ ರೂ. ದಂಡ ವಿಧಿಸಿರುವುದನ್ನು ವಿಶ್ಲೇಷಿಸಲಾಗಿದೆ.

ಕಾಲ ಮಿತಿಯೊಳಗೆ ಮಾಹಿತಿ ನೀಡದ, ಸಕಾಲದಲ್ಲಿ ಕಾರ್ಯ ನಿರ್ವಹಿಸದ ಅಧಿಕಾರಿಗಳಿಗೆ ರಾಜ್ಯ ಮಾಹಿತಿ ಆಯುಕ್ತ ಎಚ್.ಸಿ ಸತ್ಯನ್ ತೆರೆದ ನ್ಯಾಯಾಲಯದಲ್ಲಿ ದಂಡ ವಿಧಿಸಿ ಆದೇಶ ಹೊರಡಿಸಿರುವುದರ ಬಗ್ಗೆ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. 25.11.2022 ರಂದು ಒಂದೇ ದಿನ ಬರೋಬ್ಬರಿ 21 ಮೇಲ್ಮನವಿಗಳನ್ನು ಆಯುಕ್ತರು ಆಲಿಸಿದ್ದು, ಇದರಲ್ಲಿ 15 ಪ್ರಕರಣಗಳಿಗೆ ದಂಡ ವಿಧಿಸಿದ್ದು, 5 ಪ್ರಕರಣಗಳಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಒಟ್ಟಾರೆ ಒಂದೇ ದಿನದಲ್ಲಿ 2.20 ಲಕ್ಷ ದಂಡ ವಿಧಿಸಿ ಆದೇಶಿಸಿರುವುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

25.11.2022 ರಂದು ಆಲಿಸಿದ ಪ್ರಕರಣಗಳ ಪಟ್ಟಿ:
1. KIC4103APL2018
ಶ್ರೀ ವಾಸುದೇವ ಮೂರ್ತಿ, ರೇಂಜ್ ಫಾರೆಸ್ಟ್ ಆಫೀಸರ್, ಮಾಲೂರು ವಲಯ, ಕೋಲಾರ ಜಿಲ್ಲೆ – 25000 ರೂ. ದಂಡ

2. KIC7746APL2018
ಶ್ರೀಮತಿ ಲಕ್ಷ್ಮೀ ದೇವಿ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, O/o CMC, ಹೆಬ್ಬಗೋಡಿ ಆನೇಕಲ್ ತಾಲೂಕು – 10000 ರೂ. ದಂಡ

3. KIC16421APL2018
ಮಂಡೂರು ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಬೆಂಗಳೂರು ದಕ್ಷಿಣ ತಾಲೂಕು

4. KIC11451APL2021
ಮಾಹಿತಿ ಸೌಧ, ರಾಜ್ಯ ಮಾಹಿತಿ ಆಯೋಗ ಅಧೀನ ಕಾರ್ಯದರ್ಶಿ, ಬೆಂಗಳೂರು.
ಶೋಕಾಸ್ ನೋಟೀಸ್ ಕೊಡಲಾಗಿದೆ.

5. KIC11686APL2022
ಶ್ರೀ ವಿಜಯಕುಮಾರ್, ಮಿನಿ ವಿಧಾನಸೌಧ, ತಹಶೀಲ್ದಾರ್, ರಾಮನಗರ – 10000 ರೂ. ದಂಡ

6. KIC12985APL2022
ಶ್ರೀ ಮಹಾದೇವ, ಹಿರಿಯ ಸಬ್ ರಿಜಿಸ್ಟ್ರಾರ್, ಮಹಾದೇವಪುರ, ಬೆಂಗಳೂರು – 10000 ರೂ. ದಂಡ

7. KIC12996APL2022
ಶ್ರೀ ಮಂಜುನಾಥ, ತಹಶೀಲ್ದಾರ್, ನೆಲಮಂಗಲ ತಾಲೂಕು ಕಚೇರಿ, ನೆಲಮಂಗಲ – 25000 ರೂ. ದಂಡ

8. KIC15047APL2022
ಶ್ರೀಮತಿ ಅನಿತಾ ಲಕ್ಷ್ಮೀ, ಹೆಚ್ಚುವರಿ ಜಿಲ್ಲಾಧಿಕಾರಿ, ಬೆಂಗಳೂರು ನಗರ – 10000 ರೂ ದಂಡ

9. KIC15114APL2022
ದೊಡ್ಡ ಅಗ್ರಹಾರ ಗ್ರಾಮ ಪಂಚಾಯ್ತಿ, ಶಿರಾ ತಾಲೂಕು, ತುಮಕೂರು ಜಿಲ್ಲೆ – ಶೋಕಾಸ್ ನೋಟೀಸ್ ಕೊಡಲಾಗಿದೆ.

10. KIC15132APL2022
ಶ್ರೀ ನರಸಿಂಹ ಮೂರ್ತಿ, ಪಿಡಿಓ, ಹೊಸಹಳ್ಳಿ ಗ್ರಾಮ ಪಂಚಾಯ್ತು, ಕುಣಿಗಲ್ ತಾಲೂಕು, ತುಮಕೂರು ಜಿಲ್ಲೆ – 10000 ರೂ. ದಂಡ

11. KIC15141APL2022
ಚಂದ್ರಪ್ಪ, ಕಾರ್ಯದರ್ಶಿ, ಕನ್ನಮಂಗಲ ಗ್ರಾಮ ಪಂಚಾಯ್ತಿ, ದೇವನಹಳ್ಳಿ ತಾಲೂಕು – 25000 ರೂ. ದಂಡ

12. KIC15347APL2022
ಶ್ರೀಮತಿ ಅನಿತಾ ಲಕ್ಷ್ಮೀ, ವಿಶೇಷ ಜಿಲ್ಲಾಧಿಕಾರಿ, ಬೆಂಗಳೂರು ನಗರ – 10000 ರೂ. ದಂಡ

13. KIC15399APL2022
ಶ್ರೀ ಚಿನ್ನಪ್ಪ, ಪಿಡಿಓ, ಚಲ್ದಿಗಾನಹಳ್ಳಿ ಗ್ರಾಮ ಪಂಚಾಯ್ತಿ, ಶ್ರೀನಿವಾಸಪುರ ತಾಲೂಕು, ಕೋಲಾರ – 10000 ರೂ. ದಂಡ

14. KIC15410APL2022
ಚಿನ್ನಪ್ಪ, ಪಿಡಿಓ ಕಾರ್ಯದರ್ಶಿ, ಯಲ್ದೂರು ಗ್ರಾಮ ಪಂಚಾಯ್ತಿ, ಶ್ರೀನಿವಾಸಪುರ ತಾಲೂಕು, ಕೋಲಾರ ಜಿಲ್ಲೆ – 10000 ರೂ. ದಂಡ

15. KIC16433APL2022
ಶ್ರೀ ಗೋಪಿ, ಕಾರ್ಯದರ್ಶಿ, ಹಾಸನದಳ್ಳಿ, ಗ್ರಾಮ ಪಂಚಾಯ್ತಿ, ಮಾಲೂರು ತಾಲೂಕು, ಕೋಲಾರ ಜಿಲ್ಲೆ – 5000 ರೂ. ದಂಡ

16. KIC16442APL2022
ಬಾನಹಳ್ಳಿ ಕಾರ್ಯದರ್ಶಿ, ಮಾಲೂರು ತಾಲೂಕು, ಕೋಲಾರ ಜಿಲ್ಲೆ – ಶೋಕಾಸ್ ನೋಟೀಸ್ ಕೊಡಲಾಗಿದೆ.

17. KIC16451APL2022
ಶ್ರೀ ಆನಂದ ಕುಮಾರ್, ಕಾರ್ಯದರ್ಶಿ, ಹುಲಿ ಮಂಗಲ ಹೊಸಕೋಟೆ ಗ್ರಾಮ ಪಂಚಾಯ್ತಿ, ಮಾಲೂರು ತಾಲೂಕು, ಕೋಲಾರ ಜಿಲ್ಲೆ – 10000 ರೂ. ದಂಡ

18. KIC17155APL2022
ಶ್ರೀ ಮಂಜುನಾಥ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಕರ್ನಾಟಕ ನೀರಾವರಿ ನಿಗಮ, ಸುವರ್ಣವತಿ, ಅತ್ತಿಗುಲಿಪುರ, ಚಾಮರಾಜನಗರ – 25000 ರೂ. ದಂಡ

19. KIC17168APL2022
ಕಡಬಗೆರೆ ಗ್ರಾಮ ಪಂಚಾಯ್ತಿ, ಬೆಂಗಳೂರು ಉತ್ತರ – ಶೋಕಾಸ್ ನೋಟೀಸ್ ನೀಡಲಾಗಿದೆ.

20. KIC17177APL2022
ಬುರುಜನರೊಪ್ಪ ಗ್ರಾಮ ಪಂಚಾಯ್ತಿ, ಹಿರಿಯೂರು ತಾಲೂಕು, ಚಿತ್ರದುರ್ಗಾ ಜಿಲ್ಲೆ – ಶೋಕಾಸ್ ನೋಟೀಸ್ ನೀಡಲಾಗಿದೆ.

21. KIC 17211 APL 2022
ಶ್ರೀ ದಿನೇಶ್, ತಹಶೀಲ್ದಾರ್, ಆನೇಕಲ್, ಬೆಂಗಳೂರು – 25000 ದಂಡ

Related News

spot_img

Revenue Alerts

spot_img

News

spot_img