ಬೆಂಗಳೂರು, ಜ. 30: Karnataka Election: ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಹದಿಮೂರು ಮಂದಿ ಐಪಿಎಸ್ ಅಧಿಕಾರಿಗಳು ಸೇರಿದಂತೆ ಸುಮಾರು ಒಂದು ಹಾಗೂ ಎರಡು ವರ್ಗಳಿಂದ ಒಂದೇ ಠಾಣೆಯಲ್ಲಿ ಬಿಡುಬಿಟ್ಟಿದ್ದ 148 ಪೊಲೀಸ್ ಇನ್ಸ್ಪೆಕ್ಟರ್ (ಸರ್ಕಲ್ ಇನ್ಸ್ಪೆಕ್ಟರ್) ಗಳನ್ನು ಚುನಾವಣಾ ಆಯೋಗದ ಮಾರ್ಗಸೂಚಿ ಪತ್ರ ಸಂಖ್ಯೆ:437/6/1/INS/ECI/FUCT/MCT/2022 ರಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಅದೇಶ ಹೊರಡಿಸಿದೆ.
ಈ ಹಿಂದೆ ಪೊಲೀಸ್ ಅಧಿಕ್ಷಕರು ವೈರ್ ಲೇಸ್ ವಿಭಾಗದಲ್ಲಿದ್ದ ಶ್ರೀ ಕಾರ್ಇಕ್ ರೆಡ್ಡಿ ಐಪಿಎಸ್ ರವರನ್ನು ರಾಮನಗರ ಜಿಲ್ಲೆಯ ಎಸ್.ಪಿ ಯಾಗಿ ವರ್ಗಾವಣೆ ಮಾಡಲಾಗಿದೆ. ಶ್ರೀ ಪಾಟೀಲ್ ವಿನಾಯಕ ವಸಂತರಾವ್ ರವರನ್ನು ಎಐಜಿಯಾಗಿ ಉನ್ನತಿಕರಿಸಲಾಗಿದೆ.
ಶ್ರೀ ಸಂತೋಷ್ ಬಾಬು ಐಪಿಎಸ್ ರವರನ್ನು ಸೂಪರಿಡೆಂಟ್ ಆಫ್ ಪೊಲೀಸ್ ಇಂಟಲಿಜೆನ್ಸ್ ಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಆದೇಶದಲ್ಲಿ ಕಾಯ್ದಿರಿಸಿದ್ದ ಶ್ರೀ.ಡಿ ದೇವರಾಜ್ ರವರನ್ನು ಬೆಂಗಳೂರು ನಗರದ ಉತ್ತರ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಶ್ರೀಮತಿ ಡಿ.ಆರ್.ಸಿರಿ ಗೌರಿ ರವರನ್ನು ಅಂತರಿಕ ಭದ್ರತೆಯ ಎಸ್.ಪಿ ಯಾಗಿ ಹಾಗೂ ಶ್ರೀ ಟಿಪಿ ಶಿವಕುಮಾರ್ ರವರನ್ನು ಕೆಪಿಟಿಸಿ ಲಿಮಿಟೆಡ್ ನ ಎಸ್.ಪಿ ಯಾಗಿ ವರ್ಗಾವಣೆ ಮಾಡಲಾಗಿದೆ.
ಗುಪ್ತಚರ ಇಲಾಖೆಯ ಎಸ್ಪಿಯಾಗಿದ್ದ ಚೇತನ್ ಆರ್. ಅವರನ್ನು ಕಲಬುರಗಿ ಎಸ್ಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಹಾವೇರಿ ಎಸ್ಪಿಯಾಗಿದ್ದ ಹನುಮಂತರಾಯ ಅವರನ್ನು ಎಸ್ಪಿ ಗುಪ್ತಚರ ಬೆಂಗಳೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಎಸ್.ಪಿಯಾಗಿ ಶ್ರೀ ಶೇಖರ್ ಹೆಸ್ ತೆಕ್ಕನವರ್ ಹಾಘೂ ಚಾಮರಾಜನಗರ ಜಿಲ್ಲೆಯ ಎಸ್.ಪಿಯಾಗಿ ಶ್ರೀಮತಿ ಪದ್ಮಿನಿ ಸಹೋ ರವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.