26.4 C
Bengaluru
Wednesday, December 4, 2024

ಸಿಎಂ ಹುದ್ದೆ ತಿಕ್ಕಾಟದ ನಡುವೆ ನೂತನ ಸಚಿವರ ಶಾರ್ಟ್ ಲಿಸ್ಟ್ ಸಿದ್ಧ

ಬೆಂಗಳೂರು ಮೇ 16: ಕರ್ನಾಟಕದಲ್ಲಿ ಕಾಂಗ್ರೆಸ್​ ಸ್ಪಷ್ಟ ಬಹುಮತ ಪಡೆದುಕೊಂಡಿದ್ದು, ಸರ್ಕಾರ ರಚನೆಗೆ ಸಿದ್ಧವಾಗಿದೆ. ಆದರೆ ಸಿಎಂ ಆಯ್ಕೆ ಹೈಕಮಾಂಡ್ ಗೆ ಕಗ್ಗಂಟಾಗಿದೆ. ಈ ನಡುವೆ ನೂತನ ಸಚಿವರ ಶಾರ್ಟ್ ಲಿಸ್ಟ್ ಸಿದ್ಧವಾಗಿದೆ.ನೂತನ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಹೈಕಮಾಂಡ್ ಕೆಲ ಸೂತ್ರಗಳನ್ನು ಸಿದ್ಧಪಡಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ ಸುರ್ಜೆವಾಲಾ, ಕೆ.ಸಿ. ವೇಣುಗೋಪಾಲ್‌ ಹಾಗೂ ಚುನಾವಣಾ ಕಾರ್ಯತಂತ್ರ ಉಸ್ತುವಾರಿ ಸುನಿಲ್‌ ಕನುಗೋಲು ಸೇರಿ ಸಚಿವರ ಶಾರ್ಟ್ ಲಿಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ.

ಬೆಳಗಾವಿ – ಲಕ್ಷ್ಮಣ್ ಸವಧಿ, ಲಕ್ಷ್ಮೀ ಹೇಬ್ಬಾಳ್ಕರ್, ಸತೀಶ್ ಜಾರಕಿಹೊಳಿ

ಬಾಗಲಕೋಟೆ – ಆರ್.ಬಿ.ತಿಮ್ಮಾಪುರ

ಬಿಜಾಪುರ – ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಯಶವಂತ ರಾಯಗೌಡ ಪಾಟೀಲ್

ಕಲಬುರಗಿ – ಪ್ರಿಯಾಂಕ್‌ ಖರ್ಗೆ, ಅಜಯ್‌ ಸಿಂಗ್, ಶರಣ ಪ್ರಕಾಶ್ ಪಾಟೀಲ್

ರಾಯಚೂರು – ಬಸನಗೌಡ ತುರುವಿಹಾಳ/ಹಂಪನಗೌಡ ಬಾದರ್ಲಿ

ಯಾದಗಿರಿ – ಶರಣಪ್ಪ ದರ್ಶನಾಪುರ್

ಬೀದರ್ – ರಹೀಮ್‌ ಖಾನ್, ಈಶ್ವರ್‌ ಖಂಡ್ರೆ

ಕೊಪ್ಪಳ – ರಾಘವೇಂದ್ರ ಹಿಟ್ನಾಳ್, ಬಸವರಾಜ ರಾಯರೆಡ್ಡಿ

ಗದಗ – ಹೆಚ್‌.ಕೆ. ಪಾಟೀಲ್

ಧಾರವಾಡ – ವಿನಯ್‌ ಕುಲಕರ್ಣಿ, ಪ್ರಸಾದ್‌ ಅಬ್ಬಯ್ಯ/ಸಂತೋಷ್ ಲಾಡ್

ಉತ್ತರ ಕನ್ನಡ – ಭೀಮಣ್ಣ ನಾಯಕ್

ಹಾವೇರಿ – ರುದ್ರಪ್ಪ ಲಮಾಣಿ

ಬಳ್ಳಾರಿ – ತುಕಾರಾಮ್‌, ನಾಗೇಂದ್ರ

ಚಿತ್ರದುರ್ಗ – ರಘುಮೂರ್ತಿ

ದಾವಣಗೆರೆ – ಶಾಮನೂರು ಶಿವಶಂಕರಪ್ಪ/ ಎಸ್​ಎಸ್​ ಮಲ್ಲಿಕಾರ್ಜುನ

ಶಿವಮೊಗ್ಗ – ಮಧು ಬಂಗಾರಪ್ಪ, ಬಿ.ಕೆ.ಸಂಗಮೇಶ್

ಚಿಕ್ಕಮಗಳೂರು – ಟಿ.ಡಿ. ರಾಜೇಗೌಡ

ತುಮಕೂರು – ಡಾ. ಜಿ. ಪರಮೇಶ್ವರ್, ಎಸ್ ಆರ್. ಶ್ರೀನಿವಾಸ್, ಕೆಎನ್ ರಾಜಣ್ಣ

ಚಿಕ್ಕಬಳ್ಳಾಪುರ – ಸುಬ್ಬಾರೆಡ್ಡಿ

ಕೋಲಾರ- ರೂಪ ಶಶೀಧರ್​/ನಾರಾಯಣ ಸ್ವಾಮೀ

ಬೆಂಗಳೂರು- ಕೆಜೆ ಜಾರ್ಜ್​/ ರಾಮಲಿಂಗಾ ರೆಡ್ಡಿ, ಹ್ಯಾರಿಸ್​, ಎಂ. ಕೃಷ್ಣಪ್ಪ, ದಿನೇಶ್​ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್

ಮಂಡ್ಯ- ಎನ್​​ ಚೆಲುವರಾಯ ಸ್ವಾಮಿ

ದೆಹಲಿ ವಿಶೇಷ ಪ್ರತಿನಿಥಿ: ಪಿ ಎಂ. ನರೇಂದ್ರ ಸ್ವಾಮಿ

ಮಂಗಳೂರು- ಯುಟಿ ಖಾದರ್

ಮೈಸೂರು-ಎಚ್​ಸಿ ಮಾಹದೇವಪ್ಪ/ ತನ್ವೀರ್​ ಸೇಠ್​ಚಾಮರಾಜನಗರ- ಪುಟ್ಟರಂಗಶೆಟ್ಟಿ

ಕೊಡಗು- ಎಎಸ್​ ಪೊನ್ನಣ್ಣ

ಬೆಂಗಳೂರು ಗ್ರಾಮಾಂತರ. ಕೆಚ್​​ ಮುನಿಯಪ್ಪ

ವಿಧಾನ ಪರಿಷತ್‌ನಿಂದ ಸಂಪುಟಕ್ಕೆ ಸಂಭಾವ್ಯ ಅಭ್ಯರ್ಥಿಗಳು

ಬಿ.ಕೆ. ಹರಿಪ್ರಸಾದ್

ಸಲೀಂ ಅಹಮದ್

ನಜೀರ್‌ ಅಹಮದ್

ಮಂಜುನಾಥ್‌ ಬಂಡಾರಿ

ದಿನೇಶ್‌ ಗೂಳಿಗೌಡ

ಎಸ್. ರವಿ

ಪ್ರದೇಶವಾರು, ಜಾತಿವಾರು, ಯುವಕರು, ಪಕ್ಷನಿಷ್ಠೆ, ಕಾರ್ಯದಕ್ಷತೆ, ವಯೋಮಾನವನ್ನು ಮಾನದಂಡವಾಗಿ ಪರಿಗಣಿಸಲಾಗಿದೆ. ಸಚಿವರಾಗಿ ನೇಮಕವಾಗುವವರು ಈ ಹಿಂದೆ ಬಿಜೆಪಿ ಸರ್ಕಾರದ ಸಚಿವರ ಬಳಿ ಕೆಲಸ ಮಾಡಿದ ಸಿಬ್ಬಂದಿ, ಆಪ್ತ ಕಾರ್ಯದರ್ಶಿಗಳನ್ನು ತಮ್ಮ ಕಚೇರಿಗೆ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕು.

Related News

spot_img

Revenue Alerts

spot_img

News

spot_img