18.1 C
Bengaluru
Thursday, February 6, 2025

ಬಿಗ್ ಬಾಸ್ ಮನೆಯಲ್ಲಿರುವ ಕಲಾವಿದರು ಯಾವ್ಯಾವ ಧಾರವಾಹಿಯಲ್ಲಿ ನಟಿಸಿ ಬಂದಿದ್ದಾರೆ..?

ಬಿಗ್ ಬಾಸ್ ಮನೆಯಲ್ಲಿರುವ ಕಲಾವಿದರು ಯಾವ್ಯಾವ ಧಾರವಾಹಿಯಲ್ಲಿ ನಟಿಸಿ ಬಂದಿದ್ದಾರೆ ಎನ್ನುವ ಕುತೂಹಲ ನಿಮಗೂ ಸಹ ಬಂದಿರಬೇಕಲ್ವೇ..? ಬಹಳಖಷ್ಟು ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಸಾಕಷ್ಟು ಕಿರುತೆರೆಯ ಧಾರವಾಹಿಗಳ ಮುಖಾಂತರ ನಟಿಸಿ ಬಿಗ್ ಬಾಸ್ ಸೀಸನ್ ೧೦ಕ್ಕೆ ಬಂದಿದ್ದಾರೆ. ಇನ್ನು ಯಾರ್ಯಾರು ಯಾವ ಧಾವಾಹಿಯಲ್ಲಿ ನಟಿಸಿ ಬಂದಿದ್ದಾರೆ ಅನ್ನೋದನ್ನ ನಾವು ತೋರಿಸ್ತೀವಿ ನೋಡಿ..!

ಸಂಗೀತಾ ಶೃಂಗೇರಿ
ಸಂಗೀತಾ ಶೃಂಗೇರಿ ಅವರು ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಸೀರಿಯಲ್ ಪ್ರಸಾರ ಆಗುತ್ತಿತ್ತು. ವಿನಯ್ ಗೌಡ ಅವರು ಶಿವನ ಪಾತ್ರ ಮಾಡಿದ್ದರೆ, ಸಂಗೀತಾ ಅವರು ಸತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. 2016ರಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಸಂಗೀತಾ ಅವರು ಬಳಿಕ ಎ+ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಚಾರ್ಲಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚಿದರು.

ಕಾರ್ತಿಕ್‌ ಮಹೇಶ್‌
ಕಾರ್ತಿಕ್‌ ಮಹೇಶ್‌ ಅವರ ಮೊದಲ ಧಾರಾವಾಹಿ ಖುಷಿ. ಕನ್ನಡ ಮಾತ್ರವಲ್ಲದೇ, ಬೇರೆ ಭಾಷೆಯಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿರುವ ಕಾರ್ತಿಕ್, ಈವರೆಗೂ 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಖುಷಿ ಧಾರಾವಾಹಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತು.

ತನಿಷಾ ಕುಪ್ಪಂಡ
ತನಿಷಾ ಕುಪ್ಪಂಡ ಅವರು ʼಪೆಂಟಗನ್ʼ ಸಿನಿಮಾ ಹಾಡಿನ ಮೂಲಕ ಸಾಕಷ್ಟು ಸದ್ದು ಮಾಡಿದ್ದರು. ಅವರ ಹಾಟ್‌ ದೃಶ್ಯ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ತನಿಷಾ ಕುಪ್ಪಂಡ 2012ರಲ್ಲಿ ದಿಗಂತ್ ನಾಯಕನಾಗಿ ನಟಿಸಿರುವ ‘ಪಾರಿಜಾತ’ ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದನ್ನು ನಿರ್ವಹಿಸಿದ್ದರು. 2013ರಲ್ಲಿ ನಡೆದ ‘ಹಳ್ಳಿ ದುನಿಯಾ’ ಎಂಬ ರಿಯಾಲಿಟಿ ಶೋ ಮೂಲಕ ಕರ್ನಾಟಕದ ಜನರಿಗೆ ಪರಿಚಿತರಾದರು. 2012ರಲ್ಲಿ ಪ್ರಸಾರವಾದ ‘ಮಂಗಳಗೌರಿ ಮದುವೆ’ ಅವರ ನಟನೆಯ ಮೊದಲ ಸೀರಿಯಲ್. ಇದರಲ್ಲಿ ವಿಲನ್ ಆಗಿ ನಟಿಸಿದ್ದರು.

ವಿನಯ್ ಗೌಡ
ವಿನಯ್ ಗೌಡ ಕನ್ನಡ ಕಿರುತೆರೆಯಲ್ಲಿ ‘ಶಿವ’ ಅಂತಲೇ ಖ್ಯಾತಿ ಪಡೆದಿದ್ದಾರೆ. ವಿನಯ್ 2010ರಲ್ಲಿ ‘ಚಿಟ್ಟೆ ಹೆಜ್ಜೆ’ ಎಂಬ ಧಾರವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟರು.ಸಿಐಡಿ ಕರ್ನಾಟಕ, ಅಂಬಾರಿ, ಶುಭವಿವಾಹ, ಅಮ್ಮ, ಹರ ಹರ ಮಹಾದೇವ, ಯಡಿಯೂರು ಸಿದ್ದಲಿಂಗೇಶ್ವರ, ನಮ್ಮ ಲಚ್ಚಿ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.

ನಮ್ರತಾ
ಪುಟ್ಟಗೌರಿ ಮದುವೆʼಯಲ್ಲಿ ಹಿಮ ಆಗಿ ಮಿಂಚಿದವರು ನಮ್ರತಾ. ನಾಗಿಣಿ 2 ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದರು. 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ’ ಮೊದಲ ಧಾರಾವಾಹಿ. ನಮ್ರತಾ ಬಾಲನಟಿಯಾಗಿ ‘ನಾಕುತಂತಿ’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಎಕ್ಸ್ ಕ್ಯೂಸ್ ಮಿ, ಮಿಲನ, ತುತ್ತೂರಿ ಮುಂತಾದ ಸಿನಿಮಾಗಳಲ್ಲಿಯೂ ಬಣ್ಣಹಚ್ಚಿದ್ದರು.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಪ್ರಣ್ ಪಾತ್ರದಲ್ಲಿ ಮಿಂಚಿದ್ದರು ಸ್ನೇಹಿತ್ ಗೌಡ. 2016 ರಲ್ಲಿ ತೆರೆಕಂಡ `ಚಿರವಾದ ನೆನಪು’ ಚಿತ್ರದಲ್ಲಿ ಅಭಿನಯಿಸಿದ್ದರು.

ಸಿರಿ
ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಗಳ 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಸಿರಿ ನಟಿಸಿದ್ದಾರೆ, ಸಿರಿ ನಟನೆಯ ಮೊದಲ ಧಾರಾವಾಹಿ ‘ಅಂಬಿಕಾ’. ನಂತರ ಮನೆಯೊಂದು ಮೂರು ಬಾಗಿಲು, ಬಂದೇ ಬರತಾವ ಕಾಲ, ರಂಗೋಲಿ, ಸಂಬಂಧ, ಕೋಗಿಲೆ, ಈ ಬಂಧನ ಈ ರೀತಿ ಹಲವು ಹಿಟ್ ಧಾರಾವಾಹಿಗಳಲ್ಲಿ ನಟಿಸಿದರು. ಅನೇಕ ವರ್ಷಗಳ ಬಳಿಕ ನಟಿ ಸಿರಿ ರಾಮಾಚಾರಿ ಮೂಲಕ ಕಿರುತೆರೆಗೆ ಮರಳಿದ್ದರು. ಆ ಬಳಿಕ ಧಾರಾವಾಹಿಯಿಂದ ಹೊರ ಹೋಗಿದ್ದಾರೆ. ರಾಮಾಚಾರಿ ಧಾರಾವಾಹಿಯಲ್ಲಿ ನಟಿ ಸಿರಿ ಶರ್ಮಿಳಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜಯಶಂಕರ್ ಎರಡನೇ ಪತ್ನಿ ಶರ್ಮಿಳಾ ಪಾತ್ರದಲ್ಲಿ ಸಿರಿ ಬಣ್ಣ ಹಚ್ಚಿದ್ದರು. ಜಯಶಂಕರ್ ಆಗಿ ಗುರುದತ್ ನಟಿಸಿದ್ದರು.

ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್, ಬೆಂಗಳೂರು

Related News

spot_img

Revenue Alerts

spot_img

News

spot_img