25 C
Bengaluru
Monday, December 23, 2024

New Rules From 1st July;ಜುಲೈ 1 ರಿಂದ ಜಾರಿಗೆ ಬರಲಿರುವ ಹೊಸ ನಿಯಮಗಳು

ಬೆಂಗಳೂರು, ಜೂ. 29 :ಪ್ರತಿ ಹೊಸ ತಿಂಗಳು ಪ್ರಾರಂಭವಾಗುವಾಗ ಒಂದಷ್ಟು ನಿಯಮಗಳಲ್ಲಿ ಬದಲಾವಣೆಯಾಗುವುದು ಸಹಜ. ನಾವೀಗ ಜೂನ್ ತಿಂಗಳ ಅಂತಿಮ ಘಟ್ಟದಲ್ಲಿದ್ದೇವೆ. ಜುಲೈ 1ರಿಂದ ಕೂಡ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಲಿವೆ.ನಿಮಗೆ ನಿಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಬದಲಾಗುವ ಸಾಧ್ಯತೆಯಿದೆ.ಪ್ರತಿ ತಿಂಗಳ ಪ್ರಾರಂಭದಲ್ಲಿ ಕೆಲವು ನಿಯಮಗಳಲ್ಲಿ ಬದಲಾವಣೆಯಾಗೋದು ಸಹಜ. ಅದರಂತೆ ಜುಲೈ ತಿಂಗಳ ಪ್ರಾರಂಭದಲ್ಲಿ ಕೂಡ ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. ಇವುಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಿಂದ ಹಿಡಿದು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಟಿಸಿಎಸ್ ಹೇರುವವರೆಗೆ ಎಲ್ಲವೂ ಸೇರಿವೆ. ಹಾಗಾದರೆ ಜುಲೈ 1 ರಿಂದ ಆಗುವ ಕೆಲವು ಪ್ರಮುಖ ಬದಲಾವಣೆಗಳ ಬಗ್ಗೆ ತಿಳಿಯೋಣ.

ಐಟಿಆರ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ

ಆದಾಯವನ್ನು ಗಳಿಸುವ ಪ್ರತಿಯೊಬ್ಬ ತೆರಿಗೆದಾರನು ಆದಾಯ ತೆರಿಗೆ ಸಲ್ಲಿಸಬೇಕಾಗುತ್ತದೆ.ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.ತೆರಿಗೆದಾರರು ಪ್ರತಿ ವರ್ಷ ಐಟಿಆರ್ ಸಲ್ಲಿಸಬೇಕು.ಜುಲೈ 31 ರೊಳಗೆ ಐಟಿಆರ್ ಸಲ್ಲಿಸದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ನೀವು ದಂಡವನ್ನು ಪಾವತಿಸಬೇಕಾಗಬಹುದು.

LPG ಗ್ಯಾಸ್ ಬೆಲೆ ದರಗಳು

ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸುತ್ತವೆ.ತೈಲಕಂಪನಿಗಳು ಬೆಲೆಯನ್ನು ಹೆಚ್ಚಿಸುತ್ತವೆ ಅಥವಾ ಕಡಿಮೆಗೊಳಿಸುತ್ತವೆ. ಹೀಗಾಗಿ ಜುಲೈ ಮೊದಲ ತಾರೀಕಿನಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲೂ ಬದಲಾವಣೆ ಕಂಡುಬರಲಿದೆ ಎಂದು ನಿರೀಕ್ಷಿಸಲಾಗಿದೆ.ಮಾಹಿತಿ ಪ್ರಕಾರ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಯಾವುದೇ ಬದಲಾವಣೆಯಾಗಿಲ್ಲ,ಈ ಬಾರಿ 14 ಕೆಜಿ ಎಲ್‌ಪಿಜಿ ಸಿಲಿಂಡರ್‌ ದರವೂ ಇಳಿಕೆಯಾಗುವ ನಿರೀಕ್ಷೆ ಇದೆ.

ಕ್ರೆಡಿಟ್ ಕಾರ್ಡ್ ಬಳಕೆಗೆ ಟಿಡಿಎಸ್

ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ಬಳಸಿದರೆ ಅಂಥ ವಹಿವಾಟಿನ ಮೇಲೆ ಟಿಡಿಎಸ್ ಸಂಗ್ರಹಿಸಲು ಸಿದ್ಧತೆ ನಡೆದಿದೆ.ಶಿಕ್ಷಣ ಮತ್ತು ಔಷಧಕ್ಕೆ ಸಂಬಂಧಿಸಿದ ವೆಚ್ಚದ ಮೇಲೆ ಈ ಶುಲ್ಕವನ್ನು ಶೇಕಡಾ 5 ಕ್ಕೆ ನಿಗದಿಪಡಿಸಲಾಗಿದೆ.ವಿದೇಶದಲ್ಲಿ ಶಿಕ್ಷಣಕ್ಕಾಗಿ ಸಾಲ ಪಡೆದ ತೆರಿಗೆದಾರರು 7 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಮೇಲೆ ಶೇಕಡಾ 0.5 ರಷ್ಟು TCS ಶುಲ್ಕವನ್ನು ಪಾವತಿಸಬೇಕಾಗಲಿದೆ.

ಪಾದರಕ್ಷೆ ಕಂಪನಿಗಳಿಗೆ QCO ಕಡ್ಡಾಯ

ದೊಡ್ಡ ಮತ್ತು ಮಧ್ಯಮ ಪ್ರಮಾಣದ ಚಪ್ಪಲಿ ತಯಾರಕರು, ಶೂಗಳು ಮತ್ತು ಪಾದರಕ್ಷೆಗಳ ಎಲ್ಲ ಆಮದುದಾರರು ಜುಲೈ 1 ಗುಣಮಟ್ಟದ ಮಾನದಂಡಗಳನ್ನು ಅನುಸರಿಸುವುದನ್ನು ಕಡ್ಡಾಯ ಮಾಡಲಾಗಿದೆ.ಗುಣಮಟ್ಟ ನಿಯಂತ್ರಣ ಆದೇಶವನ್ನು (ಕ್ಯೂಸಿಒ) ಜಾರಿಗೊಳಿಸಲು ಪಾದರಕ್ಷೆ ಘಟಕಗಳಿಗೆ ಸರ್ಕಾರ ಆದೇಶಿಸಿದೆ. ಪಾದರಕ್ಷೆಗಳ ಕಂಪನಿಗಳಿಗೆ QCO ಅನ್ನು ಕಡ್ಡಾಯಗೊಳಿಸಲಾಗಿದೆ.ಈಗ ಪಾದರಕ್ಷೆ ಕಂಪನಿಗಳು ಈ ನಿಯಮಗಳ ಪ್ರಕಾರ ಶೂ ಮತ್ತು ಚಪ್ಪಲಿಗಳನ್ನು ತಯಾರಿಸಬೇಕಾಗುತ್ತದೆ. ಪ್ರಸ್ತುತ, 27 ಪಾದರಕ್ಷೆ ಉತ್ಪನ್ನಗಳನ್ನು ಕ್ಯೂಸಿಒ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ,

ಜುಲೈ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಯ ಅಧಿಕೃತ ಬ್ಯಾಂಕ್ ಹಾಲಿಡೇ ಕ್ಯಾಲೆಂಡರ್ ಪ್ರಕಾರ ಭಾನುವಾರ ಮತ್ತು ಶನಿವಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ಬ್ಯಾಂಕುಗಳು ಒಟ್ಟು 15 ದಿನಗಳವರೆಗೆ ಮುಚ್ಚಲ್ಪಡುತ್ತವೆ. ಪ್ರತಿ ಭಾನುವಾರ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಇನ್ನು ಬ್ಯಾಂಕ್ ರಜಾ ದಿನದಂದು ಆನ್ಲೈನ್ ನಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಲಭ್ಯವಿರುತ್ತದೆ.

Related News

spot_img

Revenue Alerts

spot_img

News

spot_img