23.6 C
Bengaluru
Thursday, December 19, 2024

” ವೇತನ ಪರಿಷ್ಕರಣೆಗೆ ಕೇರಳ ರಾಜ್ಯವನ್ನು ಅನುಸರಿಸುವಂತೆ 7ನೇ ವೇತನ ಆಯೋಗಕ್ಕೆ ಸಲಹೆ ನೀಡಿದ ನೌಕರರ ಸಂಘ

ದಿನಾಂಕ:-10.02.2023 ರಂದು ರಾಜ್ಯದ ಸರಕಾರಿ ನೌಕರರ ಸಂಘವು ರಾಜ್ಯ ಸರ್ಕಾರ ರಚನೆ ಮಾಡಿ ಆದೇಶ ಒರಡಿಸಿದ್ದ ಏಳನೇ ವೇತನ ಆಯೋಗಕ್ಕೆ ತನ್ನ ನೌಕರರ ಹಿತಾದೃಷ್ಟಿಯಿಂದ ತನ್ನದೆ ಆದ ವಿವಿಧ ಬೇಡಿಕೆಗಳ 65 ಪುಟಗಳ ವರದಿಯನ್ನು ಸಲ್ಲಿಸಿದೆ. ರಾಜ್ಯ 7ನೇ ವೇತನ ಆಯೋಗವು ವೇತನ ಆಯೋಗದ ಶಿಫಾರಸ್ಸಿನ ಸಂದರ್ಭದಲ್ಲಿ ಕೇರಳ ರಾಜ್ಯದ ವೇತನ ಸೌಲಭ್ಯಗಳನ್ನು ಹಾಗೂ ಕೇಂದ್ರ ಸರ್ಕಾರ 2026 ರಲ್ಲಿ ಪರಿಷ್ಕರಿಸುವ ಕೇಂದ್ರ ವೇತನ ಆಯೋಗದ ವೇತನ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಸಹ ಪರಿಷ್ಕರಿಸುವುದು ಅವಶ್ಯವಾಗಿರುತ್ತದೆ ಎಂದು ತನ್ನ ಅಭಿಪ್ರಾಯವನ್ನು ತಿಳಿಸಿದೆ

ಸರಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ರಾಜ್ಯ 7ನೇ ವೇತನ ಆಯೋಗವು ಕಳೆದ ಜ.17 ರಂದು ಪ್ರಶ್ನಾವಳಿ ಬಿಡುಗಡೆ ಮಾಡಿತು. ಅಂತೆಯೇ ರಾಜ್ಯ ಸರ್ಕಾರಿ ಸಂಘವು ರಾಜ್ಯಾದ್ಯಂತ ಅಧಿಕಾರಿ ಮತ್ತು ನೌಕರರ ಅಭಿಪ್ರಾಯ ಸಂಗ್ರಹಿಸಿ,ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ ಬಗ್ಗೆ ಶಿಫಾರಸ್ಸು ಮಾಡುವಾಗ ಆಯೋಗವು ನೆರೆ ರಾಜ್ಯಗಳ ಹಾಗೂ ಕೇಂದ್ರ ಸರ್ಕಾರದಲ್ಲಿ ಜಾರಿಯಲ್ಲಿರುವ ವೇತನ ಶ್ರೇಣಿಗಳನ್ನು ಪರಿಗಣಿಸಬೇಕೆ? ಎಂಬ ಪ್ರಶ್ನೇಗೆ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯ 7ನೇ ವೇತನ ಆಯೋಗವು ವೇತನ ಆಯೋಗದ ಶಿಫಾರಸ್ಸಿನ ಸಂದರ್ಭದಲ್ಲಿ ಕೇರಳ ರಾಜ್ಯದ ವೇತನ ಸೌಲಭ್ಯಗಳನ್ನು ಹಾಗೂ ಕೇಂದ್ರ ಸರ್ಕಾರ 2026 ರಲ್ಲಿ ಪರಿಷ್ಕರಿಸುವ ಕೇಂದ್ರ ವೇತನ ಆಯೋಗದ ವೇತನ ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಸಹ ಪರಿಷ್ಕರಿಸುವುದು ಅವಶ್ಯವಾಗಿರುತ್ತದೆ ಎಂದು ತನ್ನ ಅಭಿಪ್ರಾಯವನ್ನು ತಿಳಿಸಿದೆ.

ಇದಕ್ಕೆ ಕಾರಣವಾಗಿ
* ರಾಷ್ಟದ ಬೇರೆ ಬೇರೆ ರಾಜ್ಯಗಳಲ್ಲಿ ಕುಟುಂಬ ನಿರ್ವಹಣಾ ವೆಚ್ಚಗಳು ಒಂದೇ ಆಗಿರುತ್ತವೆ.
* ಸಾರಿಗೆ, ವಸತಿ, ಶೈಕ್ಷಣಿಕೆ ಆರೋಗ್ಯ ವೆಚ್ಚಗಳು ಏಕರೂಪದಲ್ಲಿರುತ್ತವೆ.
* ಬ್ಯಾಂಕ್ ಸಾಲ ಸೌಲಭ್ಯಗಳ ಬಡ್ಡಿದರಗಳು ಸಹ ಏಕರೂಪದಲ್ಲಿರುತ್ತವೆ.
* ರಾಷ್ಟ್ರದ ಬಹುತೇಕ ರಾಜ್ಯಗಳಲ್ಲಿ ಸರ್ಕಾರಿ ನೌಕರರ ಕಾರ್ಯ ವಿಧಾನಗಳು ಭಾಗಶಃ ಏಕರೂಪದಿಂದ ಕೂಡಿರುತ್ತದೆ.
* ದೇಶದ ಕೆಲವು ರಾಜ್ಯಗಳಲ್ಲಿ ವೇತನ ಹೆಚ್ಚಿದ್ದು, ಕೆಲವು ರಾಜ್ಯಗಳಲ್ಲಿ ಕಡಿಮೆ ಇರುವುದರಿಂದ ನೌಕರರಲ್ಲಿ ಅಸಮಧಾನ ಉಂಟಾಗಿ ಆಡಳಿತದ ಮೇಲೆ ದುಷ್ಟರಿಣಾಮ ಬೀರಲಿದೆ ಎಂದು ತನ್ನ ಕಾರಣಗಳಲ್ಲಿ ತಿಳಿಸಿದೆ.
ರಾಜ್ಯದ ನೌಕರರ ವೇತನಕ್ಕೆ ಹೊಲಿಸಿದರೆ ಕೇರಳ ರಾಜ್ಯದ ನೌಕರರ ಮೂಲ ವೇತನವು ಹೆಚ್ಚಿರುತ್ತದೆ. ರಾಜ್ಯ ನೌಕರರ ವಾರ್ಷಿಕ ವೇತನ ಬಡ್ತಿಯ ದರವು 2.35% ಆಗಿದ್ದು ಕೇರಳ ರಾಜ್ಯವು 3.04% ಅನ್ನು ಹೊಂದಿದೆ. ಕೇರಳ ರಾಜ್ಯದ ತುಟ್ಟಿಭತ್ಯೆಯ ದರವು ಶೇ 34% ರಷ್ಟಿದ್ದು ರಾಜ್ಯ ಸರ್ಕಾರದಲ್ಲಿ ಈ ದರವು 31% ಆಗಿರುವುದರಿಂದ ಈ ಹಿನ್ನೇಲೆಯಲ್ಲಿ ರಾಜ್ಯ ಸರ್ಕಾರವು ಸಹಾ ಕೇರಳ ರಾಜ್ಯದ ಮಾದರಿಯಲ್ಲಿ ವೇತನ ಪರಿಷ್ಕರಣೆ ಮಾಡುವುದು ಅವಶ್ಯಕವೆಂದು ತಿಳಿಸಿದೆ

Related News

spot_img

Revenue Alerts

spot_img

News

spot_img