26.7 C
Bengaluru
Sunday, December 22, 2024

ಸರ್ಕಾರಿ ಸೇವೆ ಎಂಬ ಕಾರ್ಯಕ್ರಮವನ್ನುರೂಪಿಸುತ್ತಿರುವ ವಿಕಲಚೇತನರ ಇಲಾಖೆ ಹಾಗೂ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿ..!

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಕಲಚೇತನರ ಇಲಾಖೆಯು ಹಾಗೂ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸರ್ಕಾರ ನೀಡಿರುವ ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ನೀಡುವ ಸಲುವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಗೌರವಧನ ಆಧಾರದಲ್ಲಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ನೇಮಕ ಮಾಡಿಕೊಳ್ಳಲಾಗಿರುತ್ತದೆ.

ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಹಿರಿಯ ನಾಗರಿಕರ ಮತ್ತು ವಿಕಲಚೇತನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದರಿಂದ ಪ್ರತಿ ಬದುವಾರ ಮನೆ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಎಂಬ ಕಾರ್ಯಕ್ರಮವನ್ನು ರೂಪಿಸಿ ಪ್ರತಿ ವಿಕಲಚೇತನ ವ್ಯಕ್ತಿಯ ಮನೆಗೆ ಬೇಟಿ ಅವರವರ ಅವಶ್ಯಕತೆಗಳೆನು ಎಂದು ಪರಿಶೀಲಿಸಿವುದೇ ಈ ಶೀಘ್ರ ಕಾರ್ಯಕ್ರಮದ ಉದ್ದೇಶವಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯನ್ನು ಈ ಮೊದಲಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಯುಡಿಐಡಿ ವಿಕಲಚೇತನರ ಮನೆ ಬಾಗಿಲಿಗೆ ಎಂಬ ಕಾರ್ಯಕ್ರಮವನ್ನು ರೂಪಿಸಲಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ (ID)ಗಳನ್ನು ನೀಡಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದು ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಮೆಡಿಕಲ್ ಬೋರ್ಡ್‌ಗಳು ಮತ್ತು ಜಿಲ್ಲಾ ಪುನರ್ವಸತಿ ಕೇಂದ್ರ ಹಾಗೂ ಪುನರ್ವಸತಿ ಕಾರ್ಯಕರ್ತರ ಮೂಲಕ ಹಲವು ಶಿಬಿರಗಳನ್ನು ಆಯೋಜಿಸಲಾಗಿದೆ.

* ವಿಕಲಚೇತನತೆ ಶೇ.40 ರಿಂದ ಶೇ.74 ರವರೆಗೆ 800/- ರೂ.ಗಳು. ಶೇ.75ಕ್ಕೂ ಹೆಚ್ಚಿರುವವರಿಗೆ 1400/- ರೂ.ಗಳನ್ನು ಹಾಗೂ ಶೇ.75ಕ್ಕೂ ಹೆಚ್ಚಿನ ಮನೋವೈಕಲ್ಯ ಹೊಂದಿರುವ ವಿಕಲಚೇತನರಿಗೆ 2000/- ರೂ.ಗಳನ್ನು ಮಾಹೆಯಾನ ಪೋಷಣಾ ಭತ್ಯೆ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ನಿರ್ದೇಶನಾಲಯದ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದೆ.

* ವಿಕಲಚೇತನರು ಸಾಮಾನ್ಯ ವ್ಯಕ್ತಿಗಳಂತೆ ಅವರ ದೈನಂದಿನ ಕಾರ್ಯಚಟುವಟಿಕೆಗಳನ್ನು ಮಾಡಲು ಅನುಕೂಲವಾಗುವಂತೆ ತ್ರಿಚಕ್ರವಾಹನಗಳು, ಗಾಲಿಕುರ್ಚಿಗಳು, ಪ್ರೈಸಿಕಲ್, ಕೃತಕ ಅಂಗಾಂಗಗಳು, ಬ್ರೆಲ್ ಗಡಿಯಾರಗಳು, ಬಿಳಿಕೋಲು, ಶ್ರವಣ ಯಂತ್ರಗಳನ್ನು ಹಾಗೂ ಇತರೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ.

* ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶನದಂತೆ ವಿಕಲಚೇತನರ ಗುಂಪುಗಳನ್ನು ರಚಿಸಿ, ಅವರ ಕಾರ್ಯಚಟುವಟಿಕೆಗಳಿಗೆ ಅವರಲ್ಲಿಯೇ ಬ್ಯಾಂಕಿನ ಖಾತೆಯ ಮೂಲಕ ಹಣವನ್ನು ಉಳಿತಾಯ ಮಾಡಲು ಸಂಘಗಳನ್ನು ರಚಿಸಲು ಉತ್ತೇಜಿಸಲಾಗುತ್ತಿದೆ. ಅದರಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಘಗಳನ್ನು ರಚಿಸಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.

* ತೀವ್ರ ವಿಕಲಚೇತನ ವ್ಯಕ್ತಿಗಳಿಗೆ, ಹಾಸಿಗೆ ಹಿಡಿದಿರುವವರಿಗೆ, ಬೆನ್ನು ಉರಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳಿಗೆ, ಪಾಶ್ಚವಾಯಿಗಳಿಗೆ ತುತ್ತಾದ ವ್ಯಕ್ತಿಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ನೀಡಲು ಇಲಾಖೆಯ ಯೋಜನೆಯಾದ ವೈದ್ಯಕೀಯ ಪರಿಹಾರ ನಿಧಿಯಲ್ಲಿ ಗರಿಷ್ಟ ರೂ. 1.00 ಲಕ್ಷದವರೆಗೆ ಶಸ್ತ್ರ ಚಿಕಿತ್ಸಾ ಪರಿಹಾರವನ್ನು ಒದಗಿಸಲಾಗುತ್ತಿದೆ.

* ವಿಕಲಚೇತನರಿಗೆ ಸ್ಥಳೀಯವಾಗಿ ಸೌಲಭ್ಯಗಳನ್ನು ಒದಗಿಸಿಕೊಡುವ ದೃಷ್ಟಿಯಿಂದ ಸರ್ಕಾರವು ಎಲ್ಲಾ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಯನ್ನೊಳಗೊಂಡಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕ್ರಿಯಾ ಯೋಜನೆಯನ್ನು ರೂಪಿಸುವಾಗ ವಿಕಲಚೇತನರಿಗೆ ಶೇ.5ರಷ್ಟು ಅನುದಾನವನ್ನು ವೆಚ್ಚ ಮಾಡಲು ಅವಕಾಶ ಕಲ್ಪಿಸಲಾಗಿತ್ತದೆ. ಶೇ.5ರ ಅನುದಾನದಲ್ಲಿ ವಿಕಲಚೇತನರ ಶ್ರೇಯೋಭಿವೃದ್ಧಿಗೆ ವೆಚ್ಚ ಮಾಡುವುದರ ಮೂಲಕ ಅವರ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ.
*
ಚೈತನ್ಯ ರೆವೆನ್ಯೂ ಫ್ಯಾಕ್ಟ್ ನ್ಯೂಸ್. ಬೆಂಗಳೂರು

Related News

spot_img

Revenue Alerts

spot_img

News

spot_img