20.5 C
Bengaluru
Tuesday, July 9, 2024

ಚುನಾವಣೆ ಹೊಸ್ತಿಲಲ್ಲಿ ಸರ್ಕಾರದ ಮುಂದೆ ಸಾಲು ಸಾಲು ಪ್ರತಿಭಟನೆಗಳ ಸವಾಲ್:

ಬೆಂಗಳೂರು: ಫೆ-27;ಕೂಲಿ ಕಾರ್ಮಿಕರಿಂದ ಹಿಡಿದು ರಾಜಕೀಯವಾಗಿ ಪ್ರಬಲವಾಗಿರುವ ಜಾತಿ ಗುಂಪುಗಳು, ವಕೀಲರು, ಶಿಕ್ಷಕರು ಮತ್ತು ಸರ್ಕಾರಿ ನೌಕರರು ಸೇರಿದಂತೆ ಸುಮಾರು ಹತ್ತಾರು ಗುಂಪುಗಳು ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಪ್ರತಿಭಟನೆ ನಡೆಸುತ್ತಿವೆ. ಈ ಸಾಲು ಸಾಲು ಪ್ರತಿಭಟನೆಗಳು ಪ್ರತಿಪಕ್ಷಗಳಿಗೆ ಸರ್ಕಾರವನ್ನು ಟೀಕಿಸಿ ಮಾತನಾಡಲು ಅವಕಾಶದ ನೀಡುವುದರ ಜೊತೆಗೆ ಆಡಳಿತ ಪಕ್ಷಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿವೆ.

ಸರ್ಕಾರಿ ನೌಕರರು 7 ನೇ ವೇತನ ಆಯೋಗದ ಅನುಷ್ಠಾನ ಹಾಗೂ ನೂತನ ಪಿಂಚಣಿ ಯೋಜನೆಯ ಬಗ್ಗೆ, ವಕೀಲರು ತಮ್ಮ ರಕ್ಷಣೆಗೆ ಹೊಸ ಮಸೂದೆಯ ಅನುಷ್ಠಾನಕ್ಕೆ, ಮತ್ತು ಉದ್ಯೋಗವನ್ನು ಖಾಯಂ ಮಾಡಲು ಪೌರಕಾರ್ಮಿಕರು, ಕೋಟಾ ಹೆಚ್ಚಳಕ್ಕೆ ಜಾತಿ ಗುಂಪುಗಳು, ಗುತ್ತಿಗೆದಾರರು ಬಾಕಿ ಇರುವ ಬಿಲ್ಗಳನ್ನು ತೆರವುಗೊಳಿಸಬೇಕು ಮತ್ತು ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಾರಿಗೆ ನೌಕರರು ಉತ್ತಮ ವೇತನ ಮತ್ತು ಸೌಲಭ್ಯಗಳಿಗೆ ಒತ್ತಾಯಿಸುತ್ತಿದ್ದಾರೆ. ಇದರ ಮಧ್ಯೆ ರೈತರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಈ ಅತೃಪ್ತ ಗುಂಪುಗಳ ಪ್ರತಿಭಟನೆಯು ಚುನಾವಣಾ ಫಲಿತಾಂಶಗಳ ಮೇಲೆ ಬೀರಬಹುದಾದ ಪ್ರಭಾವವನ್ನು ನಿರ್ಣಯಿಸುವುದು ಅಥವಾ ಪ್ರಮಾಣೀಕರಿಸುವುದು ಸುಲಭವಲ್ಲವಾದರೂ, ಅವರು ಹೊಂದಿರುವ ಸಾಮರ್ಥ್ಯವನ್ನು ತಿರಸ್ಕರಿಸಲಾಗುವುದಿಲ್ಲ. ಉದಾಹರಣೆಗೆ, 2A ಮೀಸಲಾತಿಯನ್ನು ಪಡೆಯಲು ಹೋರಾಡುತ್ತಿರುವ ವ ಪಂಚಮಸಾಲಿಗಳು, ಲಿಂಗಾಯತ ಸಮುದಾಯದ 60% ರಷ್ಟಿದ್ದಾರೆ. ಲಿಂಗಯುತ ಸಮುದಾಯವು ಕರ್ನಾಟಕದ ಜಾತಿಗಳಲ್ಲೇ ಪ್ರಭಲ ಮತ್ತು ಅತೀ ದೊಡ್ಡ ಜಾತಿ ವ್ಯವಸ್ಥೆಯಾಗಿದ್ದು ಇದರಲ್ಲಿ ಬರುವ ಪಂಚಮಸಾಲಿ ಒಳ ಪಂಗಡವು ಐದು ಕೋಟಿಗಿಂತ ಹೆಚ್ಚಿನ ಮತದಾರರಲ್ಲಿ 14% ರಷ್ಟಿದೆ.

ವಕೀಲರು ಮತ್ತು ಗುತ್ತಿಗೆದಾರರು ಒಟ್ಟು 2.4 ಲಕ್ಷ ಜನರು ಮತ್ತು ಸರ್ಕಾರಿ ನೌಕರರು ಸಂಖ್ಯೆ 5.5 ಲಕ್ಷ, ರೈತರು, ಸಾರಿಗೆ ನೌಕರರು, ಬಿಬಿಎಂಪಿ ಸಿಬ್ಬಂದಿ, ದಲಿತ ಸಮುದಾಯಗಳನ್ನು ಸೇರಿಸುತ್ತಾ ಹೊದರೆ ಈ ಸಂಖ್ಯೆಯು ಹೆಚ್ಚುತ್ತಾ ಹೋಗುತ್ತದೆ. ಜೊತೆಗೆ ಈ ಗುಂಪಿಗಳಿಗೆ ಸಂಬಂಧಿಸಿದ ಅವಲಂಬಿತರು, ಕುಟುಂಬಸ್ಥರನ್ನು ಸೇರಿಸಿದರೆ ಅರ್ಧಭಾಗದಷ್ಟು ಮತದಾರರು ಇದರೊಳಗೆಯೇ ಬರುತ್ತಾರೆ.

ಈ ಹಿಂದೆ ಇದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರವು ಅಧಿಕಾರದಲ್ಲಿದ್ದಾಗ ಸವಾಲದ ಡಿಕೆ ರವಿ ಸಾವಿನ ಪ್ರಕರಣ, ಸಾಲು ಸಾಲು ರೈತರ ಆತ್ಮಹತ್ಯೆ, ಕೋಮು ಗಲಾಬೆಗಳು, ಹಿಂದೂ ಮುಖಂಡರ ಹತ್ಯೆ, ಭ್ರಷ್ಟಾಚಾರ, ಮಹಿಳೆಯರ ಮೇಲಿನ ಲೈಗಿಂಕ ದೌರ್ಜನ್ಯಗಳು, ಪೊಲೀಸ್ ಅಧಿಕಾರಿ ಎಂ.ಕೆ ಗಣಪತಿ ಮತ್ತು ಕಲ್ಲಪ್ಪ ಹಂಡಿಬಾಗ್ ಸಾವಿನ ಪ್ರಕರಣ ಇತ್ಯಾದಿಗಳು ಕರ್ನಾಟಕದಲ್ಲಿ ಕಾಂಗ್ರೇಸ್ ಸೋಲಿಗೆ ಕಾರಣವಾಯಿತೆಂದರೆ ತಪ್ಪಾಗುವುದಿಲ್ಲ. ಸ್ವತಃ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರಿಗೆ ಸ್ವ ಕ್ಷೇತ್ರದಲ್ಲಿಯೇ ಗೆಲುವು ಸಾಧ್ಯವಾಗದೇ ಹೊಯಿತು.

ಪ್ರತಿಭಟನೆಯ ಹೋರಾಟವನ್ನು ಕೈಗೆತ್ತಿಕೊಂಡಿರುವ ಪ್ರಮುಖ ಗುಂಪು:
7ವೇತನ ಆಯೋಗದ ಅನುಷ್ಠಾನವನ್ನು ಕೋರಿ ಸರ್ಕಾರಿ ನೌಕರರು, ಶಿಕ್ಷಕರು, ಬೆಲೆ ಕುಸಿತವನ್ನು ವಿರೋಧಿಸಿ ಈರುಳ್ಳಿ ಮತ್ತು ತರಕಾರಿ ಬೆಳೆಗಾರರು, ರೈತರು, 2A ಮೀಸಲಾತಿಗಾಗಿ ಬಲಿಕ ಸಮಾಜ, ಶೆಡ್ಯೂಲ್ 9 ರಲ್ಲಿ ಹೊಸ ಮೀಸಲಾತಿಯನ್ನು ಸೇರಿಸಲು ಮತ್ತು ಸದಾಶಿವ ಸಮಿತಿಯ ಶಿಫಾರಸ್ಸುಗಳ ಅನುಷ್ಠಾನಕ್ಕೆ ಬೇಡಿಕೆಯನ್ನು ಇಡಿದು ಎಸ್.ಸಿ ಎಸ್.ಟಿ ಸಮುದಾಯಗಳು, ಭದ್ರಾವತಿಯ VISL ಕಾರ್ಮಿಕರು, ಕಂದಾಯ ಇಲಾಖೆಯಿಂದ ಗ್ರಾಮ ಸಹಾಯಕರು, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ ತಯಾರಿಸುವವರು, ಅಂಗನವಾಡಿ ಕಾರ್ಯಕರ್ತೆಯರು, ಗುತ್ತಿಗೆ ಸಿಬ್ಬಂದಿ ಮತ್ತು ಹೊರಗುತ್ತಿಗೆ ನೌಕರರು.

ಪ್ರತಿಭಟನ ನಿರತ ಗುಂಪುಗಳ ದೃಢವಾದ ನಿರ್ಧಾರಗಳು:
ಪ್ರತಿಭಟನೆಯಲ್ಲಿ ನಿರತವಾಗಿರುವ ಕೆಲವು ಗುಂಪುಗಳು ಸರ್ಕಾರವು ತಮ್ಮ ಬೇಡಿಕೆಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂಧಿಸಿ ಸಮಸ್ಯೆಗಳನ್ನು ಬಗೆಹರಿಸದೇ ಇರುವುದರಿಂದ ಇನ್ನಷ್ಟು ಕೆರಳಿ ತಮ್ಮದೇ ಆದ ದೃಢವಾದ ನಿರ್ಧಾರಗಳನ್ನು ಕೈಗೊಂಡಿವೆ. ಕೈಗಾರಿಕೆಗಳಲ್ಲಿ ಕೆಲಸ ಮಾಡುವ 20 ಲಕ್ಷಕ್ಕು ಹೆಚ್ಚಿನ ಕಾರ್ಮಿಕರನ್ನು ಪ್ರತಿನಿಧಿಸುವ ಯೂನಿಯನ್ ಗಳು ಕೆಲಸದ ಸಮಯವನ್ನು 9 ರಿಂದ 12 ಗಂಟೆಗೆ ಹೆಚ್ಚಿಸಿದ ಇತ್ತೀಚಿನ ತಿದ್ದುಪಡಿಗೆ ವಿರುದ್ದವಾಗಿ ಮುಂದಿನ ವಾರ ಪ್ರತಿಭಟನೆಯಲ್ಲಿ ಅವರು ಹೊಸ ಕಾಯಿದೆಯ ಪ್ರತಿಗಳನ್ನು ಸುಡಲು ಯೋಜಿಸಿದ್ದಾರೆ. ಪಂಚಮಸಾಲಿಗಳ 2A ವರ್ಗದ ಮೀಸಲಾತಿಯ ಬೇಡಿಕೆಯ ಮುಂದಾಳತ್ವವನ್ನು ವಹಿಸಿರುವ ಕೂಡಲಸಂಗಮ ಪೀಠದ ಮಠಾಧೀಶರಾದ ಬಸವ ಮೃತ್ಯುಂಜಯ ಸ್ವಾಮಿಗಳು ‘ಸರ್ಕಾರವು ನಮಗೆ ಅವಮಾನ ಮಾಡಿದೆ ಮುಂದಿನ ಚುನಾವಣೆಯಲ್ಲಿ ಪಂಚಮಸಾಲಿಗಳು ಅವರಿಗೆ ತಕ್ಕ ಪಾಠ ಕಲಿಸುತ್ತಾರೆಂದು ಹೇಳಿದ್ದಾರೆ. ಸರ್ಕಾರಿ ನೌಕರರು ತಮ್ಮ ನ್ಯಾಯಯುತ ಬೇಡಿಕೆಯಾದ 7 ನೇ ವೇತನ ಆಯೀಗದ ಶಿಫಾರಸ್ಸಿನ ಜಾರಿ ಮತ್ತು ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಕ್ರಮಕೈಗೊಳ್ಳದಿದ್ದರೆ ಮಾರ್ಚ್ 01 ರಿಂದ ಅನಿರ್ದಿಷ್ಟವಧಿಯ ಕಾಲ ಕರ್ತವ್ಯಕ್ಕೆ ಗೈರಾಜಾರಾಗುವುದಾಗಿ ತಿಳಿಸಿದ್ದಾರೆ.

ಟೋಲ್ ದರದ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಿ 6 ಲಕ್ಷಕ್ಕು ಹೆಚ್ಚಿನ ಟ್ರಕ್ಗಳು ರಸ್ತೆಗಿಳಿದು ಪ್ರತಿಭಟಿಸುವ ಸಾಧ್ಯತೆಗಳಿವೆ. ಬೆಂಗಳೂರು ವಕೀಲ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್ ರವರು ಮಾತನಾಡಿ ನಮ್ಮ ಸತತ ಪ್ರಯತ್ನಗಳ ಹೊರತಾಗಿಯೂ ವಕೀಲರ ರಕ್ಷಣಾ ಮಸೂದೆಯನ್ನು ಸರ್ಕಾ ಅಂಗೀಕರಿಸುವಲ್ಲಿ ವಿಫಲವಾಗಿದೆ. ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸದಿದ್ದರೆ ಪ್ರತಿಭಟನೆ ನಡೆಸುವುದಷ್ಟೇ ಅಲ್ಲ, ಆಡಳಿತ ಸರ್ಕಾರದ ವಿರುದ್ದ ಮತ ಚಲಾಯಿಸುವಂತೆ ವಕೀಲರ ಸಂಘಕ್ಕೆ ಕರೆ ನೀಡಿದ್ದಾರೆ.
ಈ ಎಲ್ಲಾ ಪ್ರತಿಭಟನೆಕಾರರ ಬೇಡಿಕೆಗಳನ್ನು ಸರ್ಕಾರವು ಗಮನಕ್ಕೆ ತೆಗೆದುಕೊಂಡು ಅವುಗಳ ಈಡೆರಿಕೆಗೆ ಸೂಕ್ತ ಕ್ರಮಗಳನ್ನು ಕೈಗೊಂಡು ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

Related News

spot_img

Revenue Alerts

spot_img

News

spot_img