ನವದೆಹಲಿ, ಡಿ 30;ಸುಕನ್ಯಾ ಸಮೃದ್ಧಿ ಯೋಜನೆಯು ದೀರ್ಘಾವಧಿಯ ಹೂಡಿಕೆಯಾಗಿದೆ.ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಉಳಿತಾಯ ಮಾಡಲು ಸರ್ಕಾರ ಉತ್ತಮ ಅವಕಾಶವನ್ನು ನೀಡಿದೆ.ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಸುಕನ್ಯಾ ಸಮೃದ್ಧಿ ಯೋಜನೆಯಂತಹ(sukannya samruddi scheeme) ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ ಹೆಚ್ಚಿಸಿದೆ. ಅಂಚೆ ಕಚೇರಿಯ 3 ವರ್ಷದ ಅವಧಿ ಠೇವಣಿಗೆ 10 ಬೇಸಿಸ್(Basis) ಅಂಕಗಳಷ್ಟು ಬಡ್ಡಿ ಹೆಚ್ಚಿಸಿದೆ.ಸುಕನ್ಯಾ ಸಮೃದ್ಧಿ ಯೋಜನೆಯ ಮೇಲಿನ ಬಡ್ಡಿ ದರವನ್ನು ಸರ್ಕಾರ ಶೇಕಡಾ 8 ರಿಂದ 8.2 ಕ್ಕೆ ಹೆಚ್ಚಿಸಲಾಗಿದೆ.ಈ ನಿಯಮವು ಜ.1 ರಿಂದಲೇ ಜಾರಿಗೆ ಬರಲಿದೆ.ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ಸಣ್ಣ ಉಳಿತಾಯ ಯೋಜನೆಗಳಲ್ಲಿ, ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರಗಳನ್ನು ಮಾತ್ರ ಬದಲಾಯಿಸಲಾಗಿದೆ. ಹೆಣ್ಣು ಮಕ್ಕಳಿಗಾಗಿಯೇ(Girl child) ನಡೆಯುತ್ತಿರುವ ಮೋದಿ ಸರ್ಕಾರದ ಯೋಜನೆಯ ಬಡ್ಡಿದರವನ್ನು(Intrest rate) ಶೇಕಡಾ 8 ರಿಂದ 8.2 ಕ್ಕೆ ಹೆಚ್ಚಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರಗಳನ್ನು ಶೇಕಡಾ 7.6 ರಿಂದ ಶೇಕಡಾ 8 ಕ್ಕೆ ಹೆಚ್ಚಿಸಲಾಗಿತ್ತು. ಅಂದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ, ಸರ್ಕಾರವು ಈ ಯೋಜನೆಯ ಬಡ್ಡಿದರಗಳನ್ನು ಶೇಕಡಾ 0.6 ರಷ್ಟು ಹೆಚ್ಚಿಸಿದೆ.
ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಪರಿಷ್ಕರಣೆ
ಪೋಸ್ಟ್ ಆಫೀಸ್ ಉಳಿತಾಯ ಠೇವಣಿ;ಶೇ. 4
1 ವರ್ಷದ ಸಮಯದ ಠೇವಣಿ;ಶೇ. 6.9
2 ವರ್ಷದ ಸಮಯ ಠೇವಣಿ;ಶೇ. 7
3 ವರ್ಷಗಳ ಸಮಯ ಠೇವಣಿ;ಶೇ. 7.1
5 ವರ್ಷಗಳ ಸಮಯ ಠೇವಣಿ;ಶೇ. 7,5
5 ವರ್ಷಗಳ ಮರುಕಳಿಸುವ ಠೇವಣಿ:ಶೇ.6.7
ಹಿರಿಯ ನಾಗರಿಕರ ಉಳಿತಾಯ ಯೋಜನೆ:ಶೇ.8.2
ಮಾಸಿಕ ಆದಾಯ ಖಾತೆ ಯೋಜನೆ:ಶೇ.7.4
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ;ಶೇ.7.7
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ;ಶೇ.7.1
ಕಿಸಾನ್ ವಿಕಾಸ್ ಪತ್ರ;ಶೇ.7.5
ಸುಕನ್ಯಾ ಸಮೃದ್ಧಿ ಖಾತೆ ಯೋಜನೆ;ಶೇ.7.5