31.8 C
Bengaluru
Friday, April 12, 2024

ಬಿಗ್ ಬಾಸ್ ಮನೆ ನಿಜಕ್ಕೂ ಸ್ಕ್ರಿಪ್ಟೆಡ್ ಅಂತೆ,, ಇಲ್ಲಿದೆ ನೋಡಿ ಸಾಕ್ಷಿ..!

ಬಿಗ್ ಬಾಸ್ ಮನೆ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ತಲತಲಾಂತರಗಳಿಂದ ಬಿಗ್ ಬಾಸ್ ಸ್ಕ್ರಿಪ್ಟೆಡ್ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಸಾಕ್ಷಿ ಪುರಾವೆ ಕೂಡ ಸಿಕ್ಕಿದೆ. ಅಂತಾದ್ದು ಏನಪ್ಪಾ ಅಂತ ನೀವು ಯೋಚನೆ ಮಾಡ್ತಾ ಇರ್ಬೋದು. ಅದಿಕ್ಕೆ ಇಲ್ಲಿದೆ ನೋಡಿ ಸಾಕ್ಷಿ..!

ಕಾರ್ತಿಕ್ ಮಾವನಾದ ಖುಷಿಯಲ್ಲಿ ಗುಟ್ಟು ಬಿಟ್ಟು ಕೊಟ್ಟ್ರಾ ಬಿಗ್ ಬಾಸ್..!
ಕನ್ಪೆಷನ್ ರೂಮ್ನ ನಲ್ಲಿ ಕಾರ್ತಿಕ್ ಗೆ ಏನಾದ್ರೂ ತಮ್ಮ ಮನೆಯವರ ಬಗ್ಗೆ ಮಾಹಿತಿ ತಿಳಿಬೇಕಾ ಎಂದವಾಗ, ಕಾರ್ತಿಕ್ ತನ್ನ ತಂಗಿಗೆ ಮಗು ಆಗಿದ್ಯಾ ಇಲ್ವಾ ಎಂಬುದನ್ನ ಒಮ್ಮೆ ತಿಳಿದುಕೋ ಬೇಕಿತ್ತು ಎಂದಿದ್ರು, ಅವಾಗ ಬಿಗ್ ಬಾಸ್ ನಿಮ್ಮ ತಂಗಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ, ಹಾಗಾಗಿ ನೀವು ಚಿಂತಿಸುವ ಅಗತ್ಯವಿಲ್ಲ ಎಂದಿದ್ರು. ಇನ್ನು ಈ ವಿಚಾರ ತಿಳಿದ ಕೂಡ್ಲೇ ಕಾರ್ತಿಕ್ ರೆಕ್ಕೆ ಬಂದ ಚಿಟ್ಟೆಯಂತೆ ಕುಣಿದು ಕುಪ್ಪಳಿಸಿದ್ರು. ಇನ್ನು ಬಿಗ್ ಬಾಸ್ ಮನೆಮಂದಿ ಸಹ ಹರ್ಷದಿಂದ ಕಾರ್ತಿಕ್ ಗೆ ಶಭಾಷಯ ಕೋರಿದ್ರು. ಈ ನಡುವೆಯೆ ನಡುವೆ ಬಿಗ್ ಬಾಸ್ ಎಡವಿದ್ದು..

ಬೆಳ್ಳಿ ಸೊಂಟದ ದಾರ ತಂದು ಕೊಟ್ಟ ತನೀಷಾ..!
ಕಾರ್ತಿಕ್ ಮಾವನಾದ ಖುಷಿಯಲ್ಲಿ ತನೀಷಾ ಬೆಳ್ಳಿ ಸೊಂಟದ ದಾರ ತಂದುಕೊಟ್ಟು ಆ ಖುಷಿಯನ್ನ ದುಪ್ಪಟ್ಟು ಮಾಡಿದ್ರು. ಇಲ್ಲಿ ಎಲ್ಲಾರಿಗೂ ಮೂಡಿದ ಪ್ರಶ್ನೆ ಏನೆಂದ್ರೆ ತನೀಷಾ ಇಷ್ಟು ದಿನ ಇದನ್ನ ಎಲ್ಲಿ ಇಟ್ಟುಕೊಂಡಿದ್ರು..? ಇಷ್ಟು ಬೇಗ ತಂದುಕೊಡೊಕೆ ಇದನ್ನ ಯಾರು ಕೊಟ್ರು.? ಬಿಗ್ ಬಾಸ್ ಯಾವಾಗಿಂದ ಸೊಂಟದ ದಾರದ ಅಂಗಡಿ ಇಟ್ಕೊಂಡಿದ್ದಾರೆ.? ತನಿಷಾ ಹೇಳ್ತಿದ್ರು ನನ್ ಹತ್ರ ಮುಂಚೇನೆ ಇತ್ತು ಅಂತ ಅಂದ್ರು ಆದ್ರೆ ಇದು ಸತ್ಯಕ್ಕೆ ದುರದ ಮಾತು. ಅಲ್ಲಾ ಗುರು ಅವರು ತಂದಿರೋ ಬಟ್ಟೆ ಇಟ್ಕೊಳ್ಳೋಕೆ ಜಾಗ ಇಲ್ಲ, ಇನ್ನು ಇದನ್ನ ಎಲ್ಲಿಡ್ತಾರೆ ಅಂತ ಪ್ರಶ್ನೆ ಹಾಕಿದ್ದಾರೆ ಬಿಗ್ ಬಾಸ್ ನೋಡುಗರು..!

ಚೈತನ್ಯ ರೆವಿನ್ಯೂ ಫ್ಯಾಕ್ಟ್ ನ್ಯೂಸ್

Related News

spot_img

Revenue Alerts

spot_img

News

spot_img