ಬೆಂಗಳೂರು, ಜು. 06 : ಈಗೇನು ಬೀದಿಯೊಂದರಲ್ಲಿ ನಾಲ್ಕು ಹೋಟೆಲ್ ಗಳಿರುತ್ತವೆ. ಮೊದಲೆಲ್ಲಾ ಇಡೀ ಊರಿಗೆ ಒಂದೇ ಹೋಟೆಲ್ ಇರುತ್ತಿತ್ತು. ಈಗ ಹಾಗೆನ್ನುವ ಹಾಗೇ ಇಲ್ಲೆ. ಹೆಜ್ಜೆ ಹೆಜ್ಜೆಗೂ ಹೋಟೆಲ್ ಗಳು ಸಿಗುತ್ತವೆ. ಆದರೆ, ಯಾವ ಹೋಟೆಲ್ ನಲ್ಲಿ ಊಟದ ರುಚಿ, ಆಂಬಿಯನ್ಸ್ ಚೆನ್ನಾಗಿರುತ್ತದೆ ಎಂಬುದನ್ನು ಜನರು ನೋಡಿ ಆಯ್ಕೆ ಮಾಡಿಕೊಳ್ಳುತ್ತಾರೆ. ಉತ್ತಮವಾದ ಊಟ, ಕ್ಲೀನ್ ಆಗಿದ್ದರೆ, ಅಂತಹ ಹೋಟೆಲ್ ಗಳನ್ನು ಜನ ಆರಿಸಿಕೊಳ್ಳುತ್ತಾರೆ.
ಫ್ರಾನ್ಸ್ ಕಂಪನಿಯಾದ ಲಾ ಲಿಸ್ಟೆ ಈಗ ವಿಶ್ವದ ಟಾಪ್ 1000 ಹೊಟೇಲ್ ಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಲಾ ಲಿಸ್ಟೆ ಹಲವು ಬುಕಿಂಗ್ ವೆಬ್ ಸೈಟ್ ಗಳಲ್ಲಿ ಗ್ರಾಹಕರು ಯಾವ ಹೋಟೆಲ್ ಗೆ ಎಷ್ಟು ರೇಟಿಂಗ್ ನೀಡಿವೆ. ಪತ್ರಿಕೆ ಹಾಗೂ ಜಾಗತಿಕ ಮಾದ್ಯಮಗಳಲ್ಲಿ ಯಾವ ಹೋಟೆಲ್ ಗಳ ರೇಟಿಂಗ್ ಎಷ್ಟಿದೆ ಎಂಬ ಮಾಹಿತಿ ಕಲೆ ಹಾಕಿದೆ. ಈ ಮೂಲಕ ಲಾ ಲಿಸ್ಟೆ ಲೆಕ್ಕಾಚಾರ ಹಾಕಿ ಒಂದಷ್ಟು ಹೋಟೆಲ್ ಗಳನ್ನು ದಿ ಬೆಸ್ಟ್ ಎಂದು ಆಯ್ಕೆ ಮಾಡಿದೆ.
ರಾಜಸ್ಥಾನದ ಉದಯವಿಲಾಸ್ ಹೋಟೆಲ್ ಸರ್ವಶ್ರೇಷ್ಠ ಹೋಟೆಲ್ ಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಇದು ಶ್ರೀ ರಾಯ್ ಬಹದ್ದೂರ್ ಮೋಹನಸಿಂಹ ಓಬೆರಾಯ್ ನಿರ್ಮಸಿದ್ದು. ಈದರಲ್ಲಿ ಮೂರು ರೆಸ್ಟೋರೆಂಟ್, ಎರಡು ಸ್ವಿಮಿಂಗ್ ಫೂಲ್, 89 ಕೋಣೆಗಳು, ಸ್ಪಾ ಎಲ್ಲವೂ ಇದೆ. ಐಷಾರಾಮಿ ಈ ಹೋಟೆಲ್ ನಲ್ಲಿ ಯೇ ಜವಾನಿ ಹೇ ದಿವಾನಿ ಸಿನಿಮಾ ಮದುವೆಯ ಶೂಟಿಂಗ್ ನಡೆದಿದೆ. ಇದು 50 ಎಕರೆ ವಿಸ್ತೀರ್ಣದಲ್ಲಿದ್ದು, ಇಲ್ಲಿ ತಂಗಲು ಒಂದು ದಿನಕ್ಕೆ 35000 ರೂಪಾಯಿ ಕೊಡಬೇಕು.
ಅದೂ ಕೂಡ ಒಂದು ಕೋಣೆಗೆ ಮಾತ್ರವೇ. ಅಲ್ಲಿಗೆ ಇಡೀ ಹೋಟೆಲ್ ಒಂದು ದಿನಕ್ಕೆ ಬುಕ್ ಮಾಡಬೇಕೆಂದರೆ, ಕೋಟಿ ಲಕ್ಷ ಹಣವನ್ನು ನೀಡಬೇಕಾಗುತ್ತದೆ. ಇನ್ನು ಮೊದಲ ಸ್ಥಾನವನ್ನು ಇಟಲಿಯ ವೆನಿಸ್ ನ ಬೆಲ್ಮಂಡ್ ಹೋಟೆಲ್, ಮೆಕ್ಸಿಕೋದ ಕಾಬೋ ಸಾನ್ ಲುಕಾಸ್ ನ ವಾಲ್ಡೋರ್ಪ್ ಎಸ್ಟೋರಿಯಾ ಲಾಸ್ ಕ್ಯಾಬೋಸ್ ಪೆಡ್ರೆಗಲ್, ಶಿಕಾಗೋದ ದ ಪೆನಿನ್ಸುಲಾ ಮತ್ತು ಫ್ರಾನ್ಸ್ ನ ಸೇಂಟ್ ಬಾರ್ತೆಲೆಮಿಯ ಚೆವಲ್ ಬ್ಲಾಂಕ್ ಸೇಂಟ್ – ಬಾರ್ತ್ ಐಲ್ ಡಿ ಫ್ರಾನ್ಸ್ ಹೋಟೆಲ್, ಅಮೆರಿಕದ ಬೇವರ್ಲಿ ಹಿಲ್ಸ್ ನ ಎಲ್ ಹರ್ಮಿಟೇಜ್ ಬೆವರ್ಲಿ ಹಿಲ್ಸ್, ಲಂಡನ್ನಿನ ಸೆವಾಯ್, ಪ್ಯಾರಿಸ್ ನ ಲಾ ರಿಜರ್ವ್ ಪ್ಯಾರಿಸ್ ಹಾಗೂ ಲೆ ಮ್ಯೂರಿಸ್ ಹೋಟೆಲ್ ಗಳು ಲಿಸ್ಟ್ ನಲ್ಲಿವೆ.