21.9 C
Bengaluru
Sunday, July 7, 2024

ದಕ್ಷಿಣ ದಿಕ್ಕಿನ ಪ್ರಭಾವ ಹಾಗೂ ಅದರ ಪ್ರಾಮುಖ್ಯತೆ ಬಗ್ಗೆ ತಿಳಿಯಿರಿ..

ಬೆಂಗಳೂರು, ಡಿ. 21:  ವಾಸ್ತು ಶಾಸ್ತ್ರಕ್ಕೆ ವೈಜ್ಞಾನಿಕ ಹಾಗೂ ಪಾರಂಪರಿಕ ಹಿನ್ನೆಲೆ ಇರುವಂತಹದ್ದು. ಇದರ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುವಂತಹ ಹಾಗೂ ಕಳೆದ 20 ವರ್ಷಗಳಿಂದ ಇದೇ ವಿಷಯವಾಗಿ ಬೋಧನೆ ಮಾಡಿಕೊಂಡು ಬಂದಿರುವ ಜೋತಿಷಿ ಹಾಗೂ ಸಂಖ್ಯಾ ಶಾಸ್ತ್ರಜ್ಞರು ಡಾ. ರೇವತಿ ವೀ ಕುಮಾರ್ ಅವರು ದಕ್ಷಿಣ ದಿಕ್ಕಿನ ಮಹತ್ವದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ದಕ್ಷಿಣ ದಿಕ್ಕಿಗೂ ಪೂರ್ವಜರಿಗೂ ಇರುವ ಕನೆಕ್ಷನ್ ಬಗ್ಗೆ ಬಹಳ ಸರಳವಾಗಿ ಹೇಳಿದ್ದು, ಡಾ.ರೇವತಿ ವೀ ಕುಮಾರ್ ಅವರು ಏನು ಹೇಳಿದ್ದಾರೆ ಎಂದು ತಿಳಿಯೋಣ ಬನ್ನಿ.

ಕೆಲವೊಮ್ಮೆ ಏನೇ ಮಾಡಿದರೂ ಏಳಿಗೆಯನ್ನು ಕಾಣಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಹೆಚ್ಚಿನ ಜನರು ಜ್ಯೋತಿಷಿಗಳ ಮೊರೆ ಹೋಗುವುದು ಸಹಜ. ತಮ್ಮ ಜಾತಕದ ಬಗ್ಗೆ ಮೊದಲು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಬಳಿಕ ತಮ್ಮ ಮನೆಯ ವಾಸ್ತುವನ್ನು ಕೂಡ ಅರಿತುಕೊಳ್ಳಲು ಮುಂದಾಗುತ್ತಾರೆ. ವಾಸ್ತು ಶಾಸ್ತ್ರವನ್ನು ಕೇವಲ ಭಾರತೀಯರಷ್ಟೇ ಅಲ್ಲದೇ, ಹೊರ ದೇಶದವರು ಕೂಡ ನಂಬುತ್ತಾರೆ. ಪರಿಹಾರವಾಗದ ಅದೆಷ್ಟೋ ಸಮಸ್ಯೆಗಳು ಬಗೆ ಹರಿದಿವೆ. ಇದಕ್ಕೆ ನಮ್ಮ ನಿಮ್ಮ ಸುತ್ತ ಸಾಕಷ್ಟು ಉದಾಹರಣೆಗಳು ಕೂಡ ಸಿಗುತ್ತವೆ. ವಾಸ್ತು ಶಾಸ್ತ್ರಜ್ಞರಾದ ಡಾ.ರೇವತಿ ವೀ ಕುಮಾರ್ ಅವರು ದಕ್ಷಿಣ ದಿಕ್ಕಿನ ಮಹತ್ವದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಅದರಂತೆ ದಕ್ಷಿಣ ದಿಕ್ಕು ಶಕ್ತಿಗೂ ಮುಕ್ತಿಗೂ ಎರಡಕ್ಕೂ ಮುಖ್ಯವಾದ ದಿಕ್ಕು. ಹೆಚ್ಚು ಮಂದಿ ದಕ್ಷಿಣ ದಿಕ್ಕನ್ನು ತಿರಸ್ಕರಿಸುತ್ತಾರೆ. ಆದರೆ ದಕ್ಷಿಣ ದಿಕ್ಕಿಗೆ ಮನೆಯ ಯಜಮಾನ ತಲೆ ಇಟ್ಟು ಮಲಗುವುದರಿಂದ ಬಹಳ ಒಳ್ಳೆಯದು. ಅಲ್ಲದೇ, ಕೆಲ ರಾಶಿಗಳಿಗೆ ದಕ್ಷಿಣ ದಿಕ್ಕು ಶುಭ ಸೂಚಕವೂ ಹೌದು. ದಕ್ಷಿಣ ದಿಕ್ಕನ್ನು ಶಯನ ಕೇಂದ್ರ, ಶಕ್ತಿ ಕೇಂದ್ರ ಹಾಗೂ ಶಾಂತಿ ಕೇಂದ್ರ ಎಂದು ಹೇಳಲಾಗುತ್ತದೆ. ಯೋಗ ಹಾಗೂ ಧ್ಯಾನ ಮಾಡಲು ದಕ್ಷಿಣ ದಿಕ್ಕು ಹೇಳಿ ಮಾಡಿಸಿದ ದಿಕ್ಕು ಎಂದು ಹೇಳಲಾಗಿದೆ. ದಕ್ಷಿಣ ದಿಕ್ಕಿನಲ್ಲಿ ಸಫಲತೆಯನ್ನು ಕಾಣಲು ಕೆ ಪ್ರಾಮೈಖ್ಯತೆಗಳು ಹಾಗೂ ನಿಯಮಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ದಕ್ಷಿಣ ದಿಕ್ಕನ್ನು ಶಕ್ತಿಗೆ ಹೋಲಿಸಲಅಗಿದೆ. ಮನುಷ್ಯನ ಅಂತ್ಯವಾಗುವುದು ಆತನ ದೇಹದಲ್ಲಿ ಶಕ್ತಿ ಕ್ಷೀಣಿಸಿದಾಗ. ಮನುಷ್ಯನ ದೇಹಕ್ಕೆ ಶಕ್ತಿ ಬರುವುದು ದಕ್ಷಿಣ ದಿಕ್ಕಿನಿಂದಲೇ. ದಕ್ಷಿಣ ದಿಕ್ಕನ್ನು ಯಮ ರಾಜನ ದಿಕ್ಕು ಎಂದು ಕೂಡ ಕರೆಯುತ್ತಾರೆ. ದೇಹದಲ್ಲಿ ಶಕ್ತಿಯನ್ನು ಕಳೆದುಕೊಂಡಾಗ ಮರಣವನ್ನು ಹೊಂದುತ್ತೀವಿ. ಮನುಷ್ಯನ ದೇಹದಲ್ಲಿ ಶಕ್ತಿ ಇದ್ದರೆ, ಆತ ಬಹಳ ಆಕ್ಟೀವ್ ಆಗಿ ಇರುತ್ತಾರೆ. ದೇಹಕ್ಕೆ ಶಕ್ತಿಯು ಮಜ್ಜೆಯಿಂದ ಸಿಗುತ್ತದೆ. ಇದು, ಮಗು ಹುಟ್ಟಿದಾಗ ಮದುವಾಗಿರುತ್ತದೆ. ಬೆಳೆದಂತೆ ಸದೃಢ ಹೊಂದುತ್ತದೆ. ವಯಸ್ಸಾದಂತೆ ಮತ್ತೆ ಮೆತ್ತಗಾಗುತ್ತದೆ. ಮಜ್ಜೆಯಲ್ಲಿ ಶಕ್ತಿ ಇದ್ದಷ್ಟೂ ದಿನ ವ್ಯಕ್ತಿಗೆ ಸಾವಿಲ್ಲ.

ಮನುಷ್ಯ ಆಕ್ಟೀವ್ ಆಗಿ ಏನೇ ಮಾಡಬೇಕೆಂದರೂ ಅದು ದಕ್ಷಿಣ ದಿಕ್ಕಿನ ಶಕ್ತಿಯನ್ನೇ ಅವಲಂಭಿಸುತ್ತೇವೆ. ಇನ್ನು ದಕ್ಷಿಣ ದಿಕ್ಕು ಮೃತ್ಯುವನ್ನು ಕೂಡ ಪ್ರತಿಬಿಂಭಿಸುವುದರಿಂದ ಪೂರ್ವಜರಿಗೆ ಹೋಲಿಸಲಾಗುತ್ತದೆ. ದಕ್ಷಿಣ ದಿಕ್ಕಿನಲ್ಲಿ ಹೆಚ್ಚು ಪ್ರಭಾವ, ಶಕ್ತಿ ಇರುವುದರಿಂದ ಮನೆಯ ಯಜಮಾನ ಅಥವಾ ಯಾವುದೇ ಕೆಲಸದ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ದಕ್ಷಿಣ ದಿಕ್ಕಿನಲ್ಲಿ ತನ್ನ ಕೆಲಸವನ್ನು ಮಾಡಿದರೆ ಸಕ್ಸಸ್ ಕಾಣುವುದು ಗ್ಯಾರೆಂಟಿ ಎಂದು ಡಾ.ರೇವತಿ ವೀ ಕುಮಾರ್ ಅವರು ಹೇಳುತ್ತಾರೆ.

Related News

spot_img

Revenue Alerts

spot_img

News

spot_img