ಬೆಂಗಳೂರು, ಏ. 08 : ಇತ್ತೀಚೆಗೆ ಭಾರತದಲ್ಲಿ ಭೂಮಿಯನ್ನು ಖರೀದಿಸುವವರು, ಸ್ವಂತ ಮನೆ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಭಾರತದ ರಿಯಲ್ ಎಸ್ಟೇಟ್ ಬೆಲೆ ಕೂಡ ಹೆಚ್ಚಾಗಿದೆ. ಇನ್ನು ಕೆಲವರು ಭೂಮಿ ಬೆಲೆ ಹೆಚ್ಚಾಗುತ್ತಿದೆ. ಸದ್ಯಕ್ಕಂತೂ ಮನೆ ಖರೀದಿಸಲು ಸಾಧ್ಯವಿಲ್ಲ. ಕನಿಷ್ಢಪಕ್ಷ ಸ್ವಂತ ಕಾರನ್ನು ಖರೀದಿ ಮಾಡಿ ದೇಶ ಸುತ್ತೋಣ ಎಂದು ಕಾರನ್ನು ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ಈ ಎರಡೂ ವಿಚಾರಗಳ ಬಗ್ಗೆ ಈಗ ಭಾರತೀಯರಿಗೆ ಶಾಂಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ. ಬೆಂಗಳೂರು ಮೂಲದ ಕ್ಯಾಪಿಟಲ್ ಮೈಂಡ್ ನ ಸ್ಥಾಪಕ ಮತ್ತು ಸಿಇಓ ದೀಪಕ್ ಶೆಣೈ ಅವರು ಮನೆ ಖರೀದಿ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಅವರ ಪ್ರಕಾರ, ಮನೆಗಳನ್ನು ಖರೀದಿಸುವ ಸಲುವಾಗಿ ಹೂಡಿಕೆ ಮಾಡುವ ಹಣವನ್ನು ಭಯಾನಕ ಹೂಡಿಕೆ ಎಂದು ಹೇಳಿದ್ದಾರೆ. ಯಾಕೆಂದರೆ, ಪ್ರತಿಯೊಬ್ಬರು ಸ್ವಂತ ಮನೆಯನ್ನು ಖರೀದಿಸಲು ಬಯಸುವುದು ಮಾಲೀಕತ್ವವನ್ನು ಅನುಭವಿಸುವ ಸಲುವಾಗಿ ಎಂದು ಹೇಳಿದ್ದಾರೆ. ಮೊದಲಿನಿಂದಲೂ ಸಮಾಜದಲ್ಲಿ ಸ್ವಂತ ಮನೆ ಹಾಗೂ ಬಾಡಿಗೆ ಮನೆ ಬಗ್ಗೆ ತರ್ಕಗಳು ಇವೆ. ಬಾಡಿಗೆ ಮನೆಯಲ್ಲಿ ಇರುವವರಿಗೆ ಮಾಲೀಕತ್ವವನ್ನು ಅನುಭವಿಸುವ ಬಯಕೆ ಮೊದಲಿನಿಂದಲೂ ಇದೆ. ಹಾಗಾಗಿ ಎಲ್ಲರೂ ಸ್ವಂತ ಮನೆ ಹಾಗೂ ಕಾರನ್ನು ಖರೀದಿಸಲು ಬಯಸುತ್ತಾರೆ ಎಂದು ಹೇಳಿದ್ದಾರೆ.
ಇನ್ನೂ ಕೆಲವರು ಮನೆಯನ್ನು ಸ್ವಂತಕ್ಕೆ ಖರೀದಿ ಮಾಡುವುದು ಒಂದು ರೀತಿಯ ಹೂಡಿಕೆ ಎಂದು ಕೂಡ ಹೇಳುತ್ತಾರೆ. ಇನ್ನು ಮನೆಯ ವಿಳಾಸವನ್ನು ಪದೇ ಪದೇ ಬದಲಾಯಿಸುವ ಗೋಜು ಇರುವುದಿಲ್ಲ. ಪ್ರತಿಯೊಂದಕ್ಕೂ ಒಂದೇ ಅಡ್ರೆಸ್ ಇರುತ್ತದೆ ಎಂದು ಕೂಡ ಕೆಲವರು ಭಾವಿಸುತ್ತಾರೆ ಎನ್ನಲಾಗಿದೆ. ಕಾರು ಖರೀದಿಸುವವರು ಇದೇ ರೀತಿ ಯೋಚಿಸುತ್ತಾರೆ ಎಂದು ಶಣೈ ಹೇಳಿದ್ದಾರೆ. ಇವರ ಟ್ವೀಟ್ ಈಗ ಭಾರೀ ವೈರಲ್ ಆಗಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ.
ಶಣೈ ಅವರ ಟ್ವೀಟ್ ಗೆ ಹಲವರು ಹೌದು ಎಂದು ಪ್ರತಿಕ್ರಿಯಿಸಿದ್ದಾರೆ. ಎಲ್ಲೂ ಕೂಡ ಶಣೈ ಅವರ ಮಾತಿಗೆ ಬೆಂಬಲಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಸ್ಟೇಟಸ್ ಎಂಬುದು ಬಹಳ ಮುಖ್ಯ. ತಾನೂ ಮಾಲೀಕತ್ವವನ್ನು ಅನುಭವಿಸುವ ದಾಹ ಇದೆ ಎಂದು ಟ್ವೀಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ಟ್ವೀಟ್ ಗೆ ಇದನ್ನು ಅರ್ಥ ಮಾಡಿಕೊಂಡರೆ, ಅಪಅಯವಾಗುವ ಸಾಧ್ಯತೆಯೂ ಇದೆ ಎಂದು ಕೂಡ ಹೇಳುತ್ತಿದ್ದಾರೆ.