#Terminal 2 #Kempegowda Airport #operational #August 31
ಬೆಂಗಳೂರು;ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣ ಮಾಡಲಾಗಿದ್ದು, ಕಳೆದ ಜನವರಿ 15ರಿಂದ ಕೆಲವು ವಿಮಾನಗಳ ಹಾರಾಟ ಮಾತ್ರ ಶುರುವಾಗಿತ್ತು.ಆದರೆ ಆಗಸ್ಟ್ 31(August31)ರಿಂದ ಹೊಸ ಟರ್ಮಿನಲ್(Terminal)ನಿಂದ ದೇಶೀಯ ಹಾಗೂ ಅಂತಾರಾಷ್ಟ್ರೀಯ ಎಲ್ಲಾ ವಿಮಾನಗಳ ಹಾರಾಟ ನಡೆಯಲಿದೆ.ದೇಶೀಯ ವಿಮಾನಯಾನ ನಡೆಸುವ ಮೂರು ಸಂಸ್ಥೆಗಳಾದ ಸ್ಟಾರ್ ಏರ್, ವಿಸ್ತಾರ, ಏರ್ ಏಶಿಯಾ ವಿಮಾನಗಳು ಮಾತ್ರ ಟಿ2ನಿಂದ ಹಾರಾಟ ನಡೆಸುತ್ತಿದ್ದವು. ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್ 2 ರಿಂದ ಹೊರಡುವ ಮೊದಲ ಅಂತರರಾಷ್ಟ್ರೀಯ ವಿಮಾನ ಸಿಂಗಾಪುರ್ ಏರ್‌ಲೈನ್ಸ್‌ನಿಂದ ಹೊರಡಲಿದೆ. ಸಿಂಗಾಪುರ್ ಏರ್‌ಲೈನ್ಸ್(Singapoor airlence) ವಿಮಾನವು ಆಗಸ್ಟ್ 31 ರಂದು ಬೆಳಿಗ್ಗೆ 8:50 ಕ್ಕೆ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಿಂದ ಹೊರಟು ಅದೇ ದಿನ ಬೆಳಿಗ್ಗೆ 10:55 ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲಿದೆ ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ತಿಳಿಸಿದೆ.ನಿಲ್ದಾಣದ ಟರ್ಮಿನಲ್ 2 ಅನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣ ಮಾಡಲಾಗಿದ್ದು, ಈ ಕುರಿತು ವಿಮಾನ ನಿಲ್ದಾಣದ ಆಡಳಿತ ಮಂಡಳಿ ಪ್ರಯಾಣಿಕರಿಗೆ ಮಾಹಿತಿ ನೀಡುವ ನಾಮಫಲಕ, ಪ್ಲೆಕ್ಸ್ ಅಳವಡಿಸಿದೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗಿ 15 ವರ್ಷಗಳು ಕಳೆದಿವೆ.
ಈ ಅವಧಿಯಲ್ಲಿ ಹಲವು ವಿಶೇಷತೆಗಳು ಹಾಗೂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ನಿಲ್ದಾಣದ ಟರ್ಮಿನಲ್ 2 ಅನ್ನು ಪ್ರಧಾನಿ ನರೇಂದ್ರ ಮೋದಿ(Narendramodi). ಅಂತಾರಾಷ್ಟ್ರೀಯ 28 ವಿಮಾನಯಾನ ಸಂಸ್ಥೆಗಳ ವಿಮಾನಗಳ ಹಾರಾಟ ಟಿ2ನಲ್ಲಿ ಆರಂಭವಾಗಲಿದ್ದು, ಟರ್ಮಿನಲ್ 2ರ ಅತ್ಯಾಧುನಿಕ ತಂತ್ರಜ್ಞಾನವನ್ನ ವಿದೇಶಿ ಪ್ರಯಾಣಿಕರು ಕಣ್ತುಂಬಿಕೊಳ್ಳಬಹುದು.ಟರ್ಮಿನಲ್-1 ಪ್ರತ್ಯೇಕವಾಗಿ ದೇಶೀಯ ಟರ್ಮಿನಲ್ (Domestic Operations) ಆಗಿ ಕಾರ್ಯನಿರ್ವಹಿಸಲಿದೆ.ಕೆಐಎ ಟರ್ಮಿನಲ್ 1 ರಲ್ಲಿ ದೇಶೀಯ ಕೆಲವು ವಿಮಾನಗಳು ಹಾಗೂ ಕಾರ್ಗೋ ಮಾತ್ರ ಹಾರಾಟ ನಡೆಸುತ್ತದೆ.