22.9 C
Bengaluru
Friday, July 5, 2024

ಬೆಂಗಳೂರು ವಾಸಕ್ಕೆ ಯೋಗ್ಯವಾದ ಹತ್ತು ಏರಿಯಾಗಳ ಪಟ್ಟಿ ಇಲ್ಲಿದೆ..

ಬೆಂಗಳೂರು, ಮಾ. 10 : ಭಾರತ ಜಾಗತಿಕ ಮಟ್ಟವಾಗಿ ಅತೀ ವೇಗವಾಗಿ ಬೆಳೆಯುತ್ತಿದೆ. ಭಾರತದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರವೆಂದರೆ ಅದು ಬೆಂಗಳೂರು. ಐಟಿ ಕಂಪನಿಗಳಿಗೆ ಹೆಸರು ವಾಸಿಯಾದ ಬೆಂಗಳೂರಿನಲ್ಲಿ ಹಲವು ಏರಿಯಾಗಳು ಕಾಸ್ಟ್ಲಿ ಆಗಿವೆ. ಆದರೆ, ಬೆಂಗಳೂರಿನ 10 ಏರಿಯಾಗಳಲ್ಲಿ ಉತ್ತಮವಾದ ಜೀವನ ನಿರ್ವಹಣೆಯನ್ನು ಮಾಡಬಹುದಾಗದೆ. ಈ ಹತ್ತು ನಗರಗಳಲ್ಲೂ ಮೂಲಸೌಕರ್ಯ ಉತ್ತಮವಾಗಿದ್ದು, ಸಾರಿಗೆ ಸೌಕರ್ಯವೂ ಅನುಕೂಲಕರವಾಗಿದೆ. ಈ ಹತ್ತು ನಗರಗಳಲ್ಲಿ ಅಗ್ಗದ ವಸತಿಗಳನ್ನೂ ಕೂಡ ಪಡೆಯಬಹುದಾಗಿದೆ. ಹಾಗಾದರೆ, ಆ ಹತ್ತು ಏರಿಯಾಗಳು ಯಾವುವು ಎಂದು ತಿಳಿಯೋಣ ಬನ್ನಿ.

ಮಾರತ್ತಹಳ್ಳಿ: ಸಾಕಷ್ಟು ಐಟಿ ಉದ್ಯೋಗಿಗಳು ಮಾರತ್ತಹಳ್ಳಿಯಲ್ಲಿ ವಾಸವಿದ್ದು, ಈ ಏರಿಯಾದಿಂದ ವೈಟ್ ಫೀಲ್ಡ್, ದೊಮ್ಮಲೂರು ಸೇರಿದಂತೆ ಹಲವು ಐಟಿ ಹಬ್ ಗಳಿಗೆ ಹತ್ತಿರವಾದ ಸ್ಥಳವಾಗಿದೆ. 15,000 ರಿಂದ 25,000 ವರೆಗೆ ಬಾಡಿಗೆ ಮನೆಗಳು ಇಲ್ಲಿ ಲಭ್ಯ ಇವೆ.

ಚಂದಾಪುರ: ಚಂದಾಪುರ ಪ್ರದೇಶವು ಇತರೆ ಉದ್ಯೋಗ ಸ್ಥಳಗಳಿಗೆ ಹೆಚ್ಚು ಸಂಪರ್ಕವನ್ನು ಹೊಂದಿದೆ. ಚಂದಾಪುರದಲ್ಲಿ ಇಂಡಿಪೆಂಡೆಂಟ್ ಮನೆಗಳು, ವಿಲ್ಲಾಗಳು, ಪೆಂಟ್ ಹೌಸ್ ಗಳು, ಅಪಾರ್ಟ್ ಮೆಂಟ್ ಗಳು ಸೇರಿದಂತೆ ಬಾಡಿಗೆಗೆ ಮನೆಗಳು ಸಿಗುತ್ತವೆ. ಇಲ್ಲಿಯೂ ಅಗ್ಗದ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತವೆ.

ಎಲೆಕ್ಟ್ರಾನಿಕ್ ಸಿಟಿ: ಬೆಂಗಳೂರಿನ ಇತರೆ ನಗರಗಳಿಗೆ ಹೋಲಿಸಿದರೆ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆ ಮನೆಗಳು ಕೊಂಚ ಹೆಚ್ಚೇ ಅಗ್ಗವಾಗಿದೆ. ಇನ್ಫೋಸಿಸ್ ಸೇರಿದಂತೆ ಕೆಲ ಕಂಪನಿಗಳು ಇಲ್ಲಿದ್ದು, ಕೆಲ ಅರಸಿ ಬರುವವರಿಗೆ ಎಲೆಕ್ಟ್ರಾನಿಕ್ ಸಿಟಿ ಉತ್ತಮವಾದ ಸ್ಥಳವಾಗಿದೆ. 9,000 ದಿಂದ 20,000 ವರೆಗೆ ಬಾಡಿಗೆಗೆ ಮನೆಗಳು ಲಭ್ಯವಿದೆ.

ಕನಕಪುರ ರಸ್ತೆ: ಕನಕಪುರ ರಸ್ತೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಅತಿವೇಗವಾಗಿ ಬೆಳೆಯುತ್ತಿದೆ. ಇಲ್ಲಿ ಹೆಚ್ಚು ಮೂರು ಮಲಗುವ ಕೊಠಡಿಗಳು ಇದ್ದು, 5000 ದಿಂದ 23,000ದವರೆಗೆ ಮನೆಗಳು ಬಾಡಿಗೆಗೆ ದೊರೆಯುತ್ತವೆ. ಜೆಪಿ ನಗರ, ಬನಶಂಕರಿ ಹಾಗೂ ಅಂಜನಾಪುರಕ್ಕೆ ಇಲ್ಲಿಂದ ಸಂಚರಿಸುವುದು ಬಹಳ ಸೂಕ್ತವಾದ ಸ್ಥಳವಾಗಿದೆ.

ದೇವನಹಳ್ಳಿ: ದೇವನಹಳ್ಳಿಯಲ್ಲಿ ಅಗ್ಗದ ಬೆಲೆಗೆ ಅಪಾರ್ಟ್ ಮೆಂಟ್ ಗಳು ಲಭ್ಯವಿದೆ. ಕೆಂಪೇಗೌಡ ಏರ್ಪೋಟ್ ಗೆ ಹತ್ತಿರವಿದ್ದು, ಇಲ್ಲಿ 9,000 ದಿಂದ 20,000 ವರೆಗೆ ಬಾಡಿಗೆಗೆ ಮನೆಗಳು ಸುಗುತ್ತವೆ. ಇನ್ನು ದೇವನಹಳ್ಳಿಯಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಉತ್ತಮ ಮೂಲ ಸೌಕರ್ಯವನ್ನು ಒದಗಿಸುತ್ತದೆ.

ಬನಶಂಕರಿ: ಬನಶಂಕರಿ ಬೆಂಗಳೂರಿನ ಹಳೆಯ ಏರಿಯಾ ಆಗಿದ್ದು, ಇಲ್ಲಿ ಪ್ರತಿಯೊಂದು ಕೂಡ ಲಭ್ಯವಿದೆ. ಮೆಟ್ರೋ ಸಂಪರ್ಕ, ಬಸ್ ಸೇವೆಗಳು ಉತ್ತಮವಾಗಿದೆ. ಇಲ್ಲಿ 10,000 ದಿಂದ 45,000 ರೂ.ವರೆಗೂ ಬಾಡಿಗೆಗೆ ಮನೆಗಳು ಲಭ್ಯವಿದೆ.

ಹೊರಮಾವು: ಹೊರ ವರ್ತುಲ ಪ್ರದೇಶದಲ್ಲಿ ಹೊರಮಾವು ಇದ್ದು, ಹೊರಮಾವು ಸುತ್ತ ಟೆಕ್ ಪಾರ್ಕ್ ಗಳು ಇದೆ. ಉತ್ತಮ ಸಾರಿಗೆ ಸೌಲಭ್ಯವನ್ನು ಹೊಂದಿರುವ ಹೊರಮಾವು ಏರಿಯಾದಲ್ಲಿ ಬಾಡಿಗೆಗೆ 5,500 ದಿಂದ 40,00 ರೂ. ವರೆಗೆ ಲಭ್ಯವಿದೆ.

ಜಯನಗರ: ಜಯನಗರದಲ್ಲಿ ಉತ್ತಮವಾದ ಮೂಲ ಸೌಕರ್ಯವಿದ್ದು, ಆಹಾರ ಪಾಯಿಂಟ್ ಗಳು, ತರಕಾರಿ ಮಾರ್ಕೆಟ್, ಶಾಪಿಂಗ್ ಗೆ ಉತ್ತಮವಾದ ಸ್ಥಳವಿದೆ. ಕಾಲೇಜು, ಶಾಲೆಗಳು ಕೂಡ ಇದ್ದು, ಇಲ್ಲಿ ಅಗ್ಗದ ವಸತಿಗಳು ಸಿಗುತ್ತವೆ. 10,700 ದಿಂದ 45,000 ವರೆಗೆ ಮನೆಗಳು ಬಾಡಿಗೆಗೆ ಸಿಗುತ್ತವೆ.

ಸರ್ಜಾಪುರ: ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್ ಸೇರಿದಂತೆ ಹಲವು ಪ್ರದೇಶಗಳಿಗೆ ಸರ್ಜಾಪುರದಿಂದ ಉತ್ತಮ ಸಂಪರ್ಕವಿದ್ದು, ಐಟಿ ಗಳಿಗೆ ಉದ್ಯೋಗಕ್ಕೆ ತೆರಳುವ ಸುಮಾರು ಜನ ಸರ್ಜಾಪುರದಲ್ಲಿ ನೆಲೆಸುತ್ತಾರೆ. ಸರ್ಜಾಪುರದಲ್ಲಿ 9,500 ದಿಂದ 45,000 ವರೆಗೂ ಬಾಡಿಗೆ ಮನೆಗಳು ಸಿಗುತ್ತವೆ.

ಯಲಹಂಕ: ಯಲಹಂಕ ಏರಿಯಾ ಸದಾ ಪ್ರಶಾಂತವಅಗಿರುತ್ತದೆ. ಸ್ವಚ್ಛವಾಗಿರುತ್ತದೆ. ಇಲ್ಲಿ ವಾಸ ಮಾಡಲು ಅಗ್ಗದ ಬೆಲೆಗೆ ಬಾಡಿಗೆ ಮನೆಗಳು ಸಿಗುತ್ತವೆ. 3,000 ದಿಂದ 30,000 ರೂ.ವರೆಗೂ ಮನೆಗಳು ಬಾಡಿಗೆಗ ಸಿಗುತ್ತವೆ. ಯಲಹಂಕದಿಂದ ಸುತ್ತಲೂ ಎಲ್ಲಾ ಪ್ರದೇಶಗಳಿಗೂ ಉತ್ತಮವಾದ ಸಅರಿಗೆ ಸೌಲಭ್ಯವನ್ನು ಹೊಂದಿವೆ.

Related News

spot_img

Revenue Alerts

spot_img

News

spot_img