25.6 C
Bengaluru
Monday, December 23, 2024

ಕೇಂದ್ರ ಬಜೆಟ್:‌ ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷದವರೆಗೆ ಟ್ಯಾಕ್ಸ್‌ ಕಟ್ಟುವಂತಿಲ್ಲ..

ಬೆಂಗಳೂರು, ಫೆ. 01 : ಇಂದು ಮಂಡಿಸಿದ ಕೇಂದ್ರ ಬಜೆಟ್‌ ನಲ್ಲಿ ಮಧ್ಯಮ ವರ್ಗದ ಜನರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಮಧ್ಯಮ ವರ್ಗದ ಜನರಿಗೆ ಸಹಾಯವಾಗುವಂತೆ ಆದಾಯ ತೆರಿಗೆಯಲ್ಲಿ ವಿನಾಯ್ತಿ ದೊರೆತಿದೆ. ಆದಾಯ ತೆರಿಗೆಯಲ್ಲಿ ಈ ಬಾರಿ ಕೇಂದ್ರ ಸರ್ಕಾರ 7ಲಕ್ಷ ದವರೆಗೆ ವಿಸ್ತರಿಸಿದೆ. ಕಷ್ಟಪಟ್ಟು ದುಡಿಯುವ ಮಧ್ಯಮ ವರ್ಗದವರಿಗೆ ಪ್ರತಿಫಲ ಸಿಗಲೆಂದು ಈ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿದೆ. ಈ ಮೂಲಕ 7 ಲಕ್ಷದವರೆಗೆ ವೈಯಕ್ತಿಕ ಆದಾಯ ಮಿತಿಯವರೆಗೆ ಯಾವುದೇ ತೆರಿಗೆಯನ್ನು ಕಟ್ಟುವಂತಿಲ್ಲ. 9 ಲಕ್ಷ ಆದಾಯದವರೆಗೆ ಶೇಕಡಾ 5ರಷ್ಟು ತೆರಿಗೆ ಮತ್ತು 15 ಲಕ್ಷ ಆದಾಯ ಹೊಂದಿರುವವರಿಗೆ ಶೇಕಡಾ 10ರಷ್ಟು ತೆರಿಗೆ ಹೇರಲಾಗುವುದು ಎಂದು ವಿತ್ತ ಸಚಿವೆ ಪ್ರಕಟಿಸಿದರು.

ಒಂದು ಸಲ ಹೊಸ ತೆರಿಗೆ ಪದ್ಧತಿಗೆ ಬದಲಾದರೆ ಮತ್ತೆ ಹಳೆಯ ಪದ್ದತಿಗೆ ಒಮ್ಮೆ ಮಾತ್ರ ಬರಲು ಸಾಧ್ಯವಾಗುತ್ತದೆ. ಹಳೆಯ ಮತ್ತು ಹೊಸ ಪದ್ಧತಿಯಲ್ಲಿ ತೆರಿಗೆ ಪಾವತಿಸುವ ಆಯ್ಕೆಗಳನ್ನು ನೀಡಲಾಗಿದೆ. ತೆರಿಗೆ ವಿನಾಯಿತಿ ಮಿತಿಯನ್ನು ಹಳೆ ತೆರಿಗೆ ಪದ್ದತಿಯಲ್ಲಿ ₹ 2.5 ಲಕ್ಷದಿಂದ ₹ 3 ಲಕ್ಷಕ್ಕೆ ಹಾಗೂ ಹೊಸ ತೆರಿಗೆ ಪದ್ದತಿಯಲ್ಲಿ ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಹಳೆ ತೆರಿಗೆ ಪದ್ದತಿಯ ವ್ಯಾಪ್ತಿಗೆ ಬರುವ ತೆರಿಗೆದಾರರಿಗೆ ಇದ್ದ ತೆರಿಗೆ ವಿನಾಯಿತಿ ಮಿತಿಯನ್ನು ₹ 2.5 ಲಕ್ಷದ ಬದಲು ₹ 3 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾವನ್ನು ಸಲ್ಲಿಸಲಾಗಿದೆ. ಅದೇರೀತಿ ಹೊಸ ತೆರಿಗೆ ಪದ್ದತಿ ವ್ಯಾಪ್ತಿಗೆ ಬರುವ ತೆರಿಗೆದಾರರಿಗೆ ತೆರಿಗೆ ವಿನಾಯಿತಿ ಮಿತಿಯನ್ನು ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ತೆರಿಗೆ ವಿವರಗಳನ್ನು ನೀಡಿದರು. ವಾರ್ಷಿಕ ₹ 9 ಲಕ್ಷ ವೇತನ ಪಡೆಯುವವರು ₹ 45,000 ತೆರಿಗೆ ಕಟ್ಟುತ್ತಾರೆ ಎಂದು ಸಚಿವರು ಹೇಳಿದರು.

ಹೊಸ ತೆರಿಗೆ ದರಗಳು ಈ ಕೆಳಗಿವೆ:

3 ಲಕ್ಷದವರಿಗೆ ಯಾವುದೇ ವೈಯಕ್ತಿಕ ತೆರಿಗೆ ಇಲ್ಲ
3 ರಿಂದ 6 ಲಕ್ಷದವರಿಗೆ ಶೇ.5 ರಷ್ಟು ತೆರಿಗೆ
6 ರಿಂದ 9 ಲಕ್ಷದವರಿಗೆ ಶೇ.10 ರಷ್ಟು ತೆರಿಗೆ
9 ರಿಂದ 12 ಲಕ್ಷದವರಿಗೆ ಶೇ.15 ರಷ್ಟು ತೆರಿಗೆ
12 ರಿಂದ 15 ಲಕ್ಷದವರಿಗೆ ಶೇ. 20 ರಷ್ಟು ತೆರಿಗೆ
15 ಲಕ್ಷದಿಂದ ಮೇಲ್ಪಟ್ಟ ಮೊತ್ತಕ್ಕೆ ಶೇ.30 ರಷ್ಟು ತೆರಿಗೆಯನ್ನು ಕಟ್ಟಬೇಕು.

ಹೊಸ ತೆರಿಗೆ ಪದ್ಧತಿಯಲ್ಲಿ ಅತಿ ಹೆಚ್ಚು ಸರ್ಚಾರ್ಜ್ ದರವನ್ನು 37% ರಿಂದ 25% ಕ್ಕೆ ಇಳಿಸಲು ಸರ್ಕಾರವು ಪ್ರಸ್ತಾಪಿಸಿದೆ ಎಂದರು.ಅಂಚೆ ಕಚೇರಿಗಳ ಮೂಲಕ ನಿರ್ವಹಿಸುವ ಮಾಸಿಕ ಆದಾಯ ಯೋಜನೆಯ ಹೂಡಿಕೆ ಮಿತಿಯನ್ನು 9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು 4.5 ಲಕ್ಷ ಹೂಡಿಕೆಗೆ ಮಾತ್ರ ಅವಕಾಶವಿತ್ತು. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕರ ಹೂಡಿಕೆಗೆ ಇದ್ದ 15 ಲಕ್ಷದ ಮಿತಿಯನ್ನು ಈ ಬಾರಿಯಿಂದ 30 ಲಕ್ಷಕ್ಕೆ ಕೇಂದ್ರ ಸರ್ಕಾರವು ವಿಸ್ತರಿಸಿದೆ. ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಪ್ರಕಟಿಸಿದೆ. 2 ವರ್ಷಗಳ ಅವಧಿಯ ಈ ಯೋಜನೆಗೆ ಶೇಕಡಾ 7.5 ಬಡ್ಡಿ ನಿಗದಿಪಡಿಸಲಾಗಿದೆ.

Related News

spot_img

Revenue Alerts

spot_img

News

spot_img