26.6 C
Bengaluru
Monday, November 18, 2024

ಟಾಟಾ ಎಲ್ಕ್ಸಿ, ಎಂಫಾಸಿಸ್, ಆದಿತ್ಯ ಬಿರ್ಲಾ ಕ್ಯಾಪಿಟಲ್: ಶುಕ್ರವಾರ ಟ್ರೆಂಡಿಂಗ್ ‌ನಲ್ಲಿರುವ ಷೇರುಗಳಿವು!

ಮುಂಬೈ ಜೂನ್ 06:ಶುಕ್ರವಾರದಂದು ಷೇರುಪೇಟೆ ಸೂಚ್ಯಂಕಗಳು ಸಾಧಾರಣ ಲಾಭದೊಂದಿಗೆ ವಹಿವಾಟು ಆರಂಭಿಸಿದವು. ಆಟೋ ಮತ್ತು ಲೋಹದ ಷೇರುಗಳ ಖರೀದಿಯಿಂದ ಷೇರು ಮಾರುಕಟ್ಟೆ ಸೂಚ್ಯಂಕಗಳು ಗಳಿಕೆ ದಾಖಲಿಸಿದವು. ಈ ವೇಳೆ ಟಾಟಾ ಎಲ್ಕ್ಸಿ, ಎಂಫಾಸಿಸ್ ಹಾಗೂ ಆದಿತ್ಯ ಬಿರ್ಲಾ ಕ್ಯಾಪಿಟಲ್ ಷೇರುಗಳು ಟ್ರೆಂಡಿಂಗ್‌ನಲ್ಲಿವೆ. ಹೂಡಿಕೆದಾರರು ಇಂದಿನ ಉಳಿದ ಅವಧಿಗಳಿಗೆ ಈ ಷೇರುಗಳನ್ನು ಗಮನಿಸುವುದು ಹೂಡಿಕೆ ದೃಷ್ಟಿಯಿಂದ ಉತ್ತಮ ನಿರ್ಧಾರವಾಗಿದೆ.

ಜೂನ್ 2, ಶುಕ್ರವಾರದಂದು ಬೆಂಚ್ಮಾರ್ಕ್ ಸೂಚ್ಯಂಕಗಳು ಸಾಧಾರಣ ಲಾಭದೊಂದಿಗೆ ವಹಿವಾಟು ಆರಂಭಿಸಿದವು. ಆಟೋ ಮತ್ತು ಲೋಹದ ಷೇರುಗಳ ಖರೀದಿಯಿಂದ ಈ ಗಳಿಕೆ ದಾಖಲಾಯಿತು. ಎನ್‌ಎಸ್‌ಇ ನಿಫ್ಟಿ 50ಯು ಬೆಳಿಗ್ಗೆ 10:50ಕ್ಕೆ 48 ಅಂಕ ಅಥವಾ ಶೇ. 0.26ರಷ್ಟು ಏರಿಕೆ ಕಂಡು 18,536.30 ಮಟ್ಟಕ್ಕೆ ತಲುಪಿದೆ. ಇದೇ ವೇಳೆ ಎಸ್‌&ಪಿ ಬಿಎಸ್‌ಇ ಸೆನ್ಸೆಕ್ಸ್ 151 ಅಂಕ ಅಥವಾ ಶೇ. 0.24ರಷ್ಟು ಏರಿಕೆ ಕಂಡು 62,580.77ರಲ್ಲಿ ವಹಿವಾಟು ಮುಂದುವರಿಸಿದೆ.

ಜೂನ್‌ 2ರಂದು ಶುಕ್ರವಾರ ಟ್ರೆಂಡಿಂಗ್ ‌ನಲ್ಲಿರುವ ಈ ಮೂರು ಷೇರುಗಳನ್ನು ಗಮನಿಸಿ:

ಟಾಟಾ ಎಲ್ಕ್ಸಿ: ತನ್ನ ಟೆಥರ್ ಕನೆಕ್ಟೆಡ್ ವೆಹಿಕಲ್ ಪ್ಲಾಟ್‌ಫಾರ್ಮ್‌ನೊಂದಿಗೆ ಕಲ್ಟೋಸ್ ‌ ಗ್ಲೋಬಲ್‌ ಬ್ಲಾಕ್‌ಚೈನ್ ‌ ಕಾರ್ಯವಿಧಾನವನ್ನು ಬೆಸೆಯುವ ಮೂಲಕ ಡ್ರೈವರ್‌ ರಿವಾರ್ಡ್ ‌ ಪ್ರೋಗ್ರಾಂ ರಚಿಸಲು ಕಂಪನಿಯು ಕಲ್ಟೋಸ್ ‌ ಗ್ಲೋಬಲ್‌ನೊಂದಿಗೆ ಕೈಜೋಡಿಸಿದೆ. ಕ್ಲೌಡ್-ಫಸ್ಟ್ ಟೆಥರ್-ಕನೆಕ್ಟೆಡ್ ವೆಹಿಕಲ್ ಪ್ಲಾಟ್‌ಫಾರ್ಮ್‌ನಿಂದ ದತ್ತಾಂಶಗಳನ್ನು ಬಳಸಿಕೊಂಡು ಚಾಲಕರ ನಡವಳಿಕೆಯನ್ನು ಟ್ರ್ಯಾಕ್ ಮಾಡುವ ಈ ನವೀನ ಕಲ್ಪನೆಯಿಂದ ಚಾಲಕರ ನಡವಳಿಕೆಯನ್ನು ಧನಾತ್ಮಕವಾಗಿ ಪ್ರಭಾವಿಸಬಹುದಾಗಿದೆ. ಅಡಾಸ್ ‌ (ADAS) ಮತ್ತು ಡ್ರೈವರ್ ಮಾನಿಟರಿಂಗ್ ವೈಶಿಷ್ಟ್ಯಗಳೊಂದಿಗೆ ಮತ್ತು ಹೆಚ್ಚಿನ ನಂಬಿಕೆಯಿಂದ ಇದನ್ನು ಪ್ರೋತ್ಸಾಹಿಸಲಾಗುತ್ತಿದ್ದು, ಹೆಚ್ಚಿನ ಗೌಪ್ಯತೆ ಹೊಂದಿರುವ ಬ್ಲಾಕ್‌ಚೈನ್ ಮಾದರಿಯನ್ನು ಬಳಸಲಾಗುತ್ತಿದೆ.

ಎಂಫಾಸಿಸ್: ಎಂಫಾಸಿಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಎಂಫಾಸಿಸ್ ಕನ್ಸಲ್ಟಿಂಗ್ ಇಂದು ಡಿಎಕ್ಸ್ ‌ಸಿ ಯುಕೆ ಇಂಟರ್ ‌ನ್ಯಾಶನಲ್ ಆಪರೇಷನ್ಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಇಬಿಇಸಿಎಸ್ ‌ನ ಶೇ. 100ರಷ್ಟು ಷೇರುಗಳನ್ನು ಖರೀದಿಸಲು ಕಾನೂನುಬದ್ಧ ಒಪ್ಪಂದಕ್ಕೆ ಸಹಿ ಹಾಕಿದೆ. ಇಬಿಇಸಿಎಸ್ (eBECS) ಒದಗಿಸುವ ಸೇವೆಗಳಲ್ಲಿ ಎಂಟರ್‌ಪ್ರೈಸ್ ಸಂಪನ್ಮೂಲ ಯೋಜನೆ (ಇಆರ್ ‌ಪಿ), ಗ್ರಾಹಕ ಸಂಬಂಧ ನಿರ್ವಹಣೆ (ಸಿಆರ್ಎಂ), ಮೊಬೈಲ್, ಫೀಲ್ಡ್‌ ಸರ್ವೀಸ್ ‌, ಡೇಟಾ ವಿಶ್ಲೇಷಣೆ, ವ್ಯವಹಾರ ಬುದ್ಧಿಮತ್ತೆ (ಬಿಐ), ಇಂಟರ್ನೆಟ್ ಆಫ್ ಥಿಂಗ್ಸ್ (IoT), ಕ್ಲೌಡ್ ಮತ್ತು ನಿರ್ವಹಿಸಿದ ಸೇವೆಗಳು ಸೇರಿವೆ.

ಆದಿತ್ಯ ಬಿರ್ಲಾ ಕ್ಯಾಪಿಟಲ್: ಪ್ರಾಶಸ್ತ್ಯದ ಷೇರುಗಳಲ್ಲಿ ಹೂಡಿಕೆ ಮಾಡಿದ್ದ ತನ್ನದೇ ಅಂಗಸಂಸ್ಥೆಯೊಂದರ ಪ್ರಕಟಣೆಯ ನಂತರ ಜೂನ್ 2 ರಂದು ಆದಿತ್ಯ ಬಿರ್ಲಾ ಕ್ಯಾಪಿಟಲ್ (ಎಬಿಸಿಎಲ್ ‌) ಷೇರುಗಳು ಸುಮಾರು ಶೇ. 2.6ರಷ್ಟು ಲಾಭ ಗಳಿಸಿವೆ. ಎಬಿಸಿಎಲ್ ‌ನ ಮೂಲ ವ್ಯವಹಾರಗಳಾದ ಗ್ರಾಸಿಮ್ ಇಂಡಸ್ಟ್ರೀಸ್ ಮತ್ತು ಹಿಡುವಳಿ ಸಂಸ್ಥೆ ಸೂರ್ಯ ಕಿರಣ್ ಇನ್ವೆಸ್ಟ್ ‌ಮೆಂಟ್‌ಗಳು ಕ್ರಮವಾಗಿ ರೂ 1,000 ಕೋಟಿ ಮತ್ತು ರೂ 250 ಕೋಟಿಗಳನ್ನು ಆದ್ಯತೆಯ ವಿತರಣೆಯಲ್ಲಿ ಹೂಡಿಕೆ ಮಾಡಲು ನಿರ್ಧರಿಸಿವೆ ಎಂದು ಕಂಪನಿಯು ಜೂನ್ 1 ರಂದು ಹೇಳಿಕೆಯಲ್ಲಿ ತಿಳಿಸಿತ್ತು. ಇದೀಗ ಜೂನ್‌ 2ರಂದು ಬೆಳಿಗ್ಗೆ 9.30ಕ್ಕೆ ಷೇರುಗಳು ಬಿಎಸ್ ‌ಇನಲ್ಲಿ 52 ವಾರಗಳ ಗರಿಷ್ಠ ಮಟ್ಟವಾದ 176.55 ರೂ.ಗೆ ತಲುಪಿದ್ದು ಶೇ. 2.59ರಷ್ಟು ಏರಿಕೆ ಕಂಡಿವೆ. 3,000 ಕೋಟಿ ರೂ.ಗಳ ಒಟ್ಟಾರೆ ಅನುಮತಿಸಲಾದ ನಿಧಿಸಂಗ್ರಹದಲ್ಲಿ ತನ್ನ ಮಂಡಳಿಯು 165.10 ರೂ. ಷೇರು ಬೆಲೆಯಲ್ಲಿ ತನ್ನ ಪ್ರವರ್ತಕ ಮತ್ತು ಪ್ರವರ್ತಕ ಗುಂಪು ಘಟಕಗಳಿಗೆ 1,250 ಕೋಟಿ ರೂ.ಗಳ ಆದ್ಯತೆಯ ಷೇರು ವಿತರಣೆಗೆ ಅನುಮೋದನೆ ನೀಡಿದೆ ಎಂದು ಹೇಳಿದೆ.

Related News

spot_img

Revenue Alerts

spot_img

News

spot_img