# Tamil Nadu # Puducherry oppose # Mekedatu project-# Karnataka #Cwc, Cauery # , ಹೊಸದಿಲ್ಲಿ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಯಾಕೋ ಕಾಲ ಕೂಡಿ ಬರುವ ರೀತಿ ತೋರುತ್ತಿಲ್ಲ. ಚುನಾವಣೆಗೂ ಮುನ್ನ ಪಕ್ಷ ಇದರ ಬಗ್ಗೆ ದೊಡ್ಡ ಹೋರಾಟ ಹಾಗೂ ಪಾದಯಾತ್ರೆ ಮಾಡಿ ಕೇಂದ್ರ ಸರ್ಕಾರದ ಗಮನ ಸೆಳೆದಿತ್ತು. ಅಲ್ಲದೇ ಪಕ್ಷ ಅಧಿಕಾರಕ್ಕೆ ಬಂದರೆ ಯೋಜನೆಯನ್ನ ಜಾರಿಗೊಳಿಸೋದಾಗಿ ಶಪಥ ಮಾಡಿತ್ತು. ಆದರೆ ಇದೀಗ ಇದೇ ಯೋಜನೆಗೆ ಮತ್ತೊಮ್ಮೆ ಹಿನ್ನೆಡೆ ಆಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಯೋಜನೆಯ ಪ್ರಸ್ತಾಪವನ್ನು ಕಾವೇರಿ ಜಲ ಆಯೋಗಗಕ್ಕೆ ಹಿಂತಿರುಗಿಸೋ ಅಭಿಪ್ರಾಯವನ್ನು ಕಾವೇರಿ ನೀರು ನಿರ್ಹವಣಾ ಪ್ರಾಧಿಕಾರದ ಬಹುತೇಕ ಸದಸ್ಯರು ವ್ಯಕ್ತ ಪಡಿಸಿದ್ದಾರೆ. ಇದರಿಂದ ಮೇಕೆದಾಟು ಯೋಜನೆ ಮೇಲೆ ಮತ್ತೊಮ್ಮೆ ಕರಿನೆರಳು ಬಿದ್ದಂತಾಗಿದೆ. ಇದರ ಕುರಿತು ಗುರುವಾರ ಪ್ರಾಧಿಕಾರದ ಸಭೆ ನವದೆಹಲಿಯಲ್ಲಿ ನಡೆಯಿತು. ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ ಪರ ವಕೀಲರು ತಮ್ಮ ರಾಜ್ಯ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಸಲ್ಲಿಕೆಗಳನ್ನ ಪುರಸ್ಕರಿಸರಿಬೇಕು. ಹಾಗೇ ಸಂಕಷ್ಟದ ವರ್ಷಗಳಲ್ಲಿ ಶಾಶ್ವತವಾಗಿ ಸಮಸ್ಯೆ ಪರಿಹರಿಸಲು ಯೋಜನೆಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು. ಈಗಾಗಲೇ ಯೋಜನೆ ಜಾರಿ ವಿಳಂಬವಾಗಿದೆ ಇದರಿಂದ ಕಾರ್ಯಸೂಚಿ ಮುಂದೂಡದೇ ಯೋಜನೆ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸುವಂತೆ ಕೋರಿತು. ಆದರೆ ಯೋಜನೆ ಜಾರಿ ಬಗ್ಗೆ ಚರ್ಚೆಗೆ ತಮಿಳುನಾಡು, ಪುದುಚೇರಿ ರಾಜ್ಯದಿಂದ ಆಕ್ಷೇಪ, ಅಸಮಾಧಾನ ವ್ಯಕ್ತವಾಯ್ತು.
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ನಿರ್ಮಾಣದ ಬಗ್ಗೆ ನ್ಯಾಯಾಧಿಕರಣದ ತೀರ್ಪಿನಲ್ಲಿ ಯಾವುದೇ ನಿರ್ಬಂಧ ಇಲ್ಲ. ಮತ್ತೊಂದು ಕಡೆ ಸುಪ್ರೀಂ ಕೋರ್ಟ್ ತೀರ್ಪಿನಲ್ಲೂ ಯಾವುದೇ ನಿರ್ಬಂಧ ಇಲ್ಲ, ಇನ್ನು ಡಿಪಿಆರ್ ಕುರಿತಂತೆ ಸೂಕ್ತ ನಿಲುವು ತೆಗೆದುಕೊಳ್ಳಬೇಕು. ಅದೇ ರೀತಿ ಯೋಜನೆಯ ವರದಿ ಯಾವುದೇ ನಿಬಂಧನೆಗಳನ್ನು ಉಲ್ಲಂಘನೆ ಮಾಡಲ್ಲ ಅನ್ನುವುದನ್ನ ಕೇಂದ್ರ ಜಲ ಆಯೋಗಕ್ಕೆ ರಾಜ್ಯದ ಅಭಿಪ್ರಾಯಗಳನ್ನು ಕಳುಹಿಸಿಕೊಡುವಂತೆಯೂ ರಾಜ್ಯ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿತು.ಇದಾದ ಬಳಿಕ ಯೋಜನೆಯ ವಿಚಾರ ಸುಪ್ರೀಂ ಕೋರ್ಟಿನಲ್ಲಿ ಇನ್ನೂ ಬಾಕಿ ಉಳಿದಿದೆ. ಇದರಿಂದ ಪ್ರಾಧಿಕಾರದಲ್ಲಿ ಯೋಜನೆಯ ಚರ್ಚೆಗೆ ಸುಪ್ರೀಂ ಕೋರ್ಟ್ನಲ್ಲಿ ನಿರ್ಬಂಧವಿಲ್ಲ ಎಂದು ಪ್ರಾಧಿಕಾರದ ಅಧ್ಯಕ್ಷರು ಮತ್ತು ಜಲಶಕ್ತಿ ಸಚಿವಾಲಯದ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಇದರಿಂದ ರಾಜ್ಯಕ್ಕೆ ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಮತ್ತೊಮ್ಮೆ ಹಿನ್ನೆಡೆಯಾದಂತಾಗಿದೆ.