20.2 C
Bengaluru
Thursday, December 19, 2024

ಸಿಎಂ ಜೊತೆಗಿನ ಮಾತುಕತೆ ವ್ಯರ್ಥ: ಸರ್ಕಾರಿ ನೌಕರರ ಹೋರಾಟದಲ್ಲಿ ಮುಂದುವರೆದ ದ್ವಂದ್ವತೆ:

ಬೆಂಗಳೂರು: 7ನೇ ವೇತನ ಆಯೋಗದ ಜಾರಿ ಮಾಡುವಂತೆ ಮಾರ್ಚ್ 01 ರಿಂದ ಅನಿರ್ಧಿಷ್ಟವಧಿಗಳ ಕಾಲ ಗೈರಾಜರಾಗುವ ಮೂಲಕ ಹೋರಟಕ್ಕೆ ಸಿದ್ದವಾಗಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ಕೆ.ಎಸ್.ಜಿ.ಇ.ಎ) ದ ಮನ ಪರಿವರ್ತಿಸಲು ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ ಮಾತುಕತೆ ವಿಫಲವಾದ ಕಾರಣ ರಾಜ್ಯ ಸರ್ಕಾರಿ ನೌಕರರು ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಉದ್ದೇಶಿಸಿರುವುದರ ಬಗ್ಗೆ ದ್ವಂದ್ವತೆ ಮಂಗಳವಾರ ತಡರಾತ್ರಿವರೆಗೂ ಮುಂದುವರಿದಿದೆ .

ನನ್ನೆ ನಡೆದ ಸುಧಿರ್ಘ ಮಾತುಕತೆಯಲ್ಲಿ ಸರ್ಕಾರ ವೇತನ ಹೆಚ್ಚಳಕ್ಕೆ ಒಲವು ತೋರಿದೆ ಎಂದು ಸಿಎಂ ಸಂಘದ ಮನ ಒಲಿಸಲು ಪ್ರಯತ್ನಿಸಿದ್ದಾರೆ. ಆದರೆ ಇದರ ಬಗ್ಗೆ ಎಲ್ಲಾ ಅಂಗಸಂಸ್ಥೆಗಳೊಂದಿಗೆ ಸಮಾಲೋಚಿಸಿದ ನಂತರವೇ ಮುಷ್ಕರದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು KSGEA ಹೇಳಿದೆ. ಸಿಎಂ ಮತ್ತು KSGEA ಪ್ರತಿನಿಧಿಗಳು ಮಂಗಳವಾರ ತಡರಾತ್ರಿವರೆಗೆ ಎರಡು ಸುತ್ತಿನ ಸಭೆಗಳನ್ನು ನಡೆಸಿದ್ದು ಈ ಮಾತುಕತೆಯಲ್ಲಿ “ಸರ್ಕಾರವು ನಿಮ್ಮ ವಿರುದ್ಧವಾಗಿಲ್ಲ ಮತ್ತು ಸಕಾರಾತ್ಮಕ ಮನಸ್ಥಿತಿಯಲ್ಲಿದೆ, ಆದರೆ ನಿಮ್ಮ ಬೇಡಿಕೆಗಳನ್ನು ಜಾರಿಗೆ ತರಲು ನಮಗೆ ಸಮಯ ಬೇಕು. ಆದ್ದರಿಂದ ದಯವಿಟ್ಟು ಸಹಕರಿಸಿ” ಎಂದು ಸಿಎಂ ಪ್ರತಿನಿಧಿಗಳಿಗೆ ಸೂಚಿಸಿದ್ದಾರೆ.

ವೇತನ ಹೆಚ್ಚಳದ ನೌಕರರ ಬೇಡಿಕೆಯನ್ನು ಶೀಘ್ರವೇ ಈಡೇರಿಸಲು ಸಿಎಂ ಒಪ್ಪಿಗೆ ಸೂಚಿಸಿದ್ದು ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ತರುವ ಬೇಡಿಕೆಗೆ ಬದ್ಧರಾಗಿಲ್ಲ ಎಂದು ವರದಿಗಳು ತಿಳಿಸಿವೆ. ರಾಷ್ಟ್ರ ಮಟ್ಟದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಲ್ಲಿ ಬಿಜೆಪಿ ಹಿಂದಿದೆ. KSGEA ಮುಖ್ಯಸ್ಥ ಕೆ . ಷಡಕ್ಷರಿ ಅವರು, ಸಿಎಂ ಭೇಟಿಯ ವೇಳೆ ಏನಾಯಿತು ಎಂಬುದಕ್ಕೆ ಪ್ರತಿಕ್ರಿಯಿಸಿ ಸಂಘದ ಇತರ ಪದಾಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಮುಷ್ಕರ ನಡೆಸಬೇಕೇ ಅಥವಾ ಹಿಂಪಡೆಯಬೇಕೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

Related News

spot_img

Revenue Alerts

spot_img

News

spot_img