28.2 C
Bengaluru
Wednesday, July 3, 2024

ಸ್ವಂತ ಬಿಸಿನೆಸ್‌ ಮಾಡಲು ಈ ಬ್ಯಾಂಕ್‌ ನಲ್ಲಿ ಸಾಲ ಪಡೆಯಬಹುದು

ಬೆಂಗಳೂರು, ಆ. 03 : ನಿರುದ್ಯೋಗಿಗಳು ಕೂಡ ಕೆಲಸವನ್ನು ಸೃಷ್ಟಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕೆ ಕುಗ್ಗುವುದರ ಬದಲು, ಸ್ವಲ್ಪ ತಲೆಗೆ ಕೆಲಸ ಕೊಟ್ಟರೆ, ಒಳ್ಳೆಯ ಉದ್ಯಮಿ ಕೂಡ ಆಗಬಹುದು. ನೀವು ನಾಲ್ಕಾರು ಜನರಿಗೆ ಕೆಲಸವನ್ನೂ ಕೊಡಬಹುದು. ಅದಕ್ಕಾಗಿ ಸರ್ಕಾರ ಉತ್ತೇಜನವನ್ನೂ ನೀಡುತ್ತದೆ. ಆದರೆ, ಸ್ವಂತ ಉದ್ಯಮ ಶುರು ಮಾಡುವುದು ಸುಲಭವೂ ಅಲ್ಲ. ಅದಕ್ಕೆಂದು ಒಂದಷ್ಟು ಪರಿಶ್ರಮ ಬೇಕಾಗುತ್ತದೆ.

ಜೊತೆಗೆ ಹಣವೂ ಬೇಕಾಗುತ್ತದೆ. ಹಣಕ್ಕಾಗಿ ಈಗ ಪರದಾಡುವ ಅಗತ್ಯವಿಲ್ಲ. ಕೆಲ ಬ್ಯಾಂಕ್ ಗಳಲ್ಲಿ ಸ್ವಂತ ಉದ್ಯಮ ಶುರು ಮಾಡಲು ಸಾಲವನ್ನು ಕೊಡಲಾಗುತ್ತದೆ. ಸ್ವಂತ ಬಿಸಿನೆಸ್ ಅನ್ನು ಪುಟ್ಟದಾಗಿ ಶುರು ಮಾಡಬಾಹುದು. ಬ್ಯಾಂಕ್ ಗಳಲ್ಲಿ ಅಂಗಡಿಗಳನ್ನು ತೆರೆಯಲು ಸಾಲ ನೀಡಲಾಗುತ್ತದೆ. ಕಿರಾಣಿ, ಬಟ್ಟೆ, ಮೆಡಿಕಲ್ ಸ್ಟೋರ್, ಕಾಫಿ ಶಾಪ್, ಹೋಟೆಲ್, ಬ್ಯಾಂಗಲ್ ಸ್ಟೋರ್, ಬೋಟಿಕ್ಸ್ ಸೇರಿದಂತೆ ಸಾಕಷ್ಟು ರೀತಿಯಲ್ಲಿ ಉದ್ಯೋಗ ಮಾಡಬಹುದು.

ಇವಕ್ಕೆಲ್ಲಾ ಬಹಳ ಮುಖ್ಯವಾದದ್ದು ಹಣ. ಬ್ಯಾಂಕ್ ಗಳು ನೀವು ಯಾವ ಅಂಗಡಿಯನ್ನು ತೆರೆಯುತ್ತಿದ್ದೀರಿ ಎಂಬುದರ ಮೇಲೆ ನಿಮಗೆ ಸಾಲವನ್ನು ನೀಡಲು ನಿರ್ಧರಿಸುತ್ತದೆ. ಒಂದೊಂದು ಬ್ಯಾಮಕ್ ಗಳಲ್ಲಿ ಬಡ್ಡಿದರ ಬೇರೆ ಬೇರೆ ಇರುತ್ತದೆ. ಸಾಲ ಪಡೆಯುವಾಗ ನಿಮಗೆ ಬಡ್ಡಿದರ ಎಲ್ಲಿ ಕಡಿಮೆ ಇರುತ್ತದೋ ಅಲ್ಲಿ ಸಾಲ ಪಡೆಯುವುದು ಉತ್ತಮ. ಕೇಂದ್ರ ಸರ್ಕಾರವು ನಿರುದ್ಯೋಗಿಗಳನ್ನಿ ಸ್ವಾವಲಂಬಿ ಮಾಡುವುದಕ್ಕಾಗಿಯೇ ಕೆಲ ಬ್ಯಾಂಕ್ ಗಳ ಸಹಯೋಗದೊಂದಿಗೆ ಸಾಲ ನೀಡುವ ಯೋಜನೆಯನ್ನು ರೂಪಿಸಿದೆ.

ಯಾವುದೇ ಅಂಗಡಿಯನ್ನು ಪ್ರಾರಂಬಿಸುವುದಕ್ಕಾಗಿ ಕನಿಷ್ಠ 50000 ದಿಂದ 500000 ಲಕ್ಷದವರೆಗೆ ಬ್ಯಾಂಕ್ ಗಳಲ್ಲಿ ಸಾಲ ದೊರೆಯುತ್ತದೆ. ಇನ್ನು ಹೊಸದಾಗಿ ಅಂಗಡಿ ತೆರೆಯುವವರಿಗಷ್ಟೇ ಅಲ್ಲದೇ, ಈಗಾಗಲೇ ಅಂಗಡಿ ತೆರೆದಿರುವವರಿಗೂ ಬ್ಯಾಂಕ್ ಗಳಲ್ಲಿ ಸಾಲ ಸಿಗುತ್ತದೆ. ವ್ಯಾಪಾರವನ್ನು ವಿಸ್ತರಣೆ ಮಾಡಲು ಸಾಲವನ್ನು ಪಡೆಯಬಹುದಾಗಿದೆ. ಹಾಗದಾದರೆ ಬನ್ನಿ, ನಾವೀಗ ಯಾವ ಬ್ಯಾಂಕ್ ನಲ್ಲಿ ಎಷ್ಟು ಸಾಲ ಸಿಗುತ್ತದೆ ಎಂದು ತಿಳಿಯೋಣ.

ಐಡಿಬಿಐ ಬ್ಯಾಂಕ್ ಸ್ವಂತ ವ್ಯಾಪಾರ ಶುರು ಮಾಡಲು ಸಾಲವನ್ನು ನೀಡುತ್ತದೆ. 50000 ದಿಂದ 5 ಕೋಟಿ ರೂಪಾಯಿ ವರೆಗೂ ಸಾಲವನ್ನು ನೀಡುತ್ತದೆ. ಆದರೆ, 7 ವರ್ಷದೊಳಗೆ ಸಾಲವನ್ನು ಮರುಪಾವತಿ ಮಾಡಬೇಕು. ಕೆಲ ಪ್ರೊಸೆಸ್ಸಿಂಗ್ ಶುಲ್ಕವನ್ನು ಕೂಡ ನೀವು ಕಟ್ಟಬೇಕಾಗುತ್ತದೆ. ಎಸ್ʼಬಿಐ ಬ್ಯಾಂಕ್ ಹೊಸ ವ್ಯಾಪಾರ ಶುರು ಮಾಡಲು, ಹಳೆಯ ವ್ಯಾಪಾರವನ್ನು ವಿಸ್ತರಿಸಲು ಕೂಡ ಸಾಲವನ್ನು ನೀಡುತ್ತದೆ. 50,0000 ದಿಂದ 10 ಲಕ್ಷದವರೆಗೂ ಎಸ್ʼಬಿಐ ಸಣ್ಣ ವ್ಯಾಪಾರಕ್ಕೆ ಸಾಲವನ್ನು ನೀಡುತ್ತದೆ.

ದೊಡ್ಡ ಉದ್ಯಮ ಶುರು ಮಾಡಬೇಕೆಂದವರಿಗೆ 20 ಕೋಟಿ ರೂಪಾಯಿ ವರೆಗೂ ಎಸ್ʼಬಿಐ ಸಾಲವನ್ನು ಒದಗಿಸುತ್ತದೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಬ್ಯಾಂಕ್ ಕೂಡ ಒಂದು ಕೋಟಿವರೆಗೂ ಸಾಲವನ್ನು ವ್ಯಾಪಾರ ಶುರು ಮಾಡಲು ನೀಡುತ್ತದೆ. ಈ ಬ್ಯಾಂಕ್ ನಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲೂ ಸಾಲವನ್ನು ನೀಡಲಾಗುತ್ತದೆ. 10ಲಕ್ಷದವರೆಗೂ ಈ ಯೋಜನೆಯಡಿಯಲ್ಲಿ ಸಾಲವನ್ನು ನೀಡಲಾಗುತ್ತದೆ.

Related News

spot_img

Revenue Alerts

spot_img

News

spot_img