ಬಿಗ್ ಬಾಸ್’ ಕನ್ನಡ ಸೀಸನ್ 10 ಶುರುವಾಗಿ ಈಗಲೇ 75 ದಿನಗಳು ಕಳೆದು ಹೋಗಿದೆ. ತಮ್ಮ ತಮ್ಮ ಮನೆಯವರನ್ನ ಕುಟುಂಬದವರನ್ನು ಸ್ಪರ್ಧಿಗಳು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಪರಿಗಣಿಸಿ ‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಸ್ವೀಟ್ ಶಾಕ್ ನೀಡಿದ್ದಾರೆ. ಹೌದು, ಬಿಗ್ ಬಾಸ್ ಮನೆಯೊಳಗೆ ಕೆಲ ಸ್ಪರ್ಧಿಗಳ ಕುಟುಂಬದವರು ಕಳುಹಿಸಿದೆ. ಆರಂಭದಲ್ಲಿ ನಮ್ರತಾ ಗೌಡ ಅವರ ತಾಯಿ ಮತ್ತು ವರ್ತೂರು ಸಂತೋಷ್ ಅವರ ತಾಯಿ ಬಿಗ್ ಬಾಸ್ ಮನೆಯೊಳಗೆ ಆಗಮಿಸಿದ್ದರು.
ನನ್ನ ಹೆಂಡ್ತಿಯನ್ನ ದಯವಿಟ್ಟು ಒಳಗೆ ಬಿಡಬೇಡಿ ಎಂದ ತುಕಾಲಿ..!
ಈ ವೇಳೆ ತುಕಾಲಿ ಸಂತೋಷ್ ‘ನನ್ನ ಹೆಂಡತಿಯನ್ನು ಮಾತ್ರ ಒಳಗೆ ಕಳುಹಿಸಬೇಡಿ ಅಂತ ಬಿಗ್ ಬಾಸ್‌ಗೆ ತಿಳಿಸಿ..’ ಎಂದು ಮನೆಗೆ ಬಂದವರ ಬಳಿ ಕೇಳಿಕೊಂಡಿದ್ದಾರೆ. ಆದರೆ ಬಿಗ್ ಬಾಸ್ ಇದನ್ನ ಪರಿಗಣಿಸಿ ತುಕಾಲಿ ಸಂತು ಅವರ ಪತ್ನಿಯನ್ನ ಮನೆಯೊಳಗೆ ಪ್ರವೇಶ ಕಲ್ಪಿಸಿದೆ. ಹೌದು, ತುಕಾಲಿ ಸಂತು ಅವರ ಪತ್ನಿ ಮಾನಸ ಬಿಗ್ ಬಾಸ್ ಮನೆಯೊಳಗೆ ಬಂದಿದ್ದಾರೆ. ಬರುತ್ತಿದ್ದಂತೆಯೇ, ಪತಿ ತುಕಾಲಿ ಸಂತು ಅವರಿಗೆ ಭರ್ಜರಿ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ, ಕೋಲಿನಿಂದ ಮನೆಯೆಲ್ಲಾ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಈ ವೇಳೆ ದಂಪತಿ ಒಬ್ಬರನ್ನೊಬ್ಬರು ಕಾಲೆಳೆದುಕೊಂಡ ರೀತಿ ತುಂಬಾ ಮಜಾವಾಗಿದೆ. ಜಿಯೋ ಸಿನಿಮಾ ರಿಲೀಸ್ ಮಾಡಿರುವ ಪ್ರೋಮೋದಲ್ಲಿ ಇದರ ಬಗ್ಗೆ ತೋರಿಸಲಾಗಿದೆ.