#Supremecourt #important# final #verdict # December 11
ನವದೆಹಲಿ;ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ವಿಧಿ 370 ಅನ್ನು ಕೇಂದ್ರ ಸರ್ಕಾರ 2019ರ ಆ. 5 ರಂದು ರದ್ದು ಮಾಡಿತ್ತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟ್(Supremecourt) ಮೆಟ್ಟಿಲೇರಿದ್ದರು.ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು 16 ದಿನಗಳ ಕಾಲ ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಸೆಪ್ಟೆಂಬರ್ 5 ರಂದು ತೀರ್ಪನ್ನು ಕಾಯ್ದಿರಿಸಿತು. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಾಲಯ, ತೀರ್ಪನ್ನು ಕಾಯ್ದಿರಿಸಿದೆ. ಈ ಮಹತ್ವದ ತೀರ್ಪನ್ನು ಡಿ.11 ರಂದು ನೀಡಲು ತೀರ್ಮಾನಿಸಿದೆ. ಹಾಗಾಗಿ ಇಡೀ ದೇಶವೇ ಸುಪ್ರೀಂ ತೀರ್ಪಿನತ್ತ ಗಮನ ಹರಿಸಿದ್ದು, ಏನಾಗಲಿದೆಯೋ ಕಾದು ನೋಡಬೇಕಿದೆ.370 ನೇ ವಿಧಿ, 35 ಎ ವಿಧಿಯೊಂದಿಗೆ, ಭಾರತದ ಸಂವಿಧಾನದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತು, ಇದು ಪ್ರತ್ಯೇಕ ಸಂವಿಧಾನ ಮತ್ತು ಪ್ರತ್ಯೇಕ ದಂಡ ಸಂಹಿತೆಯನ್ನು ಅನುಮತಿಸುತ್ತದೆ. ಅರ್ಜಿದಾರರಲ್ಲಿ ನ್ಯಾಷನಲ್ ಕಾನ್ಸರೆನ್ಸ್(National confrence) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ನಾಯಕರು ಸೇರಿದ್ದಾರೆ.2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತು. ಈ ನಿರ್ಧಾರದೊಂದಿಗೆ, ಜಮ್ಮು ಮತ್ತು ಕಾಶ್ಮೀರದ ಆಡಳಿತವು ನೇರವಾಗಿ ಕೇಂದ್ರದ ಕೈಗೆ ಬಂದಿತು.ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಸಂವಿಧಾನ ಪೀಠವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಕೇಂದ್ರ ಸರ್ಕಾರದ 2019 ರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ತೀರ್ಪು ನೀಡಲಿದೆ.