#Supreme Court #stay # teacher recruitment #process
ಬೆಂಗಳೂರು;13 ಸಾವಿರಕ್ಕೂಹೆಚ್ಚು ಶಿಕ್ಷಕರ ನೇಮಕಾತಿ(recruitment) ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ(Injunction) ನೀಡಿದೆ. ನೇಮಕಗೊಂಡ ಶೇ.80ರಷ್ಟು ಮಂದಿ ಈಗಾಗಲೇ ನೇಮಕ ಪತ್ರ ನೀಡಲಾಗಿದೆ. ಉಳಿದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ(Appointment letter) ನೀಡದಂತೆ ಸುಪ್ರೀಂಕೋರ್ಟ್ ತಿಳಿಸಿದೆ. ವಿವಾಹಿತ ಮಹಿಳೆಯರು ತಂದೆಯ ಆದಾಯ ಪ್ರಮಾಣಪತ್ರ ನೀಡಿ ನೇಮಕವಾಗಿರುವುದನ್ನು ಕರ್ನಾಟಕ ಹೈಕೋರ್ಟ್ ಸಮ್ಮತಿಸಿದೆ. ಇದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಸುಪ್ರೀಂಕೋರ್ಟ್(Supremecourt) ಮೊರೆ ಹೊಕ್ಕಿದ್ದಾರೆ. ನಿರ್ದೇಶನದ ಅನ್ವಯ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಈಗಾಗಲೇ ಆಯ್ಕೆಪಟ್ಟಿಯಲ್ಲಿ ಹೆಸರಿದ್ದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿದ್ದು, ಅವರು ಕೆಲಸಕ್ಕೆ ಹಾಜರಾಗಿದ್ದಾರೆ. ಇನ್ನು ಶೇಕಡ 20ರಷ್ಟು ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆ ನೇಮಕಾತಿ ಪತ್ರ ವಿತರಿಸಬೇಕಿದೆ. ಇನ್ನು ಉಳಿದ ಶೇ.20 ರಷ್ಟು ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆ ನೇಮಕಾತಿ ಪತ್ರ ವಿತರಿಸಬೇಕಿದ್ದು, ಆದರೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಆ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸದಂತೆ ಡಿಡಿಪಿಐಗಳಿಗೆ(DDPI) ಮೌಖಿಕ ಆದೇಶ(Verbal order) ನೀಡಲಾಗಿದೆ ಎಂದು ವರದಿಯಾಗಿದೆ.