ಬೆಂಗಳೂರು, ಜೂ. 29 : ನಂಜನಗೂಡಿನಲ್ಲಿರುವ ಬಾಲ ಮಂದಿರ ಅವ್ಯವಸ್ಥೆಯ ಆಗರವಾಗಿದೆ. ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಇರುವ ಎರಡೂ ಬಾಲ ಮಂದಿರಕ್ಕೆ ತೆರಳಿ ಉಪಲೋಕಾಯುಕ್ತ ಕೆ ಎನ್ ಫಣೀಂದ್ರ ಹಾಗೂ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಲಮಂದಿರದ ಬಂಡವಾಳ ಬಯಲಾಗಿದೆ. ಈ ಸಂಬಂಧ ನಿನ್ನೆ ಅಧಿಕಾರಿಗಳು ಸುಮೋಟೋ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ಬಾಲ ಮಂದಿರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಬಾಲಮಂದಿರದಲ್ಲಿ ಮಕ್ಕಳಿಗೆ ಮೂಲಭೂತ ಸೌಲಭ್ಯಗಳಿಲ್ಲ. ಬಾಲಮಂದಿರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದ್ದು, ಸೂಪರಿಡೆಂಟೆಂಟ್ ಮನಸ್ಸೋ ಇಚ್ಚೆಯಂತೆ ಬರುತ್ತಾರೆ ಹೋಗುತ್ತಾರೆ. ಇನ್ನು ಅಡುಗೆಯವರು ಉತ್ತಮ ಗುಣಮಟ್ಟದ ಆಹಾರ ಸಿದ್ದಪಡಿಸುತ್ತಿಲ್ಲ. ಆಹಾರ ತಯಾರಿಸುವ ಅಕ್ಕಿ, ಬೇಳೆ ಹಾಗೂ ತರಕಾರಿಗಳಲ್ಲಿ ಹುಳಗಳು ಇರುತ್ತವೆ. ಅವನ್ನು ಶುದ್ಧಗೊಳಿಸಿದೆ ಅಡುಗೆ ಮಾಡಲಾಗುತ್ತದೆ. ಅಡುಗೆ ಕೂಡ ರುಚಿಯಾಗಿರುವುದಿಲ್ಲ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಮಕ್ಕಳಿಗೆ ಸರಿಯಾಗಿ ಯೂನಿಫಾರ್ಮ್ ಕೂಡ ಕೊಡುವುದಿಲ್ಲ. ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮಾಡಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ಮಲಗಲು ಹಾಸಿಗೆ ಕೊಡುವುದಿಲ್ಲ. ಮಕ್ಕಳಿಗೆ ಆಟವಾಡಲು ಆಟಿಕೆಗಳನ್ನು ಕೊಡುವುದಿಲ್ಲ. ಹುಡುಗರಿಗೆ ಕ್ರಿಕೆಟ್ ಆಡಲು ಬಾಲ್, ಬ್ಯಾಟ್ ಸಹ ಸರಿಯಾಗಿಲ್ಲ. ಮಕ್ಕಳ ಬಳಿ ವಾರ್ಡನ್ ಗಳು ಲಾಕರ್ ಕೀ ಪಡೆದು, ಪೇಸ್ಟ್, ಸೋಪ್ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕದಿಯುತ್ತಾರೆ. ಇಲ್ಲಿ ಮಕ್ಕಳ ಪರೀಸ್ಥಿತಿ ಹೀನಾಯವಾಗಿದೆ. ಈ ಎಲ್ಲಾ ವಿಚಾರಗಳು ಅಧಿಕಾರಿಗಳು ಮಕ್ಕಳನ್ನು ಕೇಳಿ ಮಾಹಿತಿ ಪಡೆದಿದ್ದಾರೆ.
ನಾನಾ ಸಮಸ್ಯೆಗಳಿಂದ ತುಳಿತಕ್ಕೆ ಒಳಗಾದ ಮಕ್ಕಳು ಇಲ್ಲಿ ವಾಸ ಮಾಡುತ್ತಾರೆ. ಬಾಲಮಂದಿರಕ್ಕೆ ತೆರಳಿ, ಕಳಪೆ ಗುಣಮಟ್ಟದ ಆಹಾರವನ್ನು ಅಧಿಕಾರಿಗಳ ಎದುರು ಪ್ರದರ್ಶಿಸಿದ್ದರು. ಕೂಡಲೇ ಬಾಲಮಂದಿರಕ್ಕೆ ನಾನಾ ಸೌಲಭ್ಯ ಕಲ್ಪಿಸಬೇಕಿದೆ. ಹಾಗಾಗಿ ಮಕ್ಕಳ ಅಹವಾಲು ಆಲಿಸಿ, ಬಾಲಮಂದಿರದ ಸಿಬ್ಬಂದಿಗಳ ಕರ್ತವ್ಯ ಲೋಪವಾಗಿರುವುದರ ಬಗ್ಗೆ ತನಿಖೆಯನ್ನು ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಸುಮೋಟೋ ದಾಖಲಿಸಲಾಗಿದೆ.