26.7 C
Bengaluru
Sunday, December 22, 2024

ನಿಮ್ಮ ಹೆಣ್ಮಗುವಿನ ಭವಿಷ್ಯಕ್ಕೆ ಸುಕನ್ಯಾ ಸಮೃದ್ಧಿ ಯೋಜನೆ ಬೆಸ್ಟ್

ಬೆಂಗಳೂರು;ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojan) ಇದು ಭಾರತದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ಹೆಣ್ಣು ಮಗುವಿಗಾಗಿ ಇರುವ ಸಣ್ಣ ಉಳಿತಾಯ ಠೇವಣಿ (Savings Deposit)ಯೋಜನೆಯಾಗಿದೆ. ಇದನ್ನು 2015ರ ಜನವರಿ 22ರಂದು ಆರಂಭಿಸಲಾಯಿತು. ಈ ಯೋಜನೆಯಡಿ ಹೂಡಿಕೆ ಮಾಡುವ ಹಣಕ್ಕೆ ತೆರಿಗೆ ವಿನಾಯಿತಿ ಇರುವ ಕಾರಣದಿಂದ ಇದು ಹೆಚ್ಚು ಜನಪ್ರಿಯವಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಗರಿಷ್ಠ1.5 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು.ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಅತ್ಯಂತ ಸುಲಭದ ಕೆಲಸ. ಇದು ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ ಉಳಿತಾಯ ಯೋಜನೆ ಕೂಡ. 10 ವರ್ಷ ವಯಸ್ಸಿನವರೆಗಿನ ಹೆಣ್ಮಗುವಿನ ಹೆಸರಿನಲ್ಲಿ ಈ ಯೋಜನೆ ತೆರೆಯಬಹುದು. ಈ ಸೀಮ್ 21 ವರ್ಷಕ್ಕೆ ಮೆಚೂರ್ ಆಗುತ್ತದೆ. 15 ವರ್ಷಗಳ ಕಾಲ ಹೂಡಿಕೆ ಮಾಡಬಹುದು. ಈ ಖಾತೆಯಲ್ಲಿ ಠೇವಣಿ ಮಾಡಿದ ಹಣಕ್ಕೆ ಶೇ.7.6 ರಷ್ಟು ಬಡ್ಡಿ(Intrest) ಸಿಗಲಿದೆ. ಹುಡುಗಿಗೆ 18 ವರ್ಷ ತುಂಬಿದಾಗ ಭಾಗಶಃ ಹಿಂತೆಗೆದುಕೊಳ್ಳಬಹುದು. ಸಂಪೂರ್ಣ ಹಣವನ್ನು 21ನೇ ವಯಸ್ಸಿನಲ್ಲಿ ತೆಗೆದುಕೊಳ್ಳಬಹುದು. ಈ ಯೋಜನೆಯು ಭಾರತದ ಆದಾಯ ತೆರಿಗೆ ಕಾಯ್ದೆಯ 80 ಸಿ ಸೆಕ್ಷನ್ ಅಡಿ ಬರುತ್ತದೆ. ಒಂದು ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಹಣ ಕಟ್ಟಬಹುದು. ಒಂದು ನಿರ್ದಿಷ್ಟ ವರ್ಷಕ್ಕೆ ಠೇವಣಿ ತಪ್ಪಿಸಿಕೊಂಡರೆ, ಪ್ರತಿ ವರ್ಷ 50 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾಡಲಾಗುವ ಹೂಡಿಕೆಗೆ ವಾರ್ಷಿಕವಾಗಿ ಶೇ. 8ರಷ್ಟು ಬಡ್ಡಿ ನೀಡಲಾಗುತ್ತದೆ

Related News

spot_img

Revenue Alerts

spot_img

News

spot_img