21.1 C
Bengaluru
Monday, December 23, 2024

ವಾಹನ ಸವಾರರಿಗೆ ಮತ್ತೆ ಗುಡ್ ನ್ಯೂಸ್: ದಂಡ ಪಾವತಿಸಲು ಮತ್ತೆ 50% ಡಿಸ್ಕೌಂಟ್

ರಾಜ್ಯದ ವಾಹನ ಸವಾರರಿಗೆ ಇದು ಗುಡ್ ನ್ಯೂಸ್ ಅಷ್ಟೇ ಅಲ್ಲ. ಅದಕ್ಕಿಂತ ಹೆಚ್ಚಿನ ಖುಷಿ ಕೊಡುವ ಸಂಗತಿ ಎಂದರೆ ತಪ್ಪಾಗುವುದಿಲ್ಲ. ರಾಜ್ಯದಲ್ಲಿ ಪಾವತಿಯಾಗದ ಸಂಚಾರಿ ದಂಡವನ್ನು ಸಂಗ್ರಹಿಸಲು ಶೇ.50 ರಷ್ಟು ರಿಯಾಯಿತಿ ಅನ್ನು ನೀಡಲಾಗಿತ್ತು. ಇದರಿಂದ ಹಲವು ವರ್ಷಗಳಿಂದ ಬಾಕಿ ಇದ್ದ ದಂಡದ ಮೊತ್ತ ಬರೋಬ್ಬರಿ 152 ಕೋಟಿ ರೂಪಾಯಿಯನ್ನು ಕೇವಲ 9 ದಿನಗಳಲ್ಲಿ ಸಂಗ್ರಹಿಸಲಾಗಿತ್ತು. ಈ ಡಿಸ್ಕೌಂಟ್ ಅನ್ನು ಇನ್ನಷ್ಟು ದಿನಗಳಿಗೆ ವಿಸ್ತರಿಸುವಂತೆ ಕೇಳಲಾಗಿತ್ತು. ಇದೀಗ ಪುನಃ 15 ದಿನಗಳ ಕಾಲ ವಿಸ್ತರಿಸಲಾಗಿದೆ. ಇದು ಸಾರ್ವಜನಿಕರಿಗೆ ಗುಡ್ ನ್ಯೂಸ್ ಅಲ್ಲದೇ ಮತ್ತೇನು ಅಲ್ಲವೇ..? ಹಾಗಾದರೆ ಯಾವತ್ತಿನಿಂದ ಮತ್ತೆ ಡಿಸ್ಕೌಂಟ್ ಶುರುವಾಗುತ್ತೆ..? ಎಷ್ಟು ದಿನಗಳ ಕಾಲ ಇರುತ್ತೆ ಎಂಬುದನ್ನು ತಿಳಿಯೋಣ ಬನ್ನಿ.

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ ಪ್ರಸ್ತವನೆಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ ಪ್ರಕರಣಗಳ ದಂಡ ಪಾವತಿ ಮೇಲೆ 50% ರಿಯಾಯಿತಿ ನೀಡಿತ್ತು. ಫೆಬ್ರವರಿ 02 ರಂದು ಈ ಆದೇಶವನ್ನು ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಫೆಬ್ರವರಿ 03 ರಿಂದ ದಂಡ ಪಾವತಿ ಪ್ರಕ್ರಿಯೆ ಆರಂಭವಾಗಿ ಫೆಬ್ರವರಿ 11ರವರೆಗೆ ಸಮಯ ನೀಡಲಾಗಿತ್ತು. ಈ ಮೂಲಕ ಬಾಕಿ ಉಳಿದಿದ್ದ ಲಕ್ಷಾಂತರ ಪ್ರಕರಣಗಳು ಇತ್ಯರ್ಥವಾಗಿದ್ದು ರಿಯಾಯಿತಿ ಪ್ಲಾನ್ ಯಶಸ್ವಿಯಾಗಿತ್ತು. ಹೀಗಾಗಿ ಹಲವರು ಮತ್ತೆ ಈ ರಿಯಾಯಿತಿಯ ಸಮಯವನ್ನು ವಿಸ್ತರಣೆ ಮಾಡುವಂತೆ ಕೇಳಲಾಗಿತ್ತು.

ಈ ರಿಯಾಯಿತಿ ಅನ್ನು ಸರ್ಕಾರ ಪುನಃ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ರಿಯಾಯಿತಿ ಅವಧಿ ಇಂದಿನಿಂದ ಪ್ರಾರಂಭವಾಗಿದೆ. ಮಾರ್ಚ್ 4 ರಿಂದ 15 ದಿನಗಳ ಕಾಲ ಈ ರಿಯಾಯಿತಿಯನ್ನು ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯ ಸಂಚಾರ ಪೊಲೀಸ್ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಾರ್ವಜನಿಕರು ದಂಡ ಪಾವತಿಸಬಹುದು. ಆನ್ ಲೈನ್ ಮೂಲಕ ದಂಡ ಪಾವತಿಸಲು ಆಸಕ್ತಿ ತೋರುತ್ತಿರುವ ಜನರು ಪೇಟಿಎಂ ನಲ್ಲೂ ಸಹ ದಂಡ ಪಾವತಿಸಲು ಅವಕಾಶವಿದೆ.

Related News

spot_img

Revenue Alerts

spot_img

News

spot_img