22.9 C
Bengaluru
Friday, July 5, 2024

ರಾಜ್ಯದಲ್ಲೇ ಕಾವೇರಿ.2 ತಂತ್ರಾಂಶದ ಮೊದಲನೆ ದಸ್ತಾವೇಜು ನೋಂದಣಿ ಕಲಬುರಗಿ ಯ ಚಿಂಚೋಳಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ

ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ದಸ್ತಾವೇಜು ನೋಂದಣಿಯ ತಂತ್ರಾಂಶದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯಾಗಿದೆ , ಅದು ಇಂದು ರಾಜ್ಯದಲ್ಲೇ ಮೊದಲನೇ ಬಾರಿಗೆ “ಸೂಫಿ ನಗರ” ಕಲಬುರಗಿಯ ಚಿಂಚೋಳಿ ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ಕಾವೇರಿ.2 ತಂತ್ರಾಂಶದಿಂದ ಮೊದಲನೆ ದಸ್ತಾವೇಜು ನೋಂದಣಿಯಾಗಿದೆ.

ಸಬ್ ರಿಜಿಸ್ಟ್ರಾರ್ ಕಛೇರಿಗಳಲ್ಲಿ ದಲ್ಲಾಳಿಗಳ ಹಾವಳಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ತ್ವರಿತಗತಿಯಲ್ಲಿ ಸೇವೆ ನೀಡಲು ಕಾವೇರಿ 2.0 ತಂತ್ರಾಂಶ ಅಳವಡಿಸಲು ಕಳೆದ ನವೆಂಬರ್ ನಲ್ಲಿ ಕಂದಾಯ ಇಲಾಖೆ ಆದೇಶ ಹೊರಡಿಸಿತ್ತು, ಅದರ ಪ್ರಾಯೋಗಿಕ ಯೋಜನೆಯ ಅಂಗವಾಗಿ ಇಂದು ಅದು ತನ್ನ ಮೊದಲನೇ ದಸ್ತಾವೇಜು ನೋಂದಣಿ ಮಾಡಿಕೊಂಡಿದೆ.

ಪಾಸ್ಪೋರ್ಟ್ ಮಾದರಿಯ ಸೇವೆ ಒದಗಿಸಲು ಸಬ್ ರಿಜಿಸ್ಟ್ರಾರ್ ಕಛೇರಿಗಳಲ್ಲಿ ಈ ಹೊಸ ಕಾವೇರಿ 2.0 ತಂತ್ರಾಂಶವನ್ನು ಬಳಸಬಹುದಾಗಿದೆ. ರಾಜ್ಯದಲ್ಲಿ 260 ಸಬ್ ರಿಜಿಸ್ಟ್ರಾರ್ ಕಛೇರಿಗಳಿದ್ದು, ದಿನಕ್ಕೆ ಸುಮಾರು 10,000 ಕ್ಕೂ ಅಧಿಕ ದಾಖಲೆ ಪತ್ರಗಳನ್ನು ನೋಂದಣಿಮಾಡಬಹುದಾಗಿದೆ.

ತ್ವರಿತಗತಿಯ ಸೇವೆಗಾಗಿ ಕಾವೇರಿ 2.0 ತಂತ್ರಾಂಶ ಅಳವಡಿಸಲಾಗಿದೆ. ಆನ್ಲೈನ್ ನಲ್ಲಿ ಸೇವೆಯ ಕಾರಣ ಅಧಿಕಾರಿಗಳಿಗೆ ಲಂಚ ಕೊಡುವಂತಿಲ್ಲ. ಸಬ್ ರಿಜಿಸ್ಟ್ರಾರ್ ಕಛೇರಿಗಳಲ್ಲಿ ದಲ್ಲಾಳಿಗಳ ಹಾವಳಿಗೆ ಬ್ರೇಕ್ ಹಾಕಬಹುದಾಗಿದೆ. ದಿನವಿಡೀ ಕಛೇರಿ ಎದುರು ಕಾಯುವ ಬದಲು ನಿಗದಿತ ಸಮಯಕ್ಕೆ ಹೋಗಿ ನೋಂದಣಿ ಮಾಡಿಸಕೊಳ್ಳಬಹುದಾಗಿದೆ.

ಏಜೆಂಟರ ಸಹಾಯ ಅಗತ್ಯ ಇರುವುದಿಲ್ಲ. ಕಛೇರಿಗಳಿಗೆ ಅಲೆದಾಟ ತಪ್ಪಲಿದೆ. ಸರ್ವರ್ ಸಮಸ್ಯೆಯೂ ಬಗೆಹರಿಯಲಿದ್ದು,ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ ಮಾಡುತ್ತಿದ್ದವರಿಗೆ ಕಡಿವಾಣ ಬೀಳಲಿದೆ. ಫೆಬ್ರವರಿ 2 ರಿಂದ ರಾಜ್ಯದ ಮೈಸೂರು, ರಾಮನಗರ,ಮಂಗಳೂರು, ಬೆಳಗಾವಿ,ಚಿಂಚೋಳಿ, ಮಂಡ್ಯ ದಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಿದ್ದು, ಕಲಬುರಗಿಯ ಚಿಂಚೋಳಿ ಸಬ್-ರಿಜಿಸ್ಟ್ರಾರ್ ಕಛೇರಿಯಲ್ಲಿ ಕಾವೇರಿ.2 ತಂತ್ರಾಂಶದಿಂದ ಮೊದಲನೆ ದಸ್ತಾವೇಜು ನೋಂದಣಿಯಾಗಿದೆ.

ಸಾಕಷ್ಟು ಅಧ್ಯಯನದ ನಂತರ ಈ ತಂತ್ರಾಂಶ ಅಳವಡಿಸಲಾಗುತ್ತಿದೆ. ಇದರಿಂದ ಕೇಲವ ನಿಮಿಷಗಳಲ್ಲಿ ನೋಂದಣಿ ಸೇವೆ ಪಡೆಯಬಹುದು. ನೋಂದಣಿ ಸೇವೆ ಪಡೆಯಹುದು. ನೋಂದಣಿ ಪತ್ರಗಳನ್ನು ದಾಖಲೆ ಪತ್ರಗಳನ್ನು ಜನರಿಗೆ ಕೊಡುವುದಿಲ್ಲ. ಅವುಗಳ ಕೋಡ್ ನಂಬರ್ ಕೊಡಲಾಗುತ್ತದೆ. ಕೋಡ್ ನಂಬರ್ ಬಳಸಿ ದೃಢೀಕೃತ ದಾಖಲೆ ಡೌನ್ಲೋಡ್ ಮಾಡಿಸಿಕೊಳ್ಳಬಹುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

Related News

spot_img

Revenue Alerts

spot_img

News

spot_img